ಶುದ್ಧ ನೀರು ಪೂರೈಕೆಗೆ ಸರ್ಕಾರ ಬದ್ಧ
ಕನ್ನಡಪ್ರಭ ವಾರ್ತೆ , ದೇವದುರ್ಗ , ಆ.14
ತಾಲೂಕಿನ ಕೆಲ ಹಳ್ಳಿಗಳ ಜನರು ಇದುವರೆಗೆ ಆರ್ಸೆನಿಕ್ಯುಕ್ತ ನೀರು ಸೇವಿಸುತ್ತಿದ್ದು ರಾಜ್ಯ ಸರ್ಕಾರ ಜನತೆಗೆ ಶುದ್ಧ ಕುಡಿಯುವ ನೀರೊದಗಿಸುವ ಮೂಲಕ ಜನಾರೋಗ್ಯದ ಕಡೆಗೆ ಕಾಳಜಿ ತೋರಿದೆ ಎಂದು ಶಾಸಕ ಎ.ವೆಂಕಟೇಶ ನಾಯಕ ತಿಳಿಸಿದರು.
ತಾಲೂಕಿನ ವಂದಲಿ, ಪಲ್ಕನಮರಡಿ, ದೇವತಗಲ್ ಗ್ರಾಮಗಳಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಎಂಜಿನಿಯರಿಂಗ್ ವಿಭಾಗ ಹಾಗೂ ಸ್ಮಾಟ್ ಆಕ್ವಾ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ವಂದಲಿ ಗ್ರಾಮದಲ್ಲಿ ಇತ್ತೀಚೆಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.
17 ಗ್ರಾಮಗಳಲ್ಲಿ ಅಶುದ್ಧ ಕುಡಿವ ನೀರು: ಎಲ್ಲ ನೀರು ಶುದ್ಧವಲ್ಲ. ಶುದ್ಧ ನೀರು ಸೇವನೆಯಿಂದ ಮಾತ್ರ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ. ಆರ್ಸೆನಿಕ್ ಮತ್ತು ಫ್ಲೋರೈಡ್ಯುಕ್ತ ನೀರು ಸೇವನೆಯಿಂದ ತಾಲೂಕಿನ ಜನತೆ ತೊಂದರೆ ಅನುಭವಿಸುತ್ತಿದ್ದರು. ತಾಲೂಕಿನ ವಂದಲಿ, ಊಟಿ, ಸುಣ್ಣದಕಲ್, ಪಲ್ಕನಮರಡಿ, ದೇವತಗಲ್, ಗಲಗ, ಆಲ್ಕೋಡ, ಅರಕೇರಾ, ಮಾನಸಗಲ್, ನಿಲುವಂಜಿ, ಗೂಗಲ್, ಮಾತಪಳ್ಳಿ, ಸೂಗುರಾಳ, ಭೂಮನಗುಂಡ, ಕ್ಯಾದಿಗ್ಗೇರಾ, ಗುಂಡಗುರ್ತಿ, ಕುರ್ಕಿಹಳ್ಳಿ, ಸೇರಿದಂತೆ 17 ಹಳ್ಳಿಗಳಲ್ಲಿ ಜನರು ಸೇವಿಸುವ ಕೊಳವೆಬಾವಿಯ ನೀರು ಕಲುಷಿತ ಎಂಬುದು ಸಾಬೀತಾಗಿದೆ ಎಂದು ಹೇಳಿದರು.
ಈ ಹಿನ್ನೆಲೆ ಗ್ರಾಮಗಳಿಗೆ ನೀರು ಶುದ್ಧೀಕರಣ ಘಟಕ ಸ್ಥಾಪನೆಗೆ ಮುಂದಾಗಿದೆ. ಜನತೆಗೆ ಶುದ್ಧ ಕುಡಿಯುವ ನೀರೊದಗಿಸಲಾಗುತ್ತಿದೆ ಎಂದು ಹೇಳಿದರು.
ಮಾಜಿ ವಿಧಾನ ಪರಿಷತ್ ಸದಸ್ಯ ಬಸವರಾಜ ಪಾಟೀಲ್ ಇಟಗಿ ಮಾತನಾಡಿದರು. ಜಿಪಂ ಸದಸ್ಯ ಶಿವಣ್ಣ ತಾತಾ ಮುಂಡರಗಿ, ದೇವದುರ್ಗ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮನಗೌಡ ನಾಗಡದಿನ್ನಿ, ಬಸ್ಸಯ್ಯ ಶಾಖೆ, ಎಪಿಎಂಸಿ ಮಾಜಿ ಉಪಾಧ್ಯಕ್ಷ ಮಲ್ಲಣಗೌಡ ಗುಂಡಗುರ್ತಿ, ಗ್ರಾಪಂ ಅಧ್ಯಕ್ಷೆ ಹನ್ಮಂತಿ, ಉಪಾಧ್ಯಕ್ಷ ಬಸವರಾಜ ಸಾಹುಕಾರ, ಚನ್ನಬಸವ ಪಲ್ಕನಮರಡಿ, ಡಾ. ವಿಠ್ಠಲ್ ಉದಗಟ್ಟಿ, ಜಿಪಂ ಎಇಇ ದ್ವಾರಕನಾಥ, ವೀರಯ್ಯ ಸ್ವಾಮಿ, ಡಾ. ವಿ.ಎ. ಮಾಲಿಪಾಟೀಲ್, ಪಿಎಸ್ಐ ದಾದಾವಲಿ ಸೇರಿ ಅನೇಕರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

