ಲಾಠಿ ಪ್ರಹಾರ ಘಟನೆಗೆ ರೈತ ಸಂಘ ಖಂಡನೆ
ದೇವದುರ್ಗ: ರಾಯಚೂರಿನಲ್ಲಿ ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಹೋರಾಟ ನಿರತ ಕರ್ನಾಟಕ ರೈತ ಸಂಘದ ನೂರಾರು ರೈತರ ಮೇಲೆ ಲಾಠಿ ಪ್ರಹಾರ ನಡೆಸಿದ ಜಿಲ್ಲಾಡಳಿತದ ಕ್ರಮ ಖಂಡಿಸಿ ಮಂಗಳವಾರ ಪಟ್ಟಣದಲ್ಲಿ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಹತ್ತಿಕ್ಕುವ ತಂತ್ರ: ಕರ್ನಾಟಕ ರೈತ ಸಂಘ ತಾಲೂಕು ಸಮಿತಿ ಅಧ್ಯಕ್ಷ ಮಲ್ಲಯ್ಯ ಕಟ್ಟಿಮನಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಪಟ್ಟಣದ ಹಜರತ್ ಜಹೀರುದ್ದೀನ್ ಪಾಶಾ ಚೌಕ್ ನಲ್ಲಿ ಜಿಲ್ಲಾಧಿಕಾರಿಗಳ ಪ್ರತಿಕೃತಿ ದಹಿಸಿ, ರೈತರ ಬೇಡಿಕೆಗಳಿಗೆ ಸ್ಪಂದಿಸದ ಜಿಲ್ಲಾಡಳಿತ ಏಕಾಏಕಿ ಪೊಲೀಸ್‌ರಿಂದ ಬಲಪ್ರಯೋಗಕ್ಕೆ ಮುಂದಾಗಿದ್ದು, ರೈತ ಹೋರಾಟವನ್ನು ಹತ್ತಿಕ್ಕುವ ತಂತ್ರವಾಗಿದೆ ಎಂದು ಟೀಕಿಸಿದರು.
ಜಿಲ್ಲೆಯಲ್ಲಿ ನೆಲಗಳ್ಳರ, ಅಕ್ರಮ ಗಣಿ ಲೂಟಿಕೋರರ ನಿಯಂತ್ರಣಕ್ಕೆ ಮುಂದಾಗದ ಆಡಳಿತ ಈ ನಿಟ್ಟಿನಲ್ಲಿ ಹೋರಾಟ ನಡೆಸಿದ ರೈತರ ವಿರುದ್ಧವೇ ಕ್ರಮಕ್ಕೆ ಮುಂದಾಗಿರುವುದು ಸರಿಯಲ್ಲ. ಜನಪರ ಸಂಘಟನೆಗಳನ್ನು ವಸೂಲಿಕೋರ ಸಂಘಟನೆಗಳೆಂದು ಆರೋಪಿಸಿರುವ ಜಿಲ್ಲಾಧಿಕಾರಿ ನಾಗರಾಜು ಸರ್ಕಾರಕ್ಕೆ ಮತ್ತು ಸಮಾಜಕ್ಕೆ ತಪ್ಪು ಮಾಹಿತಿ ರವಾನಿಸಿದ್ದಾರೆಂದು ದೂರಿದರು. ಸಂಘಟನೆಕಾರರು ವಸೂಲಿ ಮಾಡುತ್ತಿದ್ದಾರೆಂಬ ಬಗ್ಗೆ ಆರೋಪ ಮಾಡಿರುವ ಜಿಲ್ಲಾಧಿಕಾರಿಗಳು ಕೂಡಲೇ ಈ ಕುರಿತು ತಮ್ಮಲ್ಲಿನ ಸಾಕ್ಷ್ಯಾಧಾರ ಬಹಿರಂಗಗೊಳಿಸಹಬೇಕು. ಅಂಥ ಸಂಘಟನೆಯ ವಿರುದ್ಧ ಕೇಸು ದಾಖಲಿಸಿ ವಿಚಾರಣೆಗೊಳಪಡಿಸಲು ಸವಾಲು ಹಾಕಿದರು.
ಸಂಘಟನೆ ಪ್ರಮುಖರಾದ ದುರ್ಗಣ್ಣ ಇರಬಗೇರಾ, ಸದಾಶಿವ ಗೋಪಾಳಪುರ, ಖಾಜಾ ಹುಸೇನ, ಹನುಮಂತ್ರಾಯ ಗಂಗೆ, ಆಂಜನೇಯ, ಮಾರ್ತಾಂಡ ಸ್ವಾಮಿ, ನಬೀಸಾಬ ಮದರಕಲ್, ಮಹಿಬೂಬ್ ಸಾಬ್, ಗಿರಿಲಿಂಗಸ್ವಾಮಿ ಶಿವುಕುಮಾರ ಕಟ್ಟಿ, ಚನ್ನಬಸವ ಕರಿಗುಡ್ಡ ಸೇರಿ ಅನೇಕರಿದ್ದರು.
--
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

