ರಾಯಚೂರು

ಮೂಢನಂಬಿಕೆ ತ್ಯಜಿಸಿ: ಸಿದ್ದರಾಮನಂದಶ್ರೀ

Published On :

ಸಿಂಧನೂರು: ತಾಂತ್ರಿಕ, ವೈಜ್ಞಾನಿಕವಾಗಿ ಮುಂದುವರೆದಿದ್ದರೂ ಪ್ರಾಣಿ ಬಲಿಯಂತಹ ಮೌಢ್ಯ, ಮೂಢನಂಬಿಕೆಗಳು ಇನ್ನೂ ಸಮಾಜದಲ್ಲಿ ಜೀವಂತವಾಗಿವೆ. ಇವುಗಳನ್ನು ತ್ಯಜಿಸಿ, ನಿಸ್ವಾರ್ಥ ಸೇವೆ ರೂಢಿಸಿಕೊಳ್ಳಬೇಕೆಂದು ಕಾಗಿನೆಲೆ ಕನಕಗುರು ಪೀಠದ ಸಿದ್ದರಾಮನಂದಪುರಿ ಸ್ವಾಮಿ ತಿಳಿಸಿದರು.
ತಾಲೂಕಿನ ತುರುವಿಹಾಳದಲ್ಲಿ ಏರ್ಪಡಿಸಿದ್ದ ಕನಕದಾಸರ ಜಯಂತ್ಯುತ್ಸವದಲ್ಲಿ ಸಾನ್ನಿಧ್ಯ ವಹಿಸಿ, ಎಲ್ಲಾ ಸಮುದಾಯಗಳು ಒಟ್ಟುಗೂಡಿ ಕನಕ ಜಯಂತಿ ಆಚರಣೆ ಮಾಡುತ್ತಿರುವುದು ಹೊಸ ಸಂಪ್ರದಾಯಕ್ಕೆ ಮೇಲ್ಪಂಕ್ತಿ ಹಾಕಿದೆ. ಇನ್ನೂ ಈ ಸಮಾಜದ ಜನತೆ ಶೈಕ್ಷಣಿಕ ಸೌಲಭ್ಯಗಳನ್ನು ಪಡೆದು ಮುಖ್ಯವಾಹಿನಿಗೆ ಬರಬೇಕಿದೆ. ಹಾಲುಮತ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಸಂಸದ ನಿಧಿಯಿಂದ ರು. 10ಲಕ್ಷ ನೀಡುವುದಾಗಿ ಭರವಸೆ ನೀಡಿದರು.
ಸಹಬಾಳ್ವೆ: ಅಧ್ಯಕ್ಷತೆ ವಹಿಸಿದ್ದ ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ ಮಾತನಾಡಿ, ಕನಕರ ಸಾಹಿತ್ಯ ಅಧ್ಯಯನ ಮಾಡುವ ಮೂಲಕ ಅವರ ವಿಚಾರ ಧಾರೆಗಳನ್ನು ಸಮಾಜದ ಜತೆಗೆ ಹಂಚಿಕೊಳ್ಳಬೇಕಿದೆ. ಸಹಬಾಳ್ವೆಯಿಂದ ಒಟ್ಟುಗೂಡಿ ಕಾರ್ಯಕ್ರಮ ಆಚರಿಸುತ್ತಿರುವ ಎಲ್ಲಾ ವರ್ಗದ ಜನತೆಗೂ ಕೃತಜ್ಞತೆ ಸಲ್ಲಿಸುವೆ ಎಂದರು. ಸಾಹಿತಿ ಲಿಂಗದಳ್ಳಿ ಹಾಲಪ್ಪ, ಬಸ್ಸಮ್ಮ ಕುಂಟೋಜಿ, ಗವಿಸಿದ್ದಪ್ಪ ಕಾನಿಹಾಳ, ವೀರಶ ಸಾಲೋಣಿ ಮಾತನಾಡಿದರು. ಜಿ.ಪಂ. ಮಾಜಿ ಅಧ್ಯಕ್ಷ ಪಂಪನಗೌಡ ಬಾದರ್ಲಿ, ಚೇತನ ಪ್ರತಾಪಗೌಡ ಪಾಟೀಲ್, ದೇವರಮನಿ, ಎಂ.ಡಿ. ಫಾರುಕ್ ಸಾಬ್, ಆರ್.ಬಸನಗೌಡ, ಬಸನಗೌಡ ಕೆಲ್ಲೂರು, ನಿರುಪಾದೆಪ್ಪ, ಕಟ್ಟೆಪ್ಪ ಗುಂಜಳ್ಳಿ, ಅಮರಗುಂಡ ದೇಶಿಕರು, ಟಿ.ಹನುಮಂತಪ್ಪ, ತಾ.ಪಂ. ಸದಸ್ಯೆ ಬಸ್ಸಮ್ಮ ಮಾ.ಪಾ., ಕೆಂಪಮ್ಮ ಇತರರಿದ್ದರು.
ಚಿದಾನಂದಯ್ಯ ಗುರುವಿನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಟಿ.ಸೋಮಲಿಂಗಪ್ಪ, ಬಾಪುಗೌಡ, ಲಿಂಗಪ್ಪ ಕಟ್ಟಿಮನಿ ಕಾರ್ಯಕ್ರಮ ನಿರ್ವಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.