ಅಂಟು ಚವಳಿಗೆ ಚಿಕ್ಕಾಡು ದುಂಬಿ ಬಾಧೆ
ಲಿಂಗಸ್ಗೂರು: ತಾಲೂಕಿನಲ್ಲಿ 150 ಎಕರೆ ಪ್ರದೇಶದಲ್ಲಿ ಅಂಟು ಚವಳಿ ಬಿತ್ತನೆ ಮಾಡಲಾಗಿದ್ದು, ಕೃಷಿ ವಿಜ್ಞಾನಿಗಳು ಕೈಗೊಂಡ ವಿವಿಧ ಕ್ಷೇತ್ರಗಳ ಸಮೀಕ್ಷೆಯಿಂದ ಚಿಕ್ಕಾಡು ದುಂಬಿ ಹೆಚ್ಚಾಗಿದೆ. ಇದನ್ನು ತಡೆಯಲು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸುವಂತೆ ವಿಸ್ತರಣಾ ಮುಖಂಡ ಎಸ್.ಎನ್. ಉಪ್ಪೇರಿ ಮನವಿ ಮಾಡಿದ್ದಾರೆ.
ದುಂಬಿಯ ಮರಿಹುಳುಗಳು ಬೇರು ಕಡಿದು ತಿನ್ನುವುದರಿಂದ ಸಸಿಗಳಿಗೆ ಸೂಕ್ತ ಪ್ರಮಾಣದಲ್ಲಿ ನೀರು ಮತ್ತು ಪೋಷಕಾಂಶಗಳ ಪೂರೈಕೆಯಾಗದೆ ಸಸಿಗಳು ಸಾಯುತ್ತವೆ. ಈ ದುಂಬಿಗಳು ಅಂಟು ಚವಳಿಯನ್ನಲ್ಲದೆ ಇತರೆ ಆಶ್ರಿತ ಬೆಳೆಗಳಾದ ತೊಗರಿ, ಟೊಮ್ಯಾಟೋ, ಆಲೂಗಡ್ಡೆ ಸೇರಿದಂತೆ ಬದುವಿನಲ್ಲಿರುವ ಕಳೆಗಳನ್ನೂ ಸಹ ಬಾಧಿಸುವುವು.
ಈ ಕೀಟದ ಬಾಧೆ ಹೆಚ್ಚು ಕಂಡುಬಂದಲ್ಲಿ ಹತೋಟಿಗೆ ತರಲು ರಸಾಯನಿಕ ಕೀಟನಾಶಕಗಳಾದ ಕ್ವಿನಾಲ್ಫಾಸ್ ಶೇ. 1.5 ಅಥವಾ ಮೆಲಾಥಿಯನ್ ಶೇ. 5ರ ಹುಡಿ ಅಥವಾ ಕಾರ್ಬಾರಿಲ್ ಶೇ. 10ರ ಹುಡಿಯನ್ನು ಪ್ರತಿ ಎಕರೆಗೆ ಐದಾರು ಕೆಜಿ ಧೂಳೀಕರಿಸಬೇಕು. ಅಥವಾ 2 ಗ್ರಾಂ ಕಾರ್ಬಾರಿಲ್ ಶೇ.50 ಅಥವಾ 2 ಮಿಲೀ ಮೆಲಾಥಿಯನ್ 50 ಇಸಿ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಇವುಗಳಲ್ಲಿ ಯಾವುದಾದರೊಂದು ಕೀಟನಾಶಕವನ್ನು 15 ದಿನಗಳ ಅಂತರದಲ್ಲಿ ಎರಡು ಬಾರಿ ಸಿಂಪಡಿಸಬೇಕು.
ಆದಷ್ಟು ಹೊಲದ ಬದುವನ್ನು ಸ್ವಚ್ಛವಾಗಿಟ್ಟುಕೊಳ್ಳುವುದರಿಂದ ಕೀಟಬಾಧೆ ಕಡಿಮೆಗೊಳಿಸಬಹುದು. ಹೆಚ್ಚಿನ ಮಾಹಿತಿಗಾಗಿ ಲಿಂಗಸ್ಗೂರಿನ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಜ್ಞಾನಿಗಳನ್ನು ಸಂಪರ್ಕಿಸಬೇಕೆಂದು ಕೀಟಶಾಸ್ತ್ರಜ್ಞ ಸುಜಯ್ ಹುರಳಿ ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

