ಈದ್ ಉಲ್ ಫಿತರ್ ಸಂಭ್ರಮ
ಕನ್ನಡಪ್ರಭ ವಾರ್ತೆ , ಮುದಗಲ್ , ಆ.9
ಪಟ್ಟಣದಲ್ಲಿ ರಂಜಾನ್ ಹಬ್ಬವನ್ನು ಮುಸ್ಲಿಮರು ಸಡಗರ, ಸಂಭ್ರಮದಿಂದ ಆಚರಿಸಿದರು. ಸತತ ತಿಂಗಳ ಪರ್ಯಂತ ಉಪವಾಸ ಮಾಡಿದ್ದ ಬಾಂಧವರು ಸಂಭ್ರಮಿಸಿದರು.
ಬೆಳಗ್ಗೆ 10.30ಕ್ಕೆ ಸ್ಥಳೀಯ ಬಾಗಲಕೋಟ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಪಟ್ಟಣದ ಸಾವಿರಾರು ಮುಸ್ಲಿಂ ಭಾಂದವರು ಪ್ರಾರ್ಥನೆ ಸಲ್ಲಿಸಿದರು. ಮೌಲಾನಾ ಜಮೀರ್ ಆಹ್ಮದ್ ಖಾಜಿ ಕುರಾನ್ ಪಠಣ ಮಾಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಇದೇ ವೇಳೆ ಶ್ರೀಮಂತರು ಬಡವರಿಗೆ ಜಕತ್ ನೀಡಿದರೆ, ಪ್ರತಿಯೊಬ್ಬರು ಫಿತ್ರಾ ನೀಡಿದರು. ರಂಜಾನ್ ತಿಂಗಳಲ್ಲಿ ಉಪವಾಸ ಇದ್ದು, ದೇವರಿಗೆ ಪ್ರಾರ್ಥನೆ ಸಲ್ಲಿಸಿ ಕೊನೆಯ ದಿನವಾದ ಇಂದು ರಂಜಾನ್ ವಿಶೇಷ ಪ್ರಾರ್ಥನೆ ಮಾಡಿದರು.
ಪೊಲೀಸ್ ಬಂದೋಬಸ್ತ್: ಮುಖಂಡರಾದ ಎಂ.ಡಿ.ರಜಾಕ್, ಸೈಯ್ಯದ್ ಸಾಬ್, ಅಮೀರ್‌ಬೇಗ್ ಉಸ್ತಾದ, ಎಸ್.ಎ.ಮುಬಿನ್ ಸಾಬ್, ಪಪಂ ಸದಸ್ಯರಾದ ಖಾಜಾಪಾಷಾ, ಎಂ.ಡಿ. ಸಾದಿಕ್ ಅಲಿ, ಮುಖಂಡರಾದ ಎಸ್.ಆರ್. ರಸೂಲ್, ಚಂದಾವಲಿ, ಸೈಯ್ಯದ್ ಯಾಸಿನ್‌ಖಾದ್ರಿ ಸೇರಿದಂತೆ ಸಾವಿರಾರು ಮುಸ್ಲಿಮರು ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು. ಈದ್ಗಾ ಮೈದಾನಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ನೀಡಲಾಗಿತ್ತು.
ಡಿವೈಎಸ್ಪಿ ಸೂರ್ಯವಂಶಿ, ಸಿಪಿಐ ಲಕ್ಷ್ಮೀನಾರಾಯಣ, ಪಿಎಸ್‌ಐ ಪಿ.ಎಸ್. ಹೀರೇಮಠ ಉಪಸ್ಥಿತರಿದ್ದರು. ಪ್ರಾರ್ಥನೆ ಮುಗಿಯುತ್ತಿದ್ದಂತೆ ಮುಸ್ಲಿಮರು ರಂಜಾನ್ ಶುಭಾಶಯ ಹಂಚಿಕೊಂಡರು.
ಹಿಂದೂಗಳಿಗೂ ಶುಭಾಶಯ: ಈದ್ಗಾ ಮೈದಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಬಂದಂತೆ ಎಲ್ಲ ಮುಸ್ಲಿ ಭಾಂದವರಿಗೆ ಹಿಂದೂ ಸಮಾಜದ ಗಣ್ಯರು, ಕೆಪಿಸಿಸಿ ಸದಸ್ಯ ಶರಣಗೌಡ ಪಾಟೀಲ್ ಬಯ್ಯಾಪುರ, ಪಪಂ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ರಾಮಣ್ಣ ಹಿರೇಮನಿ, ಮುಖಂಡರಾದ ಸುರೇಶಗೌಡ ಪಾಟೀಲ್, ಮಹಾಂತೇಶ ಪಾಟೀಲ್, ಷಣ್ಮುಕಪ್ಪ ಚಲುವಾದಿ, ಪಪಂ ಸದಸ್ಯ ವೀರೇಶ ವಡ್ಡರ, ಹೇಮಂತ ನಾಗಲಾಪೂರ ಮುಂತಾದವರು ಪರಸ್ಪರ ಶುಭಾಷಯ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

