ಭಗತ್ ಸಿಂಗ್ ಬಗ್ಗೆ ಹೇಳಿಕೆಗೆ ಖಂಡನೆ
ರಾಯಚೂರು: ಶಹೀದ್ ಭಗತ್ ಸಿಂಗ್ ಹುತಾತ್ಮರಲ್ಲ ಎಂಬ ಹೇಳಿಕೆ ಮೂಲಕ ಕೇಂದ್ರದ ಕಾಂಗ್ರೆಸ್ ಸರ್ಕಾರ ಧೂರ್ತತನ ಪ್ರದರ್ಶಿಸಿದೆ ಎಂದು ಎಸ್ಯುಸಿಐ-ಸಿ ಸಂಘಟನೆ ಖಂಡಿಸಿದೆ. ರಾಷ್ಟ್ರೀಯ ಸ್ವಾತಂತ್ರ್ಯ ಯೋಧರನ್ನು ಕಡೆಗಣಿಸುವ ಕಾಂಗ್ರೆಸ್ ಮತ್ತಿತರೆ ಬಂಡವಾಳಶಾಹಿ ಪಕ್ಷಗಳು ಇಂಥ ಉದ್ಧಟತನದ ನಿಲುವಿನ ವಿರುದ್ಧ ದೇಶಾದ್ಯಂತ ಎಲ್ಲರೂ ಸಿಡಿದೇಳಬೇಕಿದೆ ಎಂದು ಕರೆ ಸಂಘಟನೆಯ ಡಾ.ಸುನೀತ್ ಕುಮಾರ್ ನೀಡಿದ್ದಾರೆ. ದೇಶದ ಎಲ್ಲ ನಿವಾಸಿಗಳು ಶಹೀದ್ ಭಗತ್ ಸಿಂಗ್ ಅವರಿಗೆ ಗೌರವ ಸಲ್ಲಿಸುತ್ತಿದೆ. ಆದರೆ, ಕಾಂಗ್ರೆಸ್ ಸರ್ಕಾರ ಅವರನ್ನು ಹುತಾತ್ಮರಲ್ಲ ಎಂಬ ಹೇಳಿಕೆ ನೀಡಿರುವುದು ಎಷ್ಟು ಸರಿ. ಕೇಂದ್ರದ ಇಂಥ ಅಕ್ಷಮ್ಯ ಹೇಳಿಕೆ ವಿರುದ್ಧ ಕೂಡಲೇ ಜನತೆ ಹೋರಾಟಕ್ಕೆ ಮುಂದಾಗುವಂತೆ ಸಲಹೆ ನೀಡಿದ್ದಾರೆ.
ಸಮಸ್ಯೆಗಳ ಸುಳಿ; ಬಿಸಿಎಂ ಹಾಸ್ಟೆಲ್
ಸಿಂಧನೂರು: ತಾಲೂಕು ಬಿಸಿಎಂ ಹಾಸ್ಟೆಲ್ ಒಕ್ಕೂಟದ ಆರು ಹಾಸ್ಟೆಲ್ಳಲ್ಲಿ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಯಾವೊಂದು ಸಮಸ್ಯೆಗೂ ಪರಿಹಾರ ದೊರೆಯುತ್ತಿಲ್ಲ. ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ಬಾಲಕ-ಬಾಲಕಿಯರ ವಸತಿ ನಿಲಯಗಳಲ್ಲಿ ವಾಸಿಸುವ ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳ ಗೋಳು ಯಾರೂ ಕೇಳುವವರಿಲ್ಲಂತಾಗಿದೆ. ಕಳೆದ ಕೆಲವು ವರ್ಷಗಳಿಂದ ಸಮಸ್ಯೆಗಳನ್ನು ಬಗೆಹರಿಸುವಂತೆ ಅಧಿಕಾರಿಗಳಲ್ಲಿ ಎಷ್ಟೋ ಬಾರಿ ಮನವಿ ಪತ್ರ ಸಲ್ಲಿಸಿದರೂ, ಸಂಬಂಧಪಟ್ಟ ಮೇಲ್ವಿಸ್ತರಣಾಧಿಕಾರಿಗಳಾಗಲಿ, ಕಾರ್ಯನಿರ್ವಾಹಕ ಅಧಿಕಾರಿಗಳಾಗಲಿ (ಇ.ಒ), ಡಿ.ಒ. ಬಿಸಿಎಂ ಅಧಿಕಾರಿಳಿಂದಾಗಲಿ, ತಾಲೂಕಿನ ಶಾಸಕರಿಂದಾಗಲಿ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ಒಕ್ಕೂಟದ ವಿದ್ಯಾರ್ಥಿಗಳು ನೊಂದು ಹೇಳುತ್ತಾರೆ.
ಕಳೆದ ಮೂರು ವರ್ಷಗಳಿಂದ ಸಂಬಂಧಪಟ್ಟ ಇಲಾಖೆಯ ಯಾವೊಬ್ಬ ಅಧಿಕಾರಿಗಳೂ ಹಾಸ್ಟೆಲ್ಗಳಿಗೆ ಭೇಟಿ ನೀಡಿಲ್ಲ. ಈ ರೀತಿಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಳೆದ ವರ್ಷವೇ ವಸತಿ ನಿಲಯದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಪರ್ಯಾಯ ಕಟ್ಟಡ ವ್ಯವಸ್ಥೆ ಇಲ್ಲದ ಕಾರಣ, ಇನ್ನೂ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡಿಲ್ಲ. ಹಾಗೆಯೇ ಕಟ್ಟಡಗಳ ಕೊರತೆ ಹಾಗೂ ಮೆಟ್ರಿಕ್ ಪೂರ್ವ ಬಾಲಕಿಯರಿಗೆ ಪ್ರತ್ಯೇಕ ವಸತಿ ನಿಲಯ ಇಲ್ಲದಿರುವುದು, ಗ್ರಂಥಾಲಯ ಮತ್ತು ಗಣಕ ಯಂತ್ರಗಳ ಸೌಲಭ್ಯ ಕೊರತೆ, ಶುದ್ಧ ಕುಡಿವ ನೀರು, ಗುಣಮಟ್ಟದ ಆಹಾರ ಪೂರೈಕೆ, ಸೋಲಾರ್ ವಿದ್ಯುತ್ ದೀಪದ ಕೊರತೆ ಮುಂತಾದ ಸಮಸ್ಯೆಗಳ ಸುಳಿಯಲ್ಲಿ ವಿದ್ಯಾರ್ಥಿಗಳು ಸಿಲುಕಿ ದಿನಂಪ್ರತಿ ತೊಂದರೆ ಅನುಭವಿಸುತ್ತಿದ್ದಾರೆ. ಅಧಿಕಾರಿಗಳು ಗಮನಹರಿಸದಿದ್ದರೆ ಹೋರಾಟ ಹಮ್ಮಿಕೊಳ್ಳುವುದಾಗಿ ವಿದ್ಯಾರ್ಥಿಗಳು ಎಚ್ಚರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

