ವಿಶ್ವಕರ್ಮರು ರಾಜಕೀಯ ಪ್ರಗತಿ ಹೊಂದಲಿ: ನಂಜುಂಡಿ
ಕ.ಪ್ರ.ವಾರ್ತೆ ರಾಯಚೂರು ಆ.24
ವಿಶ್ವಕರ್ಮ ಸಮಾಜದ ಲಕ್ಷಾಂತರ ಜನರು ರಾಜ್ಯದಲ್ಲಿದ್ದು, ರಾಜಕೀಯವಾಗಿ ಇನ್ನೂ ಬಲಿಷ್ಠಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಸಮಾಜದ ಎಲ್ಲರೂ ಒಗ್ಗಟ್ಟು ಪ್ರದರ್ಶಿಸಬೇಕಿದೆ ಎಂದು ವಿಶ್ವಕರ್ಮ ಸಮಾಜದ ರಾಜ್ಯಾಧ್ಯಕ್ಷ ಕೆ.ಪಿ.ನಂಜುಂಡಿ ಕರೆ ನೀಡಿದರು.
ನಗರದಲ್ಲಿ ಶನಿವಾರ ಜಿಲ್ಲಾ ವಿಶ್ವಕರ್ಮ ಸಮಾಜದಿಂದ ಆಯೋಜಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಎಲ್ಲ 224 ಕ್ಷೇತ್ರಗಳಿಗೆ ವಿಶ್ವಕರ್ಮ ಸಮಾಜದವರು ಸ್ಪರ್ಧಿಸಬೇಕಿತ್ತು. ಆಗ ಮಾತ್ರ ರಾಜಕೀಯವಾಗಿ ಸಮಾಜದ ಬಲ ಪ್ರದರ್ಶನ ಸಾಧ್ಯವಾಗುತ್ತಿತ್ತು ಎಂದರು.
ವಿಶ್ವಕರ್ಮ ಸಮಾಜವು ಸರ್ಕಾರದ ವಿವಿಧ ಯೋಜನೆಗಳ ಲಾಭದಿಂದ ವಂಚಿತವಾಗಿದೆ. ರಾಜ್ಯ ಸರ್ಕಾರ 33 ಲಕ್ಷ ಜನಸಂಖ್ಯೆಯಿರುವ ವಿಶ್ವಕರ್ಮ ಸಮಾಜದವರನ್ನು ಕಡೆಗಣಿಸಿದೆ. ರಾಜಕೀಯವಾಗಿ ಸಮಾಜದವರು ಬೆಳೆಯಲು ಬಲಿಷ್ಠ ಸಂಘಟನೆ ಅವಶ್ಯಕ ಎಂದರು.
ರಾಜ್ಯದ ಕಾಂಗ್ರೆಸ್ ಸರ್ಕಾರ ವಿಶ್ವಕರ್ಮ ಅಭಿವೃದ್ಧಿ ನಿಗಮ ಸ್ಥಾಪಿಸಿ 5 ಕೋಟಿ ಅನುದಾನ ಒದಗಿಸಿದ್ದನ್ನು ಸ್ವಾಗತಿಸಿದ ಅವರು, ಸಮಾಜದವರು ಕುಲಕಸುಬು ಕೈಗೊಳ್ಳಲು ಶೆಡ್ ಅವಶ್ಯಕತೆಯಿದೆ. ಸರ್ಕಾರ ಇದಕ್ಕಾಗಿ 3 ಲಕ್ಷ ಸಾಲ ಸೌಲಭ್ಯವನ್ನು ಶೇ.50ರಷ್ಟು ಸಬ್ಸಿಡಿ ದರದಲ್ಲಿ ನೀಡಬೇಕಿದೆ ಎಂದು ಒತ್ತಾಯಿಸಿದರು.
ಕಾರ್ಯಕ್ರಮದ ಸಾನ್ನಿಧ್ಯವನ್ನು ಜವಳಗೇರಾ ಪೀಠದ ಸೂರ್ಯನಾರಾಯಣ ಮಹಾಸ್ವಾಮೀಜಿ ವಹಿಸಿದ್ದರು.
ಸಮಾರಂಭದಲ್ಲಿ ವೈ.ಡಿ. ಶ್ರೀನಿವಾಸ್, ಬಸವರಾಜ ಆಚಾರ್ಯ, ಬ್ರಹ್ಮಗಣೇಶ್ ವಕೀಲರು, ಮಾರುತಿ ಬಡಿಗೇರ್, ಸೂಗಪ್ಪ ಆಚಾರ್ಯ, ಅಮರೇಶ್ ಬಡಿಗೇರ್ ಇತರರಿದ್ದರು.
ವಿಶ್ವಕರ್ಮ ಸಮಾಜದ ಜನತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

