ಸುದ್ದಿ ಸಂಕ್ಷೇಪ
ಚರಂಡಿ ಮುಚ್ಚಿ ನಾಗರಿಕರಿಗೆ ತೊಂದರೆ
ಸಿಂಧನೂರು: ತಾಲೂಕಿನ ಬಸಾಪೂರ.ಕೆ. ಗ್ರಾಮದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಸಾರ್ವಜನಿಕ ನೀರು ಹರಿದು ಹೋಗುವ ಚರಂಡಿಯನ್ನು ಮುಚ್ಚಿರುವುದರಿಂದ ಮಳೆ ನೀರು ಹರಿದು ಹೋಗಲು ತೊಂದರೆಯಾಗಿದೆ. ರಸ್ತೆಯೆಲ್ಲಾ ನೀರು ನಿಂತು ಓಡಾಟಕ್ಕೆ ವ್ಯತ್ಯಯ ಉಂಟಾಗಿದೆ. ಕಾರಣ ಸಾರ್ವಜನಿಕ ಸಂಚಾರಕ್ಕೆ ತೊಂದರೆ ಉಂಟು ಮಾಡಿರುವ ವ್ಯಕ್ತಿಯ ವಿರುದ್ದ ಕ್ರಮ ಕೈಗೊಂಡು ಚರಂಡಿ ನೀರು ಹರಿದು ಹೋಗಲು ಅನುಕೂಲ ಮಾಡಿಕೊಡುವಂತೆ ಬಸಾಪೂರ ಗ್ರಾಮ ಪಂಚಾಯತಿ ಅಧ್ಯಕ್ಷ ಮತ್ತು ಅಭಿವೃದ್ಧಿ ಅಧಿಕಾರಿಯವರು ತಹಶೀಲ್ದಾರ ಬಿ.ಟಿ. ಕುಮಾರಸ್ವಾಮಿಯವರಿಗೆ ಮನವಿ ಸಲ್ಲಿಸಿದ್ದಾರೆ. ಬಸಾಪೂರ ಗ್ರಾಮದ ಅಮರಪ್ಪ ಮೇಟಿ ಅವರು ಅನಧಿಕೃತವಾಗಿ ಮನೆ ನಿರ್ಮಾಣ ಮಾಡಿಕೊಂಡಿರುವುದು ಅಲ್ಲದೇ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿದ್ದಾರೆ. ಸಾರ್ವಜನಿಕರು ತಿಳಿಸಿದ್ದರೂ, ಚರಂಡಿ ನೀರು ಹರಿಯಲು ಬಿಡದೆ ಅಡ್ಡಗಟ್ಟಿದ್ದಾರೆಂದು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ತಹಸೀಲ್ದಾರರ ಗಮನ ಸೆಳೆದಿದ್ದಾರೆ.
ವಿದ್ಯುತ್ ಸೌಲಭ್ಯಕ್ಕೆ ಒತ್ತಾಯಿಸಿ ಮನವಿ
ಸಿಂಧನೂರು: ತಾಲೂಕಿನ ತಿಡಿಗೋಳ, ನಿಡಿಗೋಳ, ತಿಡಿಗೋಳಕ್ಯಾಂಪ, ಹಾಗೂ ಭಾಸ್ಕರ್ ಕ್ಯಾಂಪ್ಗಳಿಗೆ ವಿದ್ಯುತ್ ಸರಬರಾಜು ಮಾಡುವ ಪರಿವರ್ತಕ ಸುಟ್ಟು ಹಲವಾರು ದಿನಗಳಾದರೂ ಪರ್ಯಾಯ ವ್ಯವಸ್ಥೆ ಮಾಡದೇ ಇರುವುದರಿಂದ ಗ್ರಾಮಗಳೆಲ್ಲಾ ಕತ್ತಲೆಯಲ್ಲಿ ಮುಳುಗಿವೆ ಎಂದು ತಾಲೂಕು ದಲಿತ, ಪ್ರಗತಿಪರ ಸಂಘಟನೆಗಳ ಒಕ್ಕೂಟ ತಹಸೀಲ್ದಾರರಿಗೆ ಶನಿವಾರ ಮನವಿ ಸಲ್ಲಿಸಿತು. ವಿದ್ಯುತ್ ಸಮಸ್ಯೆ ತಲೆದೋರಿರುವುದರಿಂದ ಗ್ರಾಮದಲ್ಲಿ ಕುಡಿವ ನೀರಿನ ಸಮಸ್ಯೆ ಉಲ್ಬಣಿಸಿದೆ. ವಿದ್ಯಾರ್ಥಿಗಳ ಅಭ್ಯಾಸ ಸ್ಥಗಿತಗೊಂಡಿದೆ. ಸಮಸ್ಯೆ ನಿವಾರಣೆಗೆ ಹಲವಾರು ಬಾರಿ ಜೂನಿಯರ್ ಎಂಜಿನಿಯರವರಿಗೆ ಮೌಖಿಕವಾಗಿ ತಿಳಿಸಿದರೂ ಪ್ರಯೋಜನವಾಗಿಲ್ಲ. ದಲಿತ ಪರ ಸಂಘಟನೆಗಳ ಅಧ್ಯಕ್ಷ ಆರ್. ಅಂಬ್ರೂಸ್, ಚೌರಪ್ಪ ಜವಳಗೇರಾ, ಪಂಪಾಪತಿ ಗುಡದೂರು, ಸೂಗಪ್ಪ ಹೊಗರನಾಳ, ಶೇಖರಪ್ಪ ತಳವಾರ, ರಾಜಾಸಾಬ, ಈರಣ್ಣ ಹಳ್ಳಿ, ತಿಪ್ಪಣ್ಣ ಬೋವಿ, ರುದ್ರಪ್ಪ ಚೀಕಲಪರ್ವಿ, ಹನುಮಂತಶೆಟ್ಟಿ, ಮಾನಪ್ಪ ಭೋವಿ, ನಾಗರಡ್ಡಿ ಉಪ್ಪಾರ, ಚತ್ರಪ್ಪ ನಾಗಲಾಪೂರ, ಪರಶುರಾಮ ತಲೇಖಾನ್, ವಿರುಪಾಕ್ಷಯ್ಯ ಮೊದಲಾದವರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

