ರಾಯಚೂರು

ಹೊಸ ಪಿಂಚಣಿ ಯೋಜನೆ ರದ್ದತಿಗೆ ಆಗ್ರಹ

Published On :

ಕನ್ನಡಪ್ರಭ ವಾರ್ತೆ ಟಿ ಸಿಂಧನೂರು ಟಿ ಆ.31
ಪ್ರಸ್ತುತ ರಾಜ್ಯ ಸರ್ಕಾರವು ಜಾರಿಗೊಳಿಸಿದ ಹೊಸ ಪಿಂಚಣೆ ಯೋಜನೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಶನಿವಾರ ಪ್ರತಿಭಟನೆ ಮೆರವಣಿಗೆ ನಡೆಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ನಂತರ ಸಂಘದ ಅಧ್ಯಕ್ಷ ವಿರುಪಾಕ್ಷಪ್ಪ ಮಾತನಾಡಿ, ಕೇಂದ್ರ ಸರ್ಕಾರ 2004ರಲ್ಲಿ ಸಂಸತ್ತಿನಲ್ಲಿ ಹಳೇ ಪಿಂಚಣಿ ಯೋಜನೆಯನ್ನು ಪ್ರಾರಂಭಿಸಿ ನೌಕರರ ಮೂಲ ವೇತನವನ್ನು ಮತ್ತು ತುಟ್ಟಿ ಭತ್ಯೆಯಲ್ಲಿ ಶೇ. 10ರಷ್ಟು ಕಡಿಮೆ ಮಾಡಿ ಮುಂದೆ ಅದೇ ಹಣಕ್ಕೆ ಶೇ. 10ರಷ್ಟು ಹಣವನ್ನು ನೀಡಿ, ನಿವೃತ್ತರಾಗುವ ವೇಳೆಗೆ ಶೇ. 60ರಷ್ಟು ಹಣವನ್ನು ವಾಪಸ್ ನೀಡಲು ತೀರ್ಮಾನಿಸಿತು. ಉಳಿದ ಹಣವನ್ನು ಮಾಸಿಕ ಕಂತುಗಳಲ್ಲಿ ನೀಡುವುದಾಗಿ ಹೇಳಿ ಹೊಸ ಪಿಂಚಣಿಯ ಯೋಜನೆಯನ್ನು ಪ್ರಾರಂಭಿಸಿತು. ಈ ಯೋಜನೆ ರೇಲ್ವೆ ಇಲಾಖೆ ಹಾಗೂ ಸೈನಿಕರಿಗೆ ಹೊರತುಪಡಿಸಿ ಜಾರಿಯಾದ ಯೋಜನೆಯಾಗಿದೆ.
ನೌಕರರಿಗೆ ಸಂಕಷ್ಟ: ರಾಜ್ಯ ಸರ್ಕಾರವು 2006ರಿಂದ ನೇಮಕವಾಗುವ ಸರ್ಕಾರಿ ನೌಕರಿಗೆ ಈ ಯೋಜನೆಯನ್ನು ಅಳವಡಿಸಿ ನೌಕರರ ಸಂಕಷ್ಟಕ್ಕೆ ಕಾರಣವಾಗಿದೆ. ಆರ್ಥಿಕ ಪರಿಸ್ಥಿತಿ ಉತ್ತಮ ಎಂದು ಹೇಳಿಕೊಳ್ಳುವ ಸರ್ಕಾರ ಈ ಯೋಜನೆ ಜಾರಿ ಮಾಡಿದ್ದು ಎಷ್ಟರ ಮಟ್ಟಿಗೆ ಸರಿ ಎನ್ನುವುದು ಪ್ರಶ್ನೆಯಾಗಿದೆ. ಇತ್ತೀಚೆಗೆ ಚಿತ್ರದುರ್ಗ ಜಿಲ್ಲೆಯಲ್ಲಿ ಮೃತಪಟ್ಟ ಶಿಕ್ಷಕನೊಬ್ಬರಿಗೆ ಎನ್ಪಿಎಸ್ ವತಿಯಿಂದ ಯಾವುದೇ ಸೌಲಭ್ಯ ಸಿಗದಿರುವುದೂ ನೌಕರರ ಚಿಂತೆಗೆ ಕಾರಣವಾಗಿದೆ ಎಂದರು.
ಎಲ್ಲ ನೌಕರರಿಗೆ ಹಳೆ ಪಿಂಚಣಿ ಯೋಜನೆ ಜಾರಿಗೆ ತರಬೇಕೆಂದು ಸಂಘದ ಕಾರ್ಯದರ್ಶಿ ಮಲ್ಲಪ್ಪ ಕೆ. ಮನವಿ ಮಾಡಿರು.
ಇದೇ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಭರತ್ಕುಮಾರ, ಜಿಲ್ಲಾಧ್ಯಕ್ಷ ಜಿ.ತಿಮ್ಮಣ್ಣ, ಜಿಲ್ಲಾ ಉಪಾಧ್ಯಕ್ಷ ತಿಮ್ಮಣ್ಣ ನಾಯಕ, ವಿರುಪಾಕ್ಷಿಬಾಬು, ಸಿದ್ದಲಿಂಗಪ್ಪ, ಈರಪ್ಪ, ಶಿಕ್ಷಕ ಬಿ.ಕೊಟ್ರೇಶ್ ಮತ್ತಿತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.