ರಾಯಚೂರು

ಸಿಂಗಾಪುರ ಡಿಸ್ಟಲರಿ ಘಟಕ ಎದುರು ರೈತರ ಪ್ರತಿಭಟನೆ

Published On :

ಸಿಂಧನೂರು: ತಾಲೂಕಿನ ಸಿಂಗಾಪುರ ಹತ್ತಿರದ ತುಂಗಭದ್ರ ನದಿಗೆ ಮದ್ಯಸಾರ ಘಟಕದ ಮೊಲ್ಯಾಸಿಸ್ ನೀರು ನದಿಗೆ ಹರಿಯುತ್ತಿರುವುದರಿಂದ ಆಕ್ರೋಶಗೊಂಡ ಸುತ್ತಮುತ್ತಲ ಗ್ರಾಮದ ನೂರಾರು ರೈತರು ಘಟಕದ ಮುಂದೆ ಧರಣಿ ನಡೆಸಿದ ಘಟನೆ ಶನಿವಾರ ನಡೆಯಿತು.
ಕಳೆದ ಹಲವು ವರ್ಷಗಳಿಂದ ಮದ್ಯಸಾರ ಘಟಕವು ಅನೇಕ ಬಾರಿ ಮೊಲ್ಯಾಸಿಸ್ ನೀರನ್ನು ನದಿಗೆ ಬಿಡುತ್ತಿದ್ದು, ಇದರಿಂದ ಈ ಭಾಗದ ರೈತರು, ಜನತೆ ತುಂಬಾ ತೊಂದರೆ ಎದುರಿಸುವಂತಾಗಿದೆ. ಕಳೆದ ವರ್ಷ ಮದ್ಯಸಾರ ಘಟಕ ನದಿಗೆ ಬಿಟ್ಟ ಮೊಲ್ಯಾಸಿಸ್‌ನಿಂದ ಸಾವಿರಾರು ಜಲಚರಗಳು ಸಾವೀಗಿಡಾಗಬೇಕಾಯಿತು.
ಈಗ ಮತ್ತೆ ನದಿಗೆ ಮೊಲ್ಯಾಸೀಸ್ ನೀರು ಬಿಟ್ಟಿದ್ದು, ಈ ನೀರನ್ನು ಸುಮಾರು 500 ಎಕರೆ ಪ್ರದೇಶಕ್ಕೆ ಬಳಸಿಕೊಳ್ಳಲಾಗಿದೆ. ಇದರಿಂದ ಬೆಳೆ ತುಂಬಾ ನಷ್ಟವಾಗುತ್ತಲಿದೆ. ಅಲ್ಲದೇ ನದಿಗೆ ಈ ಕಲುಷಿತ ನೀರು ಹರಿದಿರುವುದರಿಂದ ನದಿ ದಂಡೆ ಗ್ರಾಮಗಳಿಗೆ ಗಬ್ಬು ವಾಸನೆ ಬೀರುತ್ತಿದೆ. ಸಾವಿರಾರು ಮೀನುಗಳು ಅಸನೀಗಿವೆ. ಈ ಸಮಸ್ಯೆ ನಿವಾರಣೆಗೆ ಕ್ರಮಕೈಗೊಳ್ಳವಂತೆ ರೈತರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಚನ್ನಯ್ಯಸ್ವಾಮಿ, ಅಮರೇಗೌಡ ಪೊ.ಪಾ., ಪಂಪಾಪತಿ ಅಂಗಡಿ, ಶರಣಬಸವ ಬಗ್ಗೂರು, ಜಡಿಯ್ಯಸ್ವಾಮಿ, ವೀರೇಶಪ್ಪಗೌಡ, ಭೀಮರಾಯ, ಮಲ್ಲಯ್ಯ ಕಂಪ್ಲಿ, ಕೃಷ್ಣ ಮಡಿವಾಳ, ಗಂಗಾಧರ, ಅಮರೇಶ ಜಿನ್ನದ್, ಬಸವರಾಜ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.