ಸುದ್ದಿ ಸಂಕ್ಷೇಪ
ಕಸಾಯಿಖಾನೆಗೆ ಭೂಮಿ: ಅರ್ಜಿ ಸಲ್ಲಿಸಲು ಮನವಿ
ಲಿಂಗಸ್ಗೂರು: ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಕಸಾಯಿಖಾನೆ (ಸ್ಲಾಟರ್ ಹೌಸ್) ನಿರ್ಮಿಸಲು ಭೂಮಿ ಬೇಕಾಗಿದ್ದು, ಭೂ ಮಾಲೀಕರು ಸೆ.5ರಂದು ಸಂಜೆ 4 ಗಂಟೆಯೊಳಗೆ ಪುರಸಭೆ ಮುಖ್ಯಾಧಿಕಾರಿಗಳಿಗೆ ಸಲ್ಲಿಸಬೇಕೆಂದು ಪುರಸಭೆ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ. ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಕಸಾಯಿ ಖಾನೆ ನಿರ್ಮಿಸಲು 4 ಎಕರೆ ಭೂಮಿ ಬೇಕಾಗಿದ್ದು, ಸರ್ಕಾರದ ಸುತ್ತೋಲೆ ಪ್ರಕಾರ, ನಿಗದಿಪಡಿಸಿದ ದರದಂತೆ ಖರೀದಿಸಲಾಗುವುದು. ಭೂ ಮಾಲೀಕರ ಜಾಗವಿರುವ ಪ್ರದೇಶ ಪಟ್ಟಣದಿಂದ 5 ಕಿಮೀ ದೂರದಲ್ಲಿರಬೇಕು. ಭೂಮಿಯ ಅಕ್ಕಪಕ್ಕ ಕಾಲುವೆ, ಕೆರೆ ಇರಬಾರದು. ಅಂತಹ ಸೂಕ್ತ ಭೂಮಿ ಇದ್ದಲ್ಲಿ ಪಹಣಿ ಹಾಗೂ ಭೂ ಮಾಲೀಕರು ಕೊಡುವ ದರವನ್ನು ಅರ್ಜಿಯಲ್ಲಿ ನಮೂದಿಸಿ ಮುಖ್ಯಾಧಿಕಾರಿ ಹೆಸರಲ್ಲಿ ಸಲ್ಲಿಸತಕ್ಕದ್ದು. ಹೆಚ್ಚಿನ ಮಾಹಿತಿಗಾಗಿ ಕಾರ್ಯಾಲಯದಲ್ಲಿ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.
'ನೈತಿಕ ಮೌಲ್ಯ ಮೈಗೂಡಿಸಿಕೊಳ್ಳಿ'
ಸಿಂಧನೂರು: ವಿದ್ಯಾರ್ಥಿ ಜೀವನದಲ್ಲಿ ನೈತಿಕ ಮೌಲ್ಯಗಳನ್ನು ಮೈಗೂಡಿಸಿ ಕೊಳ್ಳುವಂತೆ ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಅಧ್ಯಕ್ಷೆ ಪರ್ವಿನ್ ಜಹಾನ್ ಸಲಹೆ ನೀಡಿದರು. ನಗರದ ಗಿರಿಜಾ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸ್ವಾಗತ ಸಮಾರಂಭದಲ್ಲಿ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ನೈತಿಕ ಮತ್ತು ಮಾನವೀಯ ಮೌಲ್ಯ ಕುಸಿಯುತ್ತಿವೆ. ದೈವಿಕ ಭಾವನೆ ಕಡಿಮೆ ಆಗುತ್ತಿರುವುದೇ ಕಾರಣ ಎಂದರು. ಮುಖ್ಯಅತಿಥಿ ಸಲೀಮಾಬೇಗಂ, ಪುಸ್ತಕದ ಅಭಿರುಚಿಯ ಮಹತ್ವ ಕುರಿತು ಉಪನ್ಯಾಸ ನೀಡಿದರು. ಗಿರಿಜಾ ಮಹಿಳಾ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಶರಣಮ್ಮ ವಿದ್ಯಾರ್ಥಿಗಳು ಉನ್ನತ ಗುರಿ ಹೊಂದಿ ಅಭ್ಯಾಸದಲ್ಲಿ ತೊಡಗುವಂತೆ ಸಲಹೆ ನೀಡಿದರು. ಬುಶರಾ ಪರ್ವಿನ್ ನಿರೂಪಿಸಿ, ಸುಮಯ ವಂದಿಸಿದರು.
ಸಪ್ತ ಭಜನೆ ಕಾರ್ಯಕ್ರಮ ಮುಕ್ತಾಯ
ಸಿಂಧನೂರು: ತಾಲೂಕಿನ ಸಂಕನಾಳದಟಿಲ್ಲಿ ಲೋಕ ಕಲ್ಯಾಣಾರ್ಥವಾಗಿ ಕಳೆದ ವರ್ಷದಿಂದ ಶ್ರಾವಣ ಮಾಸದಲ್ಲಿ ಸಪ್ತ ಭಜನೆ ಕಾರ್ಯಕ್ರಮ ನಡೆಸಲಾಗುತ್ತಿದೆ. 7 ದಿನಗಳವರಿಗೆ ಅಹೋ ರಾತ್ರಿ ನಡೆಯುವ ಸಪ್ತ ಭಜನೆ ಮಾಡುವ ಮೂಲಕ ಸಂಕನಾಳ ಗ್ರಾಮದ ಶಿವನಮರಡಿ ಹನುಮಂತನ ಗವಿ ಗುಡ್ಡದಲ್ಲಿ ಶಿವನನ್ನು ಸ್ಮರಿಸಲಾಯಿತು. ಸೋಮವಾರ ಶ್ರೀಶೈಲ ಪೀಠದ ರಾಚೊಟೇಶ್ವರಸ್ವಾಮಿಗಳ ಮತ್ತು ಅಭಿನವ ಬಸವರಾಜೇಂದ್ರ ಸ್ವಾಮಿಗಳು ಪಟ್ಟದಕಲ್ಲು ಹಂಸನೂರು, ತಲೇಖಾನ್ ನೇತೃತ್ವದಲ್ಲಿ ಸತ್ಸಂಗ, ಸಪ್ತ ಭಜನೆ ನೆರವೇರಿತು ಎಂದು ಸಮಿತಿಯ ಸದಸ್ಯ ಹನುಮಂತಪ್ಪ ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಅಭಿನವ ಬಸವರಾಜೇಂದ್ರ ಸ್ವಾಮಿಗಳು ಮಾತನಾಡಿದರು. ಏಳು ದಿನದ ಕಾರ್ಯಕ್ರಮದಲ್ಲಿ ಶಿವಾನಂದ ಸ್ವಾಮಿಗಳು ಸಂಕನಾಳ, ಸಾನಿಧ್ಯ ವಹಿಸಿದ್ದರು. ಈ ಸಂದರ್ಭದಲ್ಲಿ ಸಂಕನಾಳ, ರತ್ನಾಪೂರ, ಗೊಲ್ಲರಟ್ಟಿ, ಮಾಹಾಂಪೂರ, ಗುಂಡಾ, ಗ್ರಾಮದ ಭಕ್ತರು ಭಾಗವಹಿಸಿದ್ದರು ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

