ಲಭ್ಯತೆಗೆ ತಕ್ಕಂತೆ ನೀರು ಬಳಕೆಗೆ ಕರೆ
ರಾಯಚೂರು: ರಾಜೋಳಿ ಬಂಡಾ ತಿರುವು ಯೋಜನೆಯ ಮುಖ್ಯ ಕಾಲುವೆ ಮೈಲು ಸೊನ್ನೆಯಿಂದ 27 ರವರೆಗಿನ ವ್ಯಾಪ್ತಿಯ ವಿವಿಧ ಉಪಕಾಲುವೆಗಳ ಅಡಿಯ ಅಚ್ಚುಕಟ್ಟು ಪ್ರದೇಶದಲ್ಲಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಬೆಳೆಗಳಿಗೆ ಜು.27 ರಿಂದ ನವೆಂಬರ್ವರೆಗೆ ನೀರು ಲಭ್ಯವಾಗಲಿದ್ದು, ಲಭ್ಯತೆಗೆ ತಕ್ಕಂತೆ ಬೆಳೆ ಬೆಳೆಯಲು ನೀರಾವರಿ ಇಲಾಖೆ ಮನವಿ ಮಾಡಿದೆ. ಬೆಳೆಗಳಿಗೆ ನವೆಂಬರ್ ಅಂತ್ಯದವರೆಗೆ ಇಲ್ಲವೇ ಅಣೆಕಟ್ಟೆಯಲ್ಲಿ ನೀರಿನ ಲಭ್ಯತೆಗೆ ಅನುಗುಣವಾಗಿ ಕಾಲುವೆಯಲ್ಲಿ ನೀರು ಸರಬರಾಜು ಮಾಡಲಾಗುತ್ತದೆ. ಪ್ರಸಕ್ತ ಸಾಲಿನಲ್ಲಿ ಮಿತ ಬೆಳೆಗಳನ್ನು ಮಾತ್ರ ಬೆಳೆಯಲು ಕಾರ್ಯಪಾಲಕ ಎಂಜಿನಿಯರ್ ಎಚ್. ಜನಾರ್ದನ್ ವಿನಂತಿಸಿದ್ದಾರೆ. ಭತ್ತ, ಇನ್ನಿತರ ಹೆಚ್ಚು ನೀರು ಬೇಡುವ ಬೆಳೆಗಳನ್ನು ಬೆಳೆದಲ್ಲಿ ಮುಂದಿನ ದಿನಗಳಲ್ಲಿ ನೀರಿನ ಅಭಾವ ಉಂಟಾದಲ್ಲಿ ಇಲಾಖೆಯು ಯಾವುದೇ ರೀತಿಯಿಂದ ಹೊಣೆಯಾಗದು ಎಂದು ತಿಳಿಸಿದ್ದಾರೆ.
'ಲೋಕಾ' ದಾಳಿ:
ಪ್ರಕರಣ ದಾಖಲು
ರಾಯಚೂರು: ವ್ಯಕ್ತಿಯೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದ ಔಷಧ ನಿಯಂತ್ರಣಾಧಿಕಾರಿ ಕಚೇರಿಯ ಇಬ್ಬರು ಸಿಬ್ಬಂದಿ ಲೋಕಾಯುಕ್ತರ ಬಲೆಗೆ ಶನಿವಾರ ಬಿದ್ದಿದ್ದಾರೆ. ಸ್ಥಳೀಯ ಔಷಧ ನಿಯಂತ್ರಣಾಧಿಕಾರಿ ಕಚೇರಿ ಸಹಾಯಕ ಔಷಧ ನಿಯಂತ್ರಣಾಧಿಕಾರಿ ಗೋಪಾಲ ಭಂಡಾರಿ, ಇನ್ಸ್ಪೆಕ್ಟರ್ ಮಂಜುನಾಥ್ ಜಿಲ್ಲಾ ಲೋಕಾಯುಕ್ತರ ದಾಳಿ ವೇಳೆ ಸಿಲುಕಿ ಬಿದ್ದಿದ್ದಾರೆ. ಇವರು ಮಾನವಿ ತಾಲೂಕಿನ ಸಿರವಾರ ಗ್ರಾಮದ ಶರಣ ಬಸವ ಎಂಬುವವರಿಂದ 13 ಸಾವಿರ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ಸ್ವಚ್ಛತೆಗೆ ನಗರಸಭೆ
ನಿರ್ಲಕ್ಷ್ಯ: ಆರೋಪ
ರಾಯಚೂರು: ನಗರದ ಮಾವಿನಕೆರೆ ಪ್ರದೇಶದಲ್ಲಿರುವ ಶೌಚಾಲಯ ನಿರ್ವಹಣೆಯಲ್ಲಿ ನಗರಸಭೆಯು ನಿರ್ಲಕ್ಷ್ಯ ತೋರಿದ್ದು, ಸ್ವಚ್ಛತೆ ಕೈಗೊಳ್ಳುವಂತೆ ಜಯ ಕರ್ನಾಟಕ ಸಂಘಟನೆ ಒತ್ತಾಯಿಸಿದೆ.
ಬಾಲಕಿ ಸಾವು
ರಾಯಚೂರು: ಲಿಂಗಸ್ಗೂರು ತಾಲೂಕಿನ ಮಸ್ಕಿಯ ಬಳಿ ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಆಕಸ್ಮಿಕವಾಗಿ ಬಿದ್ದು ಅಕ್ಷತಾ (13) ಮೃತಪಟ್ಟಿದ್ದಾಳೆ. ತಾಯಿಯೊಂದಿಗೆ ಬಟ್ಟೆ ತೊಳೆಯಲು ತೆರಳಿದ್ದಳು. ನೀರಿನಲ್ಲಿ ಕೊಚ್ಚಿ ಹೋಗಿ ನವಲಕಲ್ ಬಳಿಯ ಉಪಕಾಲುವೆಯಲ್ಲಿ ಶವ ಪತ್ತೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

