ರಾಯಚೂರು

'ವ್ಯಕ್ತಿತ್ವದ ಬೆಳವಣಿಗೆಗೆ ಶಿಕ್ಷಣ ಪೂರಕವಾಗಲಿ'

Published On :

ಕನ್ನಡಪ್ರಭ ವಾರ್ತೆ, ಸಿಂಧನೂರು, ಆ.13
ಆಧುನಿಕ ಯುಗದಲ್ಲಿ ಉದ್ಯೋಗಕ್ಕಾಗಿ ಶಿಕ್ಷಣ ಪಡೆಯುವಂತ ಸ್ಥಿತಿ ನಿರ್ಮಾಣವಾಗಿದ್ದು, ಇಂತಹ ಮನೋಭಾವನೆ ದೂರಾಗಿ ಶಿಕ್ಷಣ ಜ್ಞಾನಾರ್ಜನೆ ಹಾಗೂ ವ್ಯಕ್ತಿತ್ವದ ವಿಕಸನಕ್ಕೆ ಪೂರಕವಾಗುವಂತಾಗಬೇಕು ಎಂದು ಕನಕದಾಸ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಗೂ ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ ಹೇಳಿದರು.
ತುರ್ವಿಹಾಳ ಗ್ರಾಮದಲ್ಲಿ ಕನಕದಾಸ ಪದವಿ ಪೂರ್ವ ಕಾಲೇಜಿನ ಸ್ವಾಗತ ಸಮಾರಂಭದಲ್ಲಿ ಮಾತನಾಡಿ, ತಂದೆ- ತಾಯಿ ಒತ್ತಾಯಕ್ಕೆ ಮಣಿದು ಶಿಕ್ಷಣ ಪಡೆಯುವಂತಾಗಬಾರದು. ಸ್ವಾಭಿಮಾನಕ್ಕಾಗಿ ತಮ್ಮ ತಮ್ಮನ್ನು ತಾವು ಈ ದೇಶಕ್ಕೆ ಅರ್ಪಿಸಿಕೊಂಡವರು ಎಲ್ಲರ ಮಾರ್ಗದರ್ಶಿಗಳಾಗಬೇಕು. ಜ್ಞಾನ ವೃದ್ಧಿಸುವುದೇ ಶಿಕ್ಷಣ ಸಂಸ್ಥೆಯ ಉದ್ದೇಶ. ಸಂಸ್ಥೆ ನಮ್ಮದು ಎನ್ನುವ ಭಾವನೆಯೊಂದಿಗೆ ಮುನ್ನಡೆಯಬೇಕು. ಸಂಸ್ಥೆಯ ಜೊತೆಯಲ್ಲಿ ತಂದೆ- ತಾಯಿಯವರ ಹೆಸರು ತರುವ ಕೆಲಸವಾಗಬೇಕು. ಮುಂದಿನ ದಿನಗಳಲ್ಲಿ ವಿಜ್ಞಾನ ವಿಭಾಗ ಪ್ರಾರಂಭಿಸುವ ಚಿಂತನೆ ನಡೆದಿದೆ. ಗ್ರಾಮೀಣ ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಶ್ರಮಿಸಬೇಕಿದೆ ಎಂದರು.
ಕಾರ್ಯಕ್ರಮ ಉದ್ದೇಶಿಸಿ ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಎಂ. ದೊಡ್ಡಬಸವರಾಜ, ಜಿಪಂ ಸದಸ್ಯೆ ಬಸಮ್ಮ ಕುಂಟೋಜಿ, ಪರೀಶಪ್ಪ ಸಾಹುಕಾರ ಮಾತನಾಡಿದರು. ಮಾದಯ್ಯಸ್ವಾಮಿ ಸಾನಿಧ್ಯ ವಹಿಸಿದ್ದರು. ಕನಕದಾಸ ಶಿಕ್ಷಣ ಸಂಸ್ಥೆ ಗೌರವಾಧ್ಯಕ್ಷ ಮಲ್ಲನಗೌಡ, ಶಂಕರಗೌಡ ಮಾ.ಪಾ, ಎಪಿಎಂಸಿ ಮಾಜಿ ಉಪಾಧ್ಯಕ್ಷ ಫಾರೂಕಸಾಬ ಖಾಜಿ, ಉಮ್ಮರ್‌ಸಾಬ, ಲಿಂಗಪ್ಪ ಗೋಸ್‌ಬಾಲ್, ಗ್ರಾಪಂ ಉಪಾಧ್ಯಕ್ಷ ಕರಿಯಪ್ಪ, ಬಸವರಾಜ ಹಂಪನಾಳ, ಶೇಕರಪ್ಪ ರಾರಾವಿ, ಅಬುತರಾಬ್ ತಿರ್ವಿ ಹಾಳ, ಬಾಲಪ್ಪ ಕುಂಟೋಜಿ, ಯಲ್ಲಪ್ಪ ಆನೆಗುಂದಿ, ಪ್ರಾಚಾರ್ಯ ವಿರುಪಾಕ್ಷಪ್ಪ ಗಚ್ಚಿನಮನಿ, ಗದ್ದೆಪ್ಪ, ಆಂಗ್ಲ ಉಪನ್ಯಾಸಕ ಮರೇಗೌಡ, ಶೇಖರಗೌಡ ದೇವರಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.