ಮಹಿಳೆ- ಮಕ್ಕಳ ಸಾಗಣೆ ವಿರೋಧಿ ಆಂದೋಲನ
ಸಿಂಧನೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಮಹಿಳೆಯರ ಮತ್ತು ಮಕ್ಕಳ ಸಾಗಾಣಿಕೆ ತಡೆಗಟ್ಟುವ ಹಿನ್ನೆಲೆಯಲ್ಲಿ ತಾಲೂಕು ಮಟ್ಟದ ಬೃಹತ್ ಆಂದೋಲನ ನಿಮಿತ್ತ ನಗರದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಲಾಯಿತು.
ನಗರದ ಪ್ರವಾಸಿ ಮಂದಿರದಿಂದ ವಾಸವಿ ಕಲ್ಯಾಣಮಂಟದವರೆಗೆ ಜಾಥಾ ಸಾಗಿತು. ಮಹಿಳೆಯರು ವಿವಿಧ ಶಾಲಾ ಮಕ್ಕಳು, ಇಂದಿರಾಗಾಂಧಿ ತಾಲೂಕು ಸ್ತ್ರಿಶಕ್ತಿ ಒಕ್ಕೂಟದ ಸದಸ್ಯೆಯರು, ಸ್ವಸಹಾಯಕಿಯರು, ಗಾನಯೋಗಿ ಕಲಾಬಳಗ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯದ ಸಿಬ್ಬಂದಿ ಮೆರವಣಿಗೆಯುದ್ದಕ್ಕೂ 'ಬನ್ನಿ ಒಂದಾಗಿ ಮಹಿಳೆಯರು ಮತ್ತು ಮಕ್ಕಳ ಸಾಗಾಟ ನಿಲ್ಲಿಸೋಣ, ಮಹಿಳೆಯರನ್ನು ಮತ್ತು ಮಕ್ಕಳನ್ನು ಅನಾಹುತದಿಂದ ರಕ್ಷಿಸೋಣ, ನಿರ್ಭೀತಿ ಸಮಾಜ ಕಟ್ಟಿಸೋಣ, ಮಹಿಳೆಯರ ಮೇಲಾಗುವ ದೌರ್ಜನ್ಯ, ಅತ್ಯಾಚಾರವನ್ನು ಕಟ್ಟಿಸೋಣ' ಎನ್ನುವ ಘೋಷಣೆ ಕೂಗಿದರು.
ಮೆರವಣಿಗೆಯಲ್ಲಿ ಎಸ್.ದೇವೇಂದ್ರಗೌಡ, ಅಂಗನವಾಡಿ ನೌಕರ ಸಂಘಟನೆಯ ಮುಖಂಡರಾದ ತಿಪ್ಪಯ್ಯಶೆಟ್ಟಿ, ಗಿರಿಜಮ್ಮ, ಸರಸ್ವತಿ, ಯಮನಮ್ಮ, ವೆಂಕನಗೌಡ ಗದ್ರಟಗಿ, ಇಂದಿರಾಗಾಂಧಿ ಒಕ್ಕೂಟದ ವೆಂಕಮ್ಮ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಯೋಗಿತಾಬಾಯಿ, ಇನ್ನಿತರರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

