ನ್ಯಾಯಾಲಯ ಆದೇಶ ಉಲ್ಲಂಘನೆ: ಕ್ರಮಕ್ಕೆ ಆಗ್ರಹಿಸಿ ಸಚಿವರಿಗೆ ಮನವಿ
ಸಿಂಧನೂರು: ತುಂಗಭದ್ರ ಎಡದಂಡೆ ನಾಲೆಯ 40ನೇ ವಿತರಣಾ ಕಾಲುವೆಯಡಿಯಲ್ಲಿ ವಿವಿಧ ತೂಬುಗಳಿಗೆ ನೀರಾವರಿ ಇಲಾಖೆಯ ನಿಗದಿತ ವ್ಯಾಸದ ಪೈಪುಗಳನ್ನು ಬದಲಿಸಿ ಇಲಾಖೆಯ ನಿಯಮದಂತೆ ಪೈಪುಗಳನ್ನು ಅಳವಡಿಸುವಂತೆ ರಾಜ್ಯ ಉಚ್ಛ ನ್ಯಾಯಾಲಯ ಆದೇಶ ನೀಡಿದ್ದರೂ ನೀರಾವರಿ ಅಧಿಕಾರಿಗಳು ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ದೊಡ್ಡ ವ್ಯಾಸವುಳ್ಳ ಪೈಪುಗಳನ್ನು ಅಳವಡಿಸಲು ಅನುಕೂಲ ಮಾಡಿಕೊಟ್ಟಿದ್ದಾರೆ. ಅವುಗಳನ್ನು ತಕ್ಷಣ ಬದಲಾಯಿಸುವಂತೆ 44ನೇ ವಿತರಣಾ ಕಾಲುವೆಯ ಕೆಳಭಾಗದ ರೈತರು ತಹಸೀಲ್ದಾರ್ ಮುಖಾಂತರ ನೀರಾವರಿ ಸಚಿವರಿಗೆ ಮನವಿಯನ್ನು ಸಲ್ಲಿಸಿದರು.
ಮುಖಂಡರಾದ ಕೆ. ಕರಿಯಪ್ಪ, ಬಾಷುಮಿಯಾ ಕುಷ್ಟಗಿ, ಬಾಬಾ ಪಟೇಲ್, ಮಾಬುಸಾಬ, ಶಾಂತಯ್ಯ ಸ್ವಾಮಿ, ವೀರೇಶ ಮೈಲಾರ, ಅಯ್ಯಪ್ಪ, ಶರಣಪ್ಪ, ಅಮರೇಶ ಮೈಲಾರ, ಭದ್ರಪ್ಪ, ಶಾಂತಯ್ಯಸ್ವಾಮಿ, ಮೌಲಾಸಾಬ, ರುಕ್ಮುದ್ದೀನ್, ಹುಸೇನಸಾಬ, ದುರುಗಪ್ಪ, ಮಲ್ಲಯ್ಯ, ಆರೀಫ್ ಸಾಬ್, ಆದಪ್ಪ ಮತ್ತಿತರ ನೂರಾರು ರೈತರು ಭಾಗವಹಿಸಿದ್ದರು.
--
ಮೂಲಸೌಲಭ್ಯ ಕಲ್ಪಿಸಲು ಒತ್ತಾಯ
ರಾಯಚೂರು: ನಗರದ ಪೊಲೀಸ್ ವಸತಿ ಗೃಹಗಳು ಹಾಗೂ ವಾಸವಿ ನಗರದಲ್ಲಿನ ಸರ್ಕಾರಿ ವಸತಿ ಗೃಹಗಳಿಗೆ ಮೂಲಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಜೈಕರವೇ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಈ ವೇಳೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ, ಜಿಲ್ಲೆಯ ರಾಯಚೂರು ನಗರ ಮತ್ತು ತಾಲೂಕು ಸೇರಿ ವಿವಿಧೆಡೆಯಿರುವ ಪೊಲೀಸ್ ಸಿಬ್ಬಂದಿಯ ವಸತಿ ಗೃಹಗಳ ಪ್ರದೇಶದಲ್ಲಿ ಮೂಲಸೌಲಭ್ಯಗಳ ಕೊರತೆಯಿದೆ.
ಅದರಿಂದ ಸಿಬ್ಬಂದಿಯ ಕುಟುಂಬದವರು ಸಂಕಷ್ಟದಲ್ಲಿಯೇ ಜೀವನ ನಡೆಸುವಂತಾಗಿದೆ ಎಂದು ಆರೋಪಿಸಿದರು.ವಿದ್ಯುದೀಪ, ಶೌಚಾಲಯ, ಒಳಚರಂಡಿ ವ್ಯವಸ್ಥೆ ಸೇರಿ ಅನೇಕ ಸೌಲಭ್ಯಗಳು ಈ ಪ್ರದೇಶಗಳಲ್ಲಿಲ್ಲ. ಮಳೆ ಸುರಿದಾಗಲೆಲ್ಲ ಚರಂಡಿ ನೀರು ಮನೆಗಳ ಸುತ್ತಲೂ ಸೇರಿ ಅನಾರೋಗ್ಯಕರ ಪರಿಸರ ನಿರ್ಮಾಣವಾಗುತ್ತಿದೆ. ಕಾರಣ ಕೂಡಲೇ ಈ ಎರಡೂ ಪ್ರದೇಶಗಳಲ್ಲಿರುವ ಮನೆಗಳಿಗೆ ಮೂಲಸೌಲಭ್ಯ ಕಲ್ಪಿಸಲು ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಶರಣಪ್ಪ ಅಸ್ಕಿಹಾಳ್, ಟಿ. ನರಸಪ್ಪ, ಎಂ. ವಸಂತಕುಮಾರ್, ಶರಣಬಸವ ಸೇರಿದಂತೆ ಅನೇಕರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

