ರಾಯಚೂರು

ಶರಣರ ವಚನಗಳು ಬಾಳಿಗೆ ದಾರಿದೀಪ: ಪತ್ತಾರ

Published On :

ಸಿಂಧನೂರು: ತನು ಮತ್ತು ಮನದಲ್ಲಿ ಭಗವಂತನನ್ನು ಕಾಣುವ ವಿಶೇಷ ತತ್ವವನ್ನು ಬೋಧಿಸಿರುವ ವಚನಕಾರರು ಸಕಲ ಮನುಷ್ಯ ಕುಲದ ಬಾಳಿಗೆ ದಾರಿದೀಪವಾಗಿದ್ದಾರೆಂದು ಶ್ರೀಶೈಲ ಪತ್ತಾರ ಅಭಿಪ್ರಾಯಪಟ್ಟರು.
ನಗರದ ಅಮರೇಶ ಮತ್ತು ಲಕ್ಷ್ಮೀ ದಂಪತಿಗಳ ನಿವಾಸದಲ್ಲಿ ಬಸವಕೇಂದ್ರ, ಯುವಬಸವಕೇಂದ್ರ ಮಂಗಳವಾರ ಹಮ್ಮಿಕೊಂಡಿದ್ದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಉಳ್ಳವರು ಶಿವಾಲಯ ಮಾಡುವರು ನಾನೇನು ಮಾಡಲಯ್ಯ ಬಡವನೆಂಬ ಬಸವಣ್ಣನವರ ವಚನವನ್ನು ವಿಶ್ಲೇಷಿಸಿದ ಅವರು ಕಲ್ಲು ದೇವರು, ಮರದೇವರು ಸುತ್ತುವುದನ್ನು ಬಿಟ್ಟು ಲಿಂಗಾಂಗ ಸಾಮರಸ್ಯದಲ್ಲಿ ಭಗವಂತನನ್ನು ಕಾಣಬೇಕು ಎಂದರು. ಪತ್ರಕರ್ತ ಡಿ.ಎಚ್. ಕಂಬಳಿ ಮಾತನಾಡಿ, ಮಾನವೀಯತೆ ಎಲ್ಲ ತತ್ವಗಳಿಗಿಂತ ಮಿಗಿಲಾದದ್ದು. ಅದನ್ನು ಎಲ್ಲರೂ ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಬಸವಕೇಂದ್ರದ ಅಧ್ಯಕ್ಷ ಗುಂಡಪ್ಪ ಬಳಿಗಾರ, ಮುಖಂಡರಾದ ಎಚ್.ಜಿ. ಹಂಪಣ್ಣ, ಕರೇಗೌಡ ಕುರಕುಂದಿ, ಶಾಂತಪ್ಪ ಚಿಂಚರಕಿ, ಪಂಪಣ್ಣ ಹಳ್ಳಿ, ವೀರಭದ್ರಗೌಡ ಅಮರಾಪೂರ, ಆದಪ್ಪ ಚನ್ನಿ, ಅಮರೇಶ ಗುರಿಕಾರ, ಕಾಸಿನಾಥ ಹಡಪದ, ನಿಜಗುಣ ಹಡಪದ, ಸಿದ್ದರಾಮಪ್ಪ ಮುದ್ಲಗುಂಡಿ, ಶರಣೇಗೌಡ ಚಿಂತಮಾನದೊಡ್ಡಿ ಹೆಚ್.ಬಸವರಾಜ ವಕೀಲ, ಚಂದ್ರಶೇಖರ ಯರದಿಹಾಳ ಮತ್ತಿತರರು ಭಾಗವಹಿಸಿದ್ದರು. ನಿಜಗುಣ ಹಡಪದ ವಚನ ಪ್ರಾರ್ಥಸಿದರು. ಕಾಶಿನಾಥ ನಿರೂಪಿಸಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.