ರಾಯಚೂರು

ನಾಗರಿಕ ಸೌಲಭ್ಯಕ್ಕೆ ಒತ್ತಾಯ: ನಗರಸಭಾಧ್ಯಕ್ಷರಿಗೆ ಮನವಿ

Published On :

ರಾಯಚೂರು: ನಗರದ ನಿವಾಸಿಗಳಿಗೆ ನಾಗರಿಕ ಸೌಲಭ್ಯಗಳನ್ನು ಕಲ್ಪಿಸುವಂತೆ ಒತ್ತಾಯಿಸಿ ನಗರಸಭೆ ಅಧ್ಯಕ್ಷರಿಗೆ ಶನಿವಾರ ರಾಯಚೂರು ಸ್ವಚ್ಛಗೊಳಿಸಿ ಹೋರಾಟ ಸಮಿತಿ ಕಾರ್ಯಕರ್ತರು ಮನವಿ ಸಲ್ಲಿಸಿದರು.
ಸ್ಥಳೀಯ ನಗರಸಭೆಯಲ್ಲಿ ಅಧ್ಯಕ್ಷೆ ಮಹಾದೇವಮ್ಮ ಅವರನ್ನು ಭೇಟಿ ಮಾಡಿದ ಹೋರಾಟ ಸಮಿತಿಯ ನಿಯೋಗವು ಜಿಲ್ಲಾ ಕೇಂದ್ರದಲ್ಲಿ ಸುಮಾರು ಮೂರು ಲಕ್ಷ ನಾಗರಿಕರು ವಾಸವಾಗಿದ್ದಾರೆ. ಆದರೆ ಅವರಲ್ಲಿ ಬಹುತೇಕ ಎಲ್ಲರಿಗೆ ಅಗತ್ಯ ಸೌಲಭ್ಯಗಳು ದೊರೆಯುತ್ತಿಲ್ಲ ಎಂದು ದೂರಿದರು.
ನಗರದಲ್ಲಿನ ಹದಗೆಟ್ಟ ರಸ್ತೆಗಳು, ಕಲುಷಿತ ನೀರು, ಸ್ವಚ್ಛ ಕಾಣದ ಚರಂಡಿಗಳು, ವಿಲೇವಾರಿಯಾಗದ ಕಸ, ಎಲ್ಲೆಂದರಲ್ಲೇ ರಾಚುವ ಧೂಳು- ತಿಪ್ಪೆ ರಾಶಿಗಳಂಥ ಸಮಸ್ಯೆಗಳು ಕಳೆದ ಅನೇಕ ವರ್ಷಗಳಿಂದ ಬೃಹತ್ ಗಾತ್ರದಲ್ಲಿ ಬೆಳೆಯುತ್ತಿದ್ದು, ನಗರವನ್ನು ನರಕ ಕೂಪವಾಗಿಸುತ್ತಿವೆ ಎಂದು ಆರೋಪಿಸಿದರು.
ಈ ಹಿನ್ನೆಲೆಯಲ್ಲಿ ನಗರದಲ್ಲಿನ ತೀವ್ರ ಹದಗೆಟ್ಟಿರುವ ಎಲ್ಲ ರಸ್ತೆಗಳ ದುರಸ್ತಿ ಮತ್ತು ಡಾಂಬರೀಕರಣವಾಗಬೇಕು. ಚತುಷ್ಪಥ ರಸ್ತೆಯಲ್ಲಿನ ತಗ್ಗು ಮುಚ್ಚಬೇಕು. ಚಂದ್ರಮೌಳೇಶ್ವರ ರಸ್ತೆಯಿಂದ ಪೂರ್ಣಿಮಾ ಚಿತ್ರಮಂದಿರದವರೆಗಿನ ರಸ್ತೆ ಕಾಮಗಾರಿ ಚುರುಕುಗೊಳಿಸಿ ಪೂರ್ಣಗೊಳಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಪ್ರಮುಖರಾದ ಅಪರ್ಣಾ ಬಿ.ಆರ್, ಮಹೆಬೂಬ್ ಪಾಷಾ ಮೂಲಿಮನಿ, ಡಾ. ಚಂದ್ರಗಿರೀಶ್, ಶಿವರಾಜ್ ಪಾಟೀಲ್ ವಕೀಲರು, ಸಹನಾ ಹಿರೇಮಠ್ ವಕೀಲರು, ಎನ್. ಮಹಾವೀರ ಪಿ.ಎಸ್. ಹಿರೇಮಠ್ ಸೇರಿ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.