ರಾಯಚೂರು

ನಾಮನಿರ್ದೇಶನಕ್ಕೆ ಒತ್ತಾಯಿಸಿ ಮನವಿ

Published On :

ಸಿಂಧನೂರು: ತಾಲೂಕಿನ ಎಪಿಎಂಸಿಗೆ ಶ್ರಮಿಕ ಸಂಘಟನೆಗಳಿಂದ ಜನಸಂಖ್ಯೆಗನುಗುಣವಾಗಿ ಕನಿಷ್ಠ ಇಬ್ಬರು ಶ್ರಮಿಕ ಪ್ರತಿನಿಧಿಗಳನ್ನು ನಾಮನಿರ್ದೇಶಿತ ಸದಸ್ಯರನ್ನಾಗಿ ನೇಮಕ ಮಾಡಿಕೊಳ್ಳಲು ಎಐಟಿಯುಸಿ ನೇತೃತ್ವದ ಹಮಾಲರ ಸಂಘ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಸತಿ ಸಚಿವ ಎಂ.ಎಚ್. ಅಂಬರೀಶ ಅವರಿಗೆ ಮನವಿಪತ್ರ ಸಲ್ಲಿಸಿತು.
ಸರ್ಕಾರ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳ ಮಾದರಿಯಲ್ಲಿ ಈಗಾಗಲೇ ಅಸಂಘಟಿತ ಕಾರ್ಮಿಕರ ಕಲ್ಯಾಣ ಮಂಡಳಿ ರಚಿಸಿದ್ದು, ಅದನ್ನು ಜಾರಿಗೆಗೊಳಿಸಲು ಹಮಾಲರನ್ನು ಈ ಮಂಡಳಿಯಲ್ಲಿ ಸೇರಿಸಿ ಸಾಮಾಜಿಕ ಭದ್ರತೆ, ಆರೋಗ್ಯ ಇನ್ನಿತರ ಸೌಲಭ್ಯಗಳನ್ನು ದೊರೆಯುವಂತೆ ಮಾಡಬೇಕು. ರಾಜೀವ್‌ಗಾಂಧಿ ವಸತಿ ಯೋಜನೆಯಡಿ ಈ ಮೊದಲಿನಂತೆ ಎಪಿಎಂಸಿ ಕಡೆಯಿಂದ ಮನೆಗಳನ್ನು ನೀಡಬೇಕು, ಶೇ.25ರಷ್ಟು ಸಹಾಯಧನ ನೀಡಬೇಕು, ಹಮಾಲರು ಸ್ವಾಭಾವಿಕ ಅಥವಾ ಅಪಘಾತದಿಂದ ಮರಣಹೊಂದಿದರೆ, 2.50 ಲಕ್ಷ ವಿಮಾ ಯೋಜನೆ ಅಳವಡಿಸಬೇಕು, ಮರಣಹೊಂದಿದವರ ಶವ ಸಂಸ್ಕಾರಕ್ಕೆ ಹತ್ತು ಸಾವಿರ ನೀಡಬೇಕು, ಈಗಾಗಲೇ ಸರ್ವೇ ನಂ.9,1 ಹೊಸಲಾಪುರ.ಡಿ.ನಲ್ಲಿ 127 ನಿವೇಶನಗಳ ನೀಲನಕ್ಷೆ ತಯಾರಾಗಿದ್ದು, ಆ ನಿವೇಶನಗಳನ್ನು ಹಮಾಲರಿಗೆ ಕೂಡಲೇ ಹಂಚಿ ಮನೆಗಳನ್ನು ನಿರ್ಮಾಣ ಮಾಡಬೇಕೆಂಬ ಬೇಡಿಕೆ ಸೇರಿದಂತೆ ಪ್ರಮುಖ 15 ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ತಾಲೂಕು ಅಧ್ಯಕ್ಷ ಬಾಷುಮಿಯಾ, ಕಾರ್ಯದರ್ಶಿ ಶರಣಪ್ಪ ಗೊರೇಬಾಳ, ಗೌರವಾಧ್ಯಕ್ಷ ವೆಂಕನಗೌಡ ಗದ್ರಟಗಿ, ಬಾಷುಸಾಬ ಕಿಡದೂರು, ಅಲ್ಲಾವಲಿ, ಹನುಮಂತಪ್ಪ ಹಂಚಿನಾಳ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.