ಮಂತ್ರಾಲಯ: ವಿಜೃಂಭಣೆಯ ಶ್ರೀರಾಯರ ಮಧ್ಯಾರಾಧನೆ
ಕ.ಪ್ರ.ವಾರ್ತೆ , ರಾಯಚೂರು , ಆ. 22
ಶ್ರೀಗುರುರಾಯರ ವಾರ ಗುರುವಾರದಂದೇ ಶ್ರೀರಾಘವೇಂದ್ರಸ್ವಾಮಿಗಳ ಮಧ್ಯಾರಾಧನೆ. ವಿವಿಧೆಡೆಯಿಂದ ಹರಿದು ಬಂದ ಭಕ್ತಸಾಗರ. ಭಜನೆ ಸಂಕೀರ್ತನೆ ನಿನಾದ. ಮಂತ್ರಾಲಯದಲ್ಲಿ ಗುರುವಾರ ಮಧ್ಯಾರಾಧನೆ ಸಂದರ್ಭ ಕಂಡುಬಂದ ಚಿತ್ರಣವಿದು.
ಮಂತ್ರಾಲಯದಲ್ಲಿ ಗುರುವಾರ ಶ್ರೀರಾಘವೇಂದ್ರತೀರ್ಥರ 342ನೇ ಆರಾಧನಾ ಮಹೋತ್ಸವದ ಸಂದರ್ಭ ಬೆಳಗ್ಗೆ ನಿರ್ಮಾಲ್ಯ ವಿಸರ್ಜನೆ, ಸುಪ್ರಭಾತ ನಡೆಯಿತು. ಆನಂತರ ಶ್ರೀಸುಯತೀಂದ್ರತೀರ್ಥರ ಸಾನ್ನಿಧ್ಯದಲ್ಲಿ ಕಿರಿಯ ಶ್ರೀಗಳಾದ ಮಹಾ ಪಂಚಾಮೃತ ಅಭಿಷೇಕ ನೆರವೇರಿಸಿದರು.
ನಂತರ ಶ್ರೀಮಠದ ಪ್ರಾಕಾರದಲ್ಲಿ ಶ್ರೀಸುಧಾಗ್ರಂಥ, ಭಾಟ್ಟ ಸಂಗ್ರಹ ಮತ್ತು ಶ್ರೀರಾಮಚರಿತ್ರ ಮಂಜರಿ ಗ್ರಂಥಗಳನ್ನು ನವರತ್ನ ಖಚಿತ ಸ್ವರ್ಣ ರಥದಲ್ಲಿರಿಸಿ ಮೆರವಣಿಗೆ ಮಾಡಲಾಯಿತು. ಈ ವೇಳೆ ಸಾವಿರಾರು ಭಕ್ತರು, ಭಜನಾ ಮಂಡಳಿಗಳ ಸದಸ್ಯರು ದಾಸರ ಪದಗಳಿಗೆ ಹೆಜ್ಜೆ ಹಾಕಿ ನರ್ತಿಸಿದರು. ನಂತರ ಶ್ರೀಮೂಲರಾಮದೇವರ ಸಂಸ್ಥಾನ ಪೂಜೆಯನ್ನು ಶ್ರೀಗಳು ನೆರವೇರಿಸಿ ಭಕ್ತರಿಗೆ ಫಲ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು. ಇದಕ್ಕೂ ಮುನ್ನ ಶ್ರೀಮಠ ಕಿರಿಯ ಶ್ರೀಗಳಾದ ಶ್ರೀಸುಬುಧೇಂದ್ರತೀರ್ಥರು ದಂಡೋದಕ ಸ್ನಾನ ತುಂಗಭದ್ರಾ ನದಿಯಲ್ಲಿ ಬೆಳಗ್ಗೆ 5.30ಕ್ಕೆ ನೆರವೇರಿಸಿದರು. ಈ ಸಂದರ್ಭದಲ್ಲಿ ಶ್ರೀಮಠದ ಸಿಬ್ಬಂದಿ ಸೇರಿ ಅನೇಕ ಭಕ್ತರು ಪಾಲ್ಗೊಂಡಿದ್ದರು.
ಶ್ರೀಮಠದ ಪ್ರಮುಖರಾದ ಶ್ರೀಸುಯಮೀಂದ್ರಾಚಾರ್ಯ, ರಾಜಾ ಎಸ್.ರಾಜಗೋಪಾಲಾಚಾರ್ಯ, ಆನಂದರಾವ್, ಶ್ರೀಪತಿ, ಮಾಧವಶೆಟ್ಟಿ ಸೇರಿ ಅನೇಕರಿದ್ದರು.
ಗುರುವಾರ ಆರಾಧನೆ: ರಾಯರ ವಾರವೆಂದೇ ಖ್ಯಾತಿ ಪಡೆದ ಗುರುವಾರದಂದೇ ಮಧ್ಯಾರಾಧನೆಯಾಗಿದ್ದದ್ದು ಹೆಚ್ಚಿನ ಮಹತ್ವ ಪಡೆದಿತ್ತು. ಪರಿಣಾಮ ಪೂರ್ವಾರಾಧನೆಗಿಂತ ಹೆಚ್ಚಿನ ಸಂಖ್ಯೆಯ ಭಕ್ತರು ದೂರದ ಊರುಗಳಿಂದ ಆಗಮಿಸಿ ಶ್ರೀಮಠ ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಂಡು ಹರಕೆ ಸಲ್ಲಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

