ರಂಗಪ್ಪಗೆ ಕನಕ ಪುರಸ್ಕಾರ ಪ್ರದಾನ
ದೇವದುರ್ಗ: ಧಾರವಾಡದ ಮನಸೂರಿನ ರೇವಣಸಿದ್ದೇಶ್ವರ ಮಹಾಮಠದಿಂದ ಈಚೆಗೆ ದೇವದುರ್ಗದ ದಲಿತ ಸಂಘರ್ಷ ಸಮಿತಿ ಜಿಲ್ಲಾ ಉಪಾಧ್ಯಕ್ಷ ರಂಗಪ್ಪ ಕೋತಿಗುಡ್ಡ ಅವರಿಗೆ ಸಮಾಜ ಸೇವೆ ಕ್ಷೇತ್ರದಲ್ಲಿನ ಸಾಧನೆಗೆ ಪ್ರತಿಷ್ಠಿತ ಕನಕ ಗೌರವ ಪುರಸ್ಕಾರ ಪ್ರದಾನ ಮಾಡಲಾಯಿತು. ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಪಾಟೀಲ್ ಪುಟ್ಟಪ್ಪ ಸಭಾ ಭವನದಲ್ಲಿ ನಡೆದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಶ್ರೀಮಠದ ಬಸವರಾಜ ದೇವರು ದಲಿತ ನಾಯಕ ರಂಗಪ್ಪ ಕೋತಿಗುಡ್ಡ ರಿಗೆ ಪುರಸ್ಕಾರ ಪ್ರದಾನ ಮಾಡಿದರು.
ಚರ್ಮರೋಗ ಚಿಕಿತ್ಸಾ ಶಿಬಿರ
ರಾಯಚೂರು: ಮಾನವಿ ಪಟ್ಟಣದಲ್ಲಿ ಇತ್ತೀಚೆಗೆ ಕಲ್ಮಠದ ವಿರೂಪಾಕ್ಷ ಶಿವಾಚಾರ್ಯ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚರ್ಮರೋಗದ ಉಚಿತ ಚಿಕಿತ್ಸಾ ಶಿಬಿರ ಆಯೋಜಿಸಲಾಗಿತ್ತು. ಡಾ. ಸುರೇಶ್ರಾವ್ ದೇಶಪಾಂಡೆ ಮಾತನಾಡಿದರು. ಈ ಶಿಬಿರದಲ್ಲಿ 170 ರೋಗಿಗಳು ಚಿಕಿತ್ಸೆ ಪಡೆದರು. ಶಿಬಿರದಲ್ಲಿ ವೈದ್ಯರಾದ ಡಾ. ನಾರಾಯಣ್ ಎಸ್, ಡಾ. ಸುನೀತಾ, ಡಾ. ಮಮತಾ ರೋಗಿಗಳಿಗೆ ತಪಾಸಣೆ ನಡೆಸಿದರು.
ನೀರು, ಒಳಚರಂಡಿ
ಯೋಜನೆ ಕಾರ್ಯಕ್ರಮ
ರಾಯಚೂರು: ನಗರದ ತಿಮ್ಮಾಪುರ ಪೇಟೆಯ ಏಷಿಯನ್ ಅಭಿವೃದ್ಧಿ ಬ್ಯಾಂಕ್ ನೆರವಿನ ಉತ್ತರ ಕರ್ನಾಟಕ ನಗರ ವಲಯ ಬಂಡವಾಳ ಹೂಡಿಕಾ ಕಾರ್ಯಕ್ರಮದನ್ವಯ ಸಮುದಾಯ ಅಭಿವೃದ್ಧಿ ವಿಭಾಗದ ಅನುಷ್ಠಾನ ಸಂಸ್ಥೆ ವಿಶ್ವ ಸೇವಾ ಮಿಷನ್ ಮತ್ತು ನಗರಸಭೆ ಆಶ್ರಯದಲ್ಲಿ ಶುಕ್ರವಾರ ತಿಳಿವಳಿಕೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕುಡಿವ ನೀರು ಸರಬರಾಜು ಮತ್ತು ಒಳಚರಂಡಿ ಯೋಜನೆ ಕುರಿತು ತಿಳಿವಳಿಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ನಗರಸಭೆ ಸದಸ್ಯ ಹರೀಶ ನಾಡಗೌಡ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಪದ್ಮಾ, ಸಹಾಯಕ ಅಭಿಯಂತರರ ಚಂದ್ರಶೇಖರ, ಆಶೋಕ ಛಾವಡಿ, ಬಸವರಾಜ ಗಲಗಿನ, ರಾಜಶೇಖರ ಪಾಟೀಲ್ ಮಾತನಾಡಿದರು. ಯುನಿಸೆಫ್ನ ಕಾರ್ಯಕರ್ತೆ ಶೇಷಮ್ಮ, ಮುಖ್ಯಗುರು ಗೂಳೆಪ್ಪ ಸೇರಿ ಅನೇಕರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

