ಮನೆ ಸುತ್ತ ನೀರು ಹರಿಯಲು ವ್ಯವಸ್ಥೆ ಇರಲಿ
ಸಿಂಧನೂರು: ತಾಲೂಕಿನ ಆರ್.ಎಚ್. ನಂ 5 ರಲ್ಲಿ ಶಂಕಿತ ಡೆಂಘೆ ಜ್ವರ ಪ್ರಕರಣಗಳ ಹಿನ್ನೆಲೆಯಲ್ಲಿ ಜಿಲ್ಲಾ ಮಲೇರಿಯಾ ಅಧಿಕಾರಿ ಡಾ ನರಸಿಂಹಲು ನೇತೃತ್ವದ ವೈದ್ಯರ ತಂಡ ಸಾರ್ವಜನಿಕರಿಗೆ ಜ್ವರದ ಕುರಿತು ಶನಿವಾರ ತಿಳುವಳಿಕೆ ನೀಡಿತು.
ತುರ್ತು ಚಿಕಿತ್ಸೆಯ ಜೊತೆಗೆ ಆರೋಗ್ಯ ಸಿಬ್ಬಂದಿಗಳನ್ನೊಳಗೊಂಡ ತಂಡಗಳ ಮೂಲಕ ಡೆಂಘಿ ಹರಡುವ ಲಾರ್ವಾ ಸರ್ವೆ ಹಾಗೂ ಮನೆಗಳಿಗೆ ಭೇಟಿ ನೀಡಿ ಜ್ವರ ಸಮಿಕ್ಷೆ ಕೈಗೊಳ್ಳಲಾಗಿತ್ತು. ಸಾರ್ವಜನಿಕರು ತಮ್ಮ ಮನೆಯ ಸುತ್ತಲು ಶುಚಿತ್ವ ಹಾಗೂ ನೀರು ಸಂಗ್ರಹಕಗಳನ್ನು ವಾರದಲ್ಲಿ ಒಂದು ಬಾರಿ ಖಾಲಿ ಮಾಡಿಸಿ ತುಂಬುವುದರ ಜೊತೆಗೆ ಮುಚ್ಚಳವನ್ನು ಮುಚ್ಚುಸುವುದಕ್ಕೆ ಮುಂದಾಗಬೇಕು ಎಂದು ಡಾ. ನರಸಿಂಹಲು ಹೇಳಿದರು.
ಸ್ವಚ್ಛತಾ ಕಾರ್ಯ: ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತೆರೆದಿರುವ ತುರ್ತು ಚಿಕಿತ್ಸೆ ಕೇಂದ್ರದ ಕಾರ್ಯ ಪರಿಶೀಲಿಸಿ, ಬಾದರ್ಲಿ ಗ್ರಾಪಂ ಸದಸ್ಯರ ಸಭೆಯನ್ನು ಉದ್ದೇಶಿಸಿ, ಮನೆಯ ಮುಂದೆ ಸುತ್ತಮುತ್ತಲು ನಿಂತ ನೀರು ಇದ್ದಲ್ಲಿ ತಕ್ಷಣ ನೀರು ಹರಿದು ಹೋಗುವಂತೆ ಮಾಡುವುದು, ನೀರಿನ ಟ್ಯಾಂಕ್, ಡ್ರಮ್, ಬ್ಯಾರಲಲ್ಗಳನ್ನು ವಾರಕೊಮ್ಮೆ ಸ್ವಚ್ಛಗೊಳಿಸುವುದು,ಬಿಸಾಡಿದ ತಗಡಿನ ಡಬ್ಬಗಳು, ತೆಂಗಿನ ಚಿಪ್ಪು, ಟಯರ್ ಮುಂತಾದವುಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವುದು, ತೀವ್ರ ರೋಗಪೀಡಿತ ಪ್ರದೇಶದಲ್ಲಿ ಪೇರಿಥ್ರಿಯಂ ಎಕ್ಸ್ಟ್ಯಾಕ್ 2 ಕೀಟನಾಶಕವನ್ನು ಸಿಂಪರಣೆ ಮಾಡಬೇಕು. ಪ್ರಸ್ತುತ ಗ್ರಾಪಂ ವತಿಯಿಂದ ಫಾಗಿಂಗೆ ಕೈಗೊಳ್ಳಲಾಗಿದೆ ಎಂದರು.
ಬಾದರ್ಲಿ ಗ್ರಾಪಂ ಅಧ್ಯಕ್ಷ ಉಪ್ಪಳಪ್ಪ, ಉಪಾಧ್ಯಕ್ಷೆ ಸರಳಾ ಶಿಶುಕುಮಾರ, ಆರ್.ಎಚ್. ನಂ 2 ಪ್ರಾ.ಆ. ಕೇಂದ್ರದ ವೈದ್ಯಾಧಿಕಾರಿ ಡಾ.ಎಸ್.ಎಸ್. ಸುಂಕದ, ಡಾ.ಭಾಸ್ಕರ, ಡಾ. ಶಂಕರಾಚಾರ್ಯ, ಡಾ ಸೌಮ್ಯಶ್ರೀ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಈಶ್ವರ ದಾಸಪ್ಪನವರ, ಬಸಯ್ಯ, ಪಂಚಾಯತ ಅಭಿವೃದ್ಧಿ ಅಧಿಕಾರಿ ಬಸವರಾಜ, ಸದಸ್ಯರಾದ ನಾರದ ಬೈರಾಗಿ, ಅಯ್ಯಪ್ಪ, ವೀರನಗೌಡ, ಮುಖಂಡರಾದ ಸುಮೊಂತೊ ಮಂಡಲ, ಸಪನ ಬಿಸ್ವಾಸ, ಮಧೂಸೂದನ ಹವಾಲ್ದಾರ, ಎಂ.ಟಿ.ಎಸ್. ಎಪ್.ಎ. ಹಣಗಿ, ಎಲ್.ಎಚ್.ವಿ. ಎ.ಐ. ಪಾಟೀಲ್, ಮಹಾಂತೇಶ, ಸರಸ್ವತಿ, ಸೂಗುರಪ್ಪ, ರೇಣುಕ, ಅಸ್ಮತ, ನಳಿನಿ, ರಾಧಾ, ಸುನೀತಾ, ಭಾಗ್ಯ, ಶಾಲಾ ಶಿಕ್ಷಕರು ಹಾಗೂ ತಂಡಗಳಲ್ಲಿ ಕಾರ್ಯನಿರ್ವಹಿಸಿದ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

