ಮಾರಾಟ ಮೇಳ ಉದ್ಘಾಟನೆ
ರಾಯಚೂರು: ತಾಲೂಕಿನ ದೇವಸೂಗೂರಿನ ಸೂಗೂರೇಶ್ವರ ದೇವಸ್ಥಾನದಲ್ಲಿ ಡಿ.7ರಂದು ಜಿಲ್ಲಾ ಮಟ್ಟದ ವಸ್ತುಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಿದ್ದು, ಜಿಪಂ ಅಧ್ಯಕ್ಷೆ ಲಲಿತಮ್ಮ ಪಾಟೀಲ್ ಉದ್ಘಾಟಿಸಲಿದ್ದಾರೆ. ಅಂದು ಮಧ್ಯಾಹ್ನ 12ಕ್ಕೆ ಮೇಳವನ್ನು ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಗ್ರಾಮೀಣ ಶಾಸಕ ತಿಪ್ಪರಾಜು ಹವಾಲ್ದಾರ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ತಾಪಂ ಅಧ್ಯಕ್ಷ ಪಿ. ಚಂದ್ರಶೇಖರರೆಡ್ಡಿ, ಜಿಪಂ ಉಪಾಧ್ಯಕ್ಷ ಕೆ. ಶರಣಪ್ಪ, ಸಹಾಯಕ ಆಯುಕ್ತೆ ಎನ್. ಮಂಜುಶ್ರೀ, ದೇವಸ್ಗೂರು ಜಿಪಂ ಸದಸ್ಯ ಅಚ್ಯುತರೆಡ್ಡಿ, ಗ್ರಾಪಂ ಅಧ್ಯಕ್ಷೆ ಅಂಬುಜಾ ನರಸಪ್ಪ ನಾಯಕ, ದೇವಸ್ಗೂರು ತಾಪಂ ಸದಸ್ಯ ಮಂಜುಳಾ ಪ್ಯಾಟಿ, ಸುಧಾ ಸೂಗುರಪ್ಪ, ಶಶಿಧರ ಗೌಡ ಆಗಮಿಸಲಿದ್ದಾರೆ.
ನಾಳೆ ಚಿತ್ರಕಲಾ ಸ್ಪರ್ಧೆ
ಲಿಂಗಸ್ಗೂರು: ಪಟ್ಟಣದ ಅಮರೇಶ್ವರ ಬಾಲಕಿಯರ ಪ್ರೌಢಶಾಲೆಯಲ್ಲಿ ಡಿ. 8ರಂದು ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿದೆ. ಸ್ಥಳೀಯ ಕೃಷ್ಣಾ ಭೀಮಾ ಸಮೃದ್ಧಿ ಲೋಕಲ್ ಏರಿಯಾ ಬ್ಯಾಂಕ್ ಶಾಖೆ ವತಿಯಿಂದ ಹಮ್ಮಿಕೊಂಡಿರುವ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಮೊ. 88844 30072 ಸಂಖ್ಯೆಗೆ ಸಂಪರ್ಕಿಸಬೇಕೆಂದು ಬ್ಯಾಂಕ್ ಶಾಖೆ ವ್ಯವಸ್ಥಾಪಕ ಪ್ರತಾಪ್ಗೌಡ ತಿಳಿಸಿದ್ದಾರೆ.
ಎಲ್ಐಸಿ ಪಾಲಿಸಿ; ಅಭಿಯಾನ
ರಾಯಚೂರು: ನಗರದ ಸೂಪರ್ ಮಾರ್ಕೆಟ್ನ ಭಗತಸಿಂಗ್ ವೃತ್ತದಲ್ಲಿ ಶುಕ್ರವಾರ ಜೀವ ವಿಮಾ ನಿಗಮದ ವಿಭಾಗೀಯ ಕಚೇರಿಯ ಸಿಬ್ಬಂದಿ ಕರಪತ್ರ ಅಭಿಯಾನ ನಡೆಸಿದರು. ಡಿ.31ರಂದು ಪ್ರಸ್ತುತ ಜಾರಿಯಲ್ಲಿರುವ ವಿವಿಧ ಪಾಲಿಸಿಗಳು ವಿಮೆ ನಿಯಂತ್ರಣ ಪ್ರಾಧಿಕಾರದ ಆದೇಶದ ಮೇರೆಗೆ ಹಿಂಪಡೆಯುತ್ತಿರುವ ಹಿನ್ನೆಲೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಅದರ ಸದುಪಯೋಗವನ್ನು ಪಡೆಯುವ ಉದ್ದೇಶದಿಂದ ಅಭಿಯಾನ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಶಾಖಾ ವ್ಯವಸ್ಥಾಪಕ ಬಿ. ದೊರೆಸ್ವಾಮಿ ನಾಯ್ಡು, ಸಹಾಯಕ ವ್ಯವಸ್ಥಾಪಕ ಕೆ.ವರಪ್ರಸಾದ, ಪ್ರತಿನಿಧಿ ವೀರಕುಮಾರ ಮತ್ತಿತರರು ಇದ್ದರು.
ರಸ್ತೆ ತೆರವಿಗೆ ಒತ್ತಾಯ
ಸಿಂಧನೂರು: ತಾಲೂಕಿನ ಕೆಂಗಲ್ ಗ್ರಾಮದ ಬಳಿಯ ರಾರಾವಿಯಿಂದ ಬೇಲೂರಿಗೆ ಹೋಗುವ ರಸ್ತೆಯನ್ನು ಕೆಲವು ಖಾಸಗಿ ವ್ಯಕ್ತಿಗಳು ಅನಧಿಕೃತವಾಗಿ ಕಬ್ಜಾ ಮಾಡಿಕೊಂಡಿದ್ದಾರೆ. ಅವರನ್ನು ತೆರವುಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡಬೇಕೆಂದು ಸಿಐಟಿಯು ತಾಲೂಕು ಪ್ರಧಾನ ಕಾರ್ಯದರ್ಶಿ ಯಂಕಪ್ಪ ಕೆಂಗಲ್ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ. ತಹಸೀಲ್ದಾರರ ಮೂಲಕ ಮನವಿ ಸಲ್ಲಿಸಿರುವ ಅವರು, 1972ರಿಂದ ಸಾರ್ವಜನಿಕರು ಈ ರಸ್ತೆಯನ್ನು ಉಪಯೋಗಿಸುತ್ತಿದ್ದಾರೆ. ಆದರೆ ಕೆಲವರು ಅತಿಕ್ರಮಣ ಮಾಡಿದ್ದಾರೆ ಎಂದಿದ್ದಾರೆ.
ಚೌಡಪ್ಪಗೆ 'ಅಂಬೇಡ್ಕರ್ ಫೆಲೋಶಿಪ್'
ಸಿಂಧನೂರು: ನಗರದ ಲೋಕೋಪಯೋಗಿ ಇಲಾಖೆಯ ವರ್ಕ್ ಇನ್ಸ್ಪೆಕ್ಟರ್ ಚೌಡಪ್ಪ ಅವರಿಗೆ ನವದೆಹಲಿಯ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯಿಂದ 2013ನೇ ಸಾಲಿನ ಡಾ. ಅಂಬೇಡ್ಕರ್ ನ್ಯಾಷನಲ್ ಫೆಲೋಶಿಪ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ರಾಷ್ಟ್ರಾಧ್ಯಕ್ಷ ಸುಮನಾಕ್ಷರ ತಿಳಿಸಿದ್ದಾರೆ. ಡಿ.12, 13ರಂದು ನವದೆಹಲಿಯಲ್ಲಿ ಜರುಗುವ ಕಾರ್ಯಕ್ರಮದಲ್ಲಿ ಚೌಡಪ್ಪ ಪ್ರಶಸ್ತಿ ಸ್ವೀಕರಿಸುವರು.
ಅಭಿನಂದನೆ: ಡಾ. ಅಂಬೇಡ್ಕರ್ ಫೆಲೋಶಿಪ್ ಪ್ರಶಸ್ತಿಗೆ ಆಯ್ಕೆಯಾಗಿರುವ ಚೌಡಪ್ಪನವರಿಗೆ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಒಕ್ಕೂಟದ ತಾಲೂಕಾಧ್ಯಕ್ಷ ದೊಡ್ಡನಗೌಡ, ಎಪಿಎಂಸಿಯ ಮುಖ್ಯ ಲೆಕ್ಕಿಗ ಗುರಲಿಂಗಪ್ಪ, ಶಿಕ್ಷಕರಾದ ಬಸವರಾಜ ಬಿರಾದಾರ್, ವೀರೇಶಕೋಟೆ, ಕೃಷಿ ಇಲಾಖೆಯ ವೀರಪ್ಪ ಜಕರಡ್ಡಿ ಅಭಿನಂದಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

