ರಾಯಚೂರು

ಬೆಲೆಯಿಲ್ಲದೆ ಹೊಲದಲ್ಲಿರುವ 'ಬತ್ತದ' ರಾಶಿ

Published On :

ಸಿಂಧನೂರು: ಆಗಾಗ ಕವಿಯುವ ಮೋಡ, ಬೆಳಿಗ್ಗೆ ಇಬ್ಬನಿ. ಆತಂಕದ ನಡುವೆಯೂ ರೈತರು ಬೆಲೆಯಿಲ್ಲದ ಕಾರಣಕ್ಕೆ ಮಾರುಕಟ್ಟೆಗೆ ಒಯ್ಯದೆ ಬತ್ತದ ಗದ್ದೆಗಳಲ್ಲಿ ರಾಶಿಯನ್ನು ತಾಡಪಾಲುಗಳಲ್ಲಿ ಸಂಗ್ರಹಿಸಿಟ್ಟಿದ್ದಾರೆ.
ಕಲ್ಲೂರು, ಮುಳ್ಳೂರು, ಬಸಾಪುರ, ಪರಾಪುರ, ಎಲೆಕೂಡ್ಲಿಗಿ, ಜವಳಗೇರಾ, ಮೂರುಮೈಲು ಕ್ಯಾಂಪ್, ಜಾಲಿಹಾಳ, ಹಂಚಿಕೆನಾಳಕ್ಯಾಂಪ್, ರೌಡಕುಂದಾ, ಪುನರ್ವಸತಿ ಕ್ಯಾಂಪ್ ಕುರುಕುಂದಾ, ಗೀತಾಕ್ಯಾಂಪ್ ಸೇರಿದಂತೆ ಹಲವು ಗ್ರಾಮ ಮತ್ತು ಕ್ಯಾಂಪ್‌ಗಳಲ್ಲಿ ರೈತರು ನಷ್ಟದ ಭೀತಿಯಿಂದ ಬತ್ತವನ್ನು ಮಾರಾಟ ಮಾಡದೆ ಕಂಗಾಲಾಗಿ, ಹಾಗೆಯೇ ಹೊಲದಲ್ಲಿ ಉಳಿಸಿದ್ದಾರೆ.
ರಾಸಾಯನಿಕ ಬಳಕೆ, ಗೊಬ್ಬರ ಹಾಗೂ ಕೃಷಿ ಕೂಲಿಕಾರ್ಮಿಕರಿಗೆ ಕೂಲಿ ಹಾಗೂ ಬತ್ತ ಕಟಾವು ಸೇರಿದಂತೆ  ಹಲವು ಖರ್ಚುಗಳಿಂದ ಈ ಬಾರಿ ಎಕರೆಗೆ ರು. 20 ಸಾವಿರ ಖರ್ಚು ದಾಟಿದೆ. ಸರ್ಕಾರ 1600 ಬೆಲೆ ನೀಡಿದರೂ ನಷ್ಟವಾಗಲಿದೆ. ಕನಿಷ್ಠ ರು. 2000 ಸಾವಿರ ನೀಡಿದರೆ ಅನುಕೂಲ, ಎಂದು ಬಸಾಪುರ ಗ್ರಾಮದ ರೈತ ರುದ್ರಣ್ಣ ಹೇಳಿದರು. ರೈತರು ತಮ್ಮ ರಾಶಿ ಹಾಕಿಕೊಂಡು ರೇಟಿಗಾಗಿ ಕಾಯುತ್ತಿರುವುದು ಸಾಮಾನ್ಯವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.