ಜಿಲ್ಲಾದ್ಯಂತ ಜಡಿ ಮಳೆ
ಕನ್ನಡಪ್ರಭ ವಾರ್ತೆ , ರಾಯಚೂರು , ಆ.16
ನಗರ ಸೇರಿದಂತೆ ಜಿಲ್ಲಾದ್ಯಂತ ಗುರುವಾರ ರಾತ್ರಿಯಿಂದೀಚೆಗೆ ಸತತ ಜಡಿ ಮಳೆ ಸುರಿದಿದ್ದು, ಅತೀ ಹೆಚ್ಚು ಮಳೆ ಮಾನವಿ ತಾಲೂಕಿನ ಸಿರವಾರದಲ್ಲಿ 60.2 ಮಿಮೀ.ನಷ್ಟು ಬಿದ್ದಿದೆ.
ನಗರದಲ್ಲಿ ಗುರುವಾರ ರಾತ್ರಿಯಿಂದ ಶುಕ್ರವಾರ ಸಂಜೆಯವರೆಗೆ ಜಿಟಿಜಿಟಿ ಮಳೆ ಬಿಡದೇ ಸುರಿದಿದ್ದರಿಂದ ಜನಜೀವನ ಅಸ್ತವ್ಯಸ್ತವಾಯಿತು. ನಗರದ ಅನೇಕ ಕಡೆ ವಿದ್ಯುತ್ ಕೈಕೊಟ್ಟಿದ್ದರಿಂದ ಜನತೆ ಪರದಾಡುವಂತಾಯಿತು. ನಗರದ ರಸ್ತೆಗಳಲ್ಲಿನ ತಗ್ಗುಗಳಲ್ಲಿ ಮಳೆಯ ನೀರು ನಿಂತಿದ್ದರಿಂದ ವಾಹನಗಳ ಸವಾರರು ಪ್ರಯಾಸಪಡುತ್ತಲೇ ಸಾಗುವಂತಾಯಿತು.
ಮಳೆ ಪ್ರಮಾಣ: ನಗರದಲ್ಲಿ ಶುಕ್ರವಾರ ಬೆಳಗ್ಗೆವರೆಗೆ 9.8 ಮಿಮೀ ಮಳೆಯಾಗಿದೆ. ತಾಲೂಕಿನ ಯರಮರಸ್ನಲ್ಲಿ 8.9 ಮಿಮೀ, ಯರಗೇರಾ- 20 ಮಿಮೀ, ಗಿಲ್ಲೆಸ್ಗೂರು- 30 ಮಿಮೀ, ಕಲ್ಮಲಾ-13 ಮಿಮೀ, ಜೇಗರಕಲ್- 8.4 ಮಿಮೀ, ಗಾಜರಾಳ- 13.2 ಮಿಮೀ, ದೇವಸೂಗೂರು- 6.8 ಮಿಮೀ, ಚಂದ್ರಬಂಡಾ- 5 ಮಿಮೀ ಮಳೆಯಾಗಿದೆ.
ಮಾನವಿಯಲ್ಲಿ 37 ಮಿಮೀ, ಆ ತಾಲೂಕಿನ ಕಲ್ಲೂರು- 30 ಮಿಮೀ, ಕುರ್ಡಿ- 50.8 ಮಿಮೀ, ಸಿರವಾರ-60.2 ಮಿಮೀ, ಕವಿತಾಳ- 48 ಮಿಮೀ, ಮಲ್ಲಟ- 8 ಮಿಮೀ, ಪಾಮನಕಲ್ಲೂರು- 29.9 ಮಿಮೀ, ರಾಜಲಬಂಡಾ- 22 ಮಿಮೀ, ಹಾಲಾಪುರ- 6.02 ಮಿಮೀ ಮಳೆಯಾಗಿದೆ.
ದೇವದುರ್ಗದಲ್ಲಿ 6.2 ಮಿಮೀ, ಅರಕೇರಾ-53.6 ಮಿಮೀ, ಗಬ್ಬೂರು-12 ಮಿಮೀ, ಗಲಗ- 48 ಮಿಮೀ, ಜಾಲಹಳ್ಳಿ- 48 ಮಿಮೀ ಮಳೆಯಾಗಿದೆ. ಲಿಂಗಸ್ಗೂರು ಪಟ್ಟಣದಲ್ಲಿ 20 ಮಿಮೀ, ಹಟ್ಟಿ- 49 ಮಿಮೀ, ಮಸ್ಕಿ-24.2 ಮಿಮೀ, ಮುದಗಲ್-52.2 ಮಿಮೀ ಮಳೆಯಾಗಿದೆ.
ಸಿಂಧನೂರುನಲ್ಲಿ 25.2 ಮಿಮೀ, ಜವಳಗೇರಾ- 34.8 ಮಿಮೀ, ಬಳಗಾನೂರು- 17 ಮಿಮೀ, ತುರ್ವಿಹಾಳ-10 ಮಿಮೀ, ಗುಡದೂರು- 23.8 ಮಿಮೀ, ವಲ್ಕಂದಿನ್ನಿ- 27 ಮಿಮೀ, ಗುಂಜಳ್ಳಿ- 15.2 ಮಿಮೀ, ಜಾಲಿಹಾಳ- 17.2 ಮಿಮೀ, ಹೆಡಗಿನಾಳದಲ್ಲಿ 18.2 ಮಿಮೀ ಮಳೆಯಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

