ಮಸ್ಕಿ ಶಾಸಕರಿಗೆ ಮನವಿಗಳ ಮಹಾಪೂರ
ಮುದಗಲ್: ಮಸ್ಕಿ ವಿಧಾನಸಭಾ ಕ್ಷೇತ್ರ ತಲೇಖಾನ್ ಗ್ರಾ.ಪಂ. ವ್ಯಾಪ್ತಿಯ ಹಳ್ಳಿಗಳಲ್ಲಿ ಶಾಸಕ ಪ್ರತಾಪಗೌಡ ಪಾಟೀಲರು 2ನೇ ಬಾರಿಗೆ ಶಾಸಕರಾಗಿ ಪುನರ್ ಆಯ್ಕೆಯಾಗಿರುವುದಕ್ಕೆ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಹತ್ತು ಹಲವು ಸಮಸ್ಯೆಗಳಿರು ಮನವಿ ಪತ್ರಗಳ ಮಹಾಪೂರವೇ ಹರಿದುಬಂತು.
ಗ್ರಾ.ಪಂ. ಕೇಂದ್ರದ ಸ್ಥಳ ತಲೇಖಾನ್ದಿಂದ ಶಾಸಕರು ಮತ ಹಾಕಿದ ಮತದಾರ ಪ್ರಭುಗಳಿಗೆ ಕೃತಜ್ಞತೆ ಸಲ್ಲಿಸಲು ಆರಂಭಿಸುತ್ತಿದಂತೆ, ಇತ್ತ ಪಕ್ಷದ ಕಾರ್ಯಕರ್ತರು, ಊರಿನ ಗಣ್ಯರು ರಸ್ತೆ, ಚರಂಡಿ, ಕುಡಿವ ನೀರು, ಮಹಿಳಾ ಶೌಚಾಲಯ, ಆಶ್ರಯ ಮನೆ, ಸಮುದಾಯ ಭವನ, ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷ, ಸಿಸಿ ರಸ್ತೆ ಸೇರಿದಂತೆ ಹತ್ತು ಹಲವು ಸಮಸ್ಯೆಗಳ ಮನವಿ ಪತ್ರ ನೀಡಲು ಮುಗಿಬಿದ್ದರು.
ಯರದೊಡ್ಡಿ, ಯರದೊಡ್ಡಿ ತಾಂಡಾ, ಹಡಗಲಿ ತಾಂಡಾ, ಸೊಂಪೂರ ತಾಂಡಾ, ಹಡಗಲಿ, ವೇಣ್ಯಪ್ಪನ ತಾಂಡಾ, ರಾಮಪ್ಪನ ತಾಂಡಾ, ದೇಸಾಯಿ ಭೂಗಾಪೂರ, ಕಸ್ತೂರ ನಾಯ್ಕ ತಾಂಡಾ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಅಭಿನಂದಲ್ಲಿ ಸಲ್ಲಿಸಿದ ಶಾಸಕ ಪ್ರತಾಪಗೌಡ ಪಾಟೀಲರಿಗೆ ಅಲಲ್ಲಿ ಜನರು ತಂಡೋಪ ತಂಡವಾಗಿ ಬಂದು ಮನವಿಗಳನ್ನು ನೀಡಿದರು. ಆದರೆ ಮನವಿ ಸ್ವೀಕರಿಸುತ್ತಿದ್ದ ಶಾಸಕರು ಅವುಗಳನ್ನು ತಮ್ಮ ಅಪ್ತಸಹಾಯಕ ವೀರೇಶ ಬಳಿಗಾರನಿಗೆ ರವಾನಿಸುತ್ತಿದ್ದರು.
ಗ್ರಾಮೀಣ ಭಾಗದ ಜನರ ಹಲವಾರು ಸಮಸ್ಯೆಗಳ ಮನವಿ ಶಾಸಕರು ಸ್ಪಂದಿಸುವರೇ ಕಾದನೋಡಬೇಕಷ್ಟೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

