ಡೆಂಘೀ ನಿಯಂತ್ರಣಕ್ಕೆ ಮುಂಜಾಗ್ರತೆ ಅಗತ್ಯ
ಸಿಂಧನೂರು: ಸಾರ್ವಜನಿಕರು ಶಂಕಿತ ಡೆಂಘೀ ಜ್ವರ ಪ್ರಕರಣಗಳ ಹಿನ್ನಲೆಯಲ್ಲಿ ಅನಗತ್ಯ ಭಯ ಪಡದೆ ಗ್ರಾಮದಲ್ಲಿ ಮುಂಜಾಗ್ರತ ಕ್ರಮವಾಗಿ ಆರಂಭಿಸಿರುವ ವೈದ್ಯರ ನೇತೃತ್ವದ ತುರ್ತು ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆಯನ್ನು ಪಡೆಯುವುದರ ಜೊತೆಗೆ ಸಾರ್ವಜನಿಕರು ಗ್ರಾಮದಲ್ಲಿ ಶುಚಿತ್ವಕ್ಕೆ ಒತ್ತು ನೀಡಲು ಸಹಕರಿಸಬೇಕು ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ. ಸೈಯದ್ ಹಸನ್ ಹುಸೇನ ಹೇಳಿದರು.
ಲಾರ್ವಾ ಸರ್ವೆ ತಂಡ: ಮುಳ್ಳೂರು ಇ.ಜೆ ಗ್ರಾಮದಲ್ಲಿ ಶಂಕಿತ ಡೆಂಘೀ ಜ್ವರದಿಂದ ಮಹಿಳೆಯೊಬ್ಬರು ಮೃತಪಟ್ಟ ಕುರಿತು ಪರಿಶೀಲಿಸಲಾಗಿ ಅಧಿಕೃತವಾಗಿ ಡೆಂಘೀ ಜ್ವರದಿಂದ ಮರಣ ಹೊಂದಿರುವುದಿಲ್ಲವೆಂಬುದು ಕಂಡುಬಂದಿದೆ. ಮುಂಜಾಗ್ರತ ಕ್ರಮವಾಗಿ ಗ್ರಾಮದಲ್ಲಿ ಕಂಡುಬಂದಿರುವ ವೈರಲ್ ಜ್ವರ ಪ್ರಕರಣಗಳ ಹಿನ್ನೆಲೆಯಲ್ಲಿ 3ಜನ ವೈದ್ಯಾಧಿಕಾರಿಗಳು 2 ಶೂಶ್ರೂಷಕಿಯರು ಕಾರ್ಯನಿರ್ವಹಿಸುತ್ತಿದ್ದು, ಸ್ಥಳದಲ್ಲಿಯೇ ಚಿಕಿತ್ಸೆಯನ್ನು ಮುಂದುವರೆಸಿದ್ದು ಹೆಚ್ಚಿನ ಚಿಕಿತ್ಸೆಗೆ ಮಾತ್ರ ಮೇಲ್ಮಟ್ಟದ ಆಸ್ಪತ್ರೆಗೆ ಕಳುಹಿಸಿಕೊಡಲಾಗುತ್ತಿದೆ. 4 ತಂಡಗಳ ಮೂಲಕ ಡೆಂಘೀ ಹರಡುವ ಲಾರ್ವಾ ಸರ್ವೆ ತಂಡ ಕಾರ್ಯನಿರ್ವಹಿಸುತ್ತಿದೆ.
ಶಂಕೀತರ ರಕ್ತ ಮಾದರಿ: 3ತಂಡಗಳು ಮನೆಗಳಿಗೆ ಭೇಟಿ ನೀಡಿ ಜ್ವರ ಸಮೀಕ್ಷೆ ಕೈಗೊಳ್ಳುತ್ತಿವೆ. ಗ್ರಾಪಂ ವತಿಯಿಂದ ಫಾಗಿಂಗ್ ಕೈಗೊಳ್ಳಲಾಗಿದೆ. ಜಿಲ್ಲಾ ತಂಡದಿಂದ ಲಾರ್ವಾ ಪರೀಕ್ಷೆ ಹಾಗೂ ಶಂಕಿತರ ರಕ್ತ ಮಾದರಿ ಪರೀಕ್ಷೆಗಾಗಿ ಪಡೆದುಕೊಳ್ಳಲಾಗುತ್ತಿದೆ. ಒಟ್ಟು 95 ಜನರ ಆರೋಗ್ಯ ಪರೀಕ್ಷಿಸಿ 10 ಜನರ ರಕ್ತ ಮಾದರಿಯನ್ನು ಪಡೆಯಲಾಗಿದ್ದು, 33 ರಕ್ತ ಲೇಪನಗಳನ್ನು ಸಂಗ್ರಹಿಸಲಾಗಿದೆ ಎಂದು ತಿಳಿಸಿದರು.
ಜಿಪಂ ಸದಸ್ಯರಾದ ಚಂದುಸಾಬ ಮುಳ್ಳೂರು, ಗ್ರಾಪಂ ಅಧ್ಯಕ್ಷರಾದ ಹೇಮಮ್ಮ ದೇವಪ್ಪ, ಮುಖಂಡರಾದ ಶಿವಪ್ಪ, ಪಾಲಾಕ್ಷಿಗೌಡ ಹನುಮೇಶ ನಾಯಕ್, ಅಂಬಣ್ಣ, ಬಸವರಾಜ ಅರಳಹಳ್ಳಿ, ದೇವಪ್ಪ, ಸಿದ್ದಪ್ಪ ಹಾಗೂ ವೈದ್ಯಾಧಿಕಾರಿಗಳಾದ ಡಾ. ಬಸವರಾಜ, ಡಾ. ಬಾಸ್ಕರ್, ಡಾ ಶಂಕರಾಚಾರ್ಯ, ಬಿ.ಹೆಚ್.ಇ.ಓ ಈಶ್ವರ ದಾಸಪ್ಪನವರ, ಜಿಲ್ಲಾ ಕೀಟ ಶಾಸ್ತ್ರಜ್ಞ ಪರುಷರಾಮ ನಾಯಕ, ಜಿಲ್ಲಾ ಎಫಿಡಮಾಲಜಿಸ್ಟ್ ಡಾ ಪ್ರಕಾಶ, ಜಿಲ್ಲಾ ಪ್ರ.ಶಾ. ತಂತ್ರಜ್ಞ ಮಥೀನ್, ಎಲ್.ಎಚ್.ವಿ ಎ.ಐ. ಪಾಟೀಲ್, ಗ್ರಾಪಂ ಅಭಿವೃದ್ಧಿ ಅಧಿಕಾರಿ ಸಿದ್ದಪ್ಪ, ಮುಖ್ಯಗುರು ಸುರೇಶ ಕುಲ್ಕರ್ಣಿ, ಬಿಲ್ ಕಲೆಕ್ಟರ್ ಬಸವರಾಜ ಆರೋಗ್ಯ ಸಿಬ್ಬಂದಿ ಸಿದ್ದರಾಮೇಶ್. ನಂದಕುಮಾರಿ, ಮಂಜುಳಾ, ರೇಣುಕಾ, ಗುರುರಾಜಮ್ಮ, ಭಾರ್ಗವಿ, ಫಕರುಲ್, ರೇಷ್ಮಾ, ಜಯಶ್ರೀ, ದುರ್ಗಾ, ವಿರುಪಾಕ್ಷಮ್ಮ, ಸಂತೋಷಮ್ಮ, ಮುಂತಾದವರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

