ರಾಯಚೂರು

ಇಂದು ಕೆಎಸ್‌ಸಿಎ ಆಯ್ಕೆ ಪ್ರಕ್ರಿಯೆ

Published On :

ರಾಯಚೂರು: ಕೆಎಸ್‌ಸಿಎ ರಾಯಚೂರು ವಲಯದ 14 ವರ್ಷದೊಳಗಿನ ಕ್ರಿಕೆಟ್ ತಂಡಕ್ಕೆ ಆಯ್ಕೆ ಪ್ರಕ್ರಿಯೆಯು ಡಿ.12ರಂದು ನಡೆಯಲಿದೆ ಎಂದು ಕೆಎಸ್‌ಸಿಎ ಪ್ರಕಟಣೆ ತಿಳಿಸಿದೆ.
ರಾಯಚೂರು ಕೃಷಿ ವಿವಿಯ ಕ್ರೀಡಾಂಗಣದಲ್ಲಿ ಡಿ.12 ರಂದು ಬೆಳಗ್ಗೆ 8.30ಕ್ಕೆ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಕ್ರೀಡಾಳುಗಳು ಈ ಸಮಯಕ್ಕೆ ಸರಿಯಾಗಿ ಹಾಜರಿರಬೇಕು. ತಮ್ಮೊಂದಿಗೆ 7ನೇ ತರಗತಿಯ ವರ್ಗಾವಣೆ ಪ್ರಮಾಣಪತ್ರದ ಮೂಲಪ್ರತಿ ಮತ್ತು ಅಂಕಪಟ್ಟಿ ಕಡ್ಡಾಯವಾಗಿ ಪ್ರದರ್ಶಿಸಬೇಕು.
ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳವವರ ಜನ್ಮದಿನಾಂಕವು 1999ರ ಸೆ.1ರ ಮೇಲ್ಪಟ್ಟಿರಬೇಕು. ಶಾಲಾ ಪ್ರಮಾಣ ಪತ್ರಗಳನ್ನು ಹೊರತುಪಡಿಸಿ ಬೇರಾವುದೇ ದಾಖಲೆಗಳನ್ನು ಮಾನ್ಯ ಮಾಡುವುದಿಲ್ಲ. ಆಯ್ಕೆಗೆ ಆಗಮಿಸುವ ಎಲ್ಲ ಕ್ರೀಡಾಳುಗಳು ಸ್ವಂತ ಕ್ರಿಕೆಟ್ ಕಿಟ್ ಹೊಂದಿರುವುದು ಅವಶ್ಯಕ. ಬಿಳಿ ಸಮವಸ್ತ್ರ ಧರಿಸಿ ಆಯ್ಕೆ ಪ್ರಕ್ರಿಯೆಗೆ ಹಾಜರಾಗಲು ಸೂಚಿಸಲಾಗಿದೆ.
ಹೆಚ್ಚಿನ ಮಾಹಿತಿಗೆ ಕೆಎಸ್‌ಸಿಎ ರಾಯಚೂರು ವಲಯ ಸಂಚಾಲಕ ಸುಜಿತ್ ಬೊಹರಾ-9480210008, ರಾಜೇಶ್ ಪಲ್ಲಕ್ಕಿ- 9886399200, ಕುಶಾಲ್ ಪಾಟೀಲ್ 9448476889 ಇಲ್ಲಿಗೆ ಸಂಪರ್ಕಿಸಲು ಕೋರಲಾಗಿದೆ.
--
ಹುದ್ದೆಗಳಿಗೆ ಅರ್ಜಿ ಆಹ್ವಾನ
ರಾಯಚೂರು: ವಿಕಲಚೇತನರ ಗ್ರಾಮೀಣ ಪುನಾವಸತಿ ಯೋಜನೆಯಡಿ ವಿವಿಧೆಡೆ ಖಾಲಿಯಿರುವ ಗ್ರಾಪಂ.ಗಳಲ್ಲಿನ ಹುದ್ದೆಗಳಿಗೆ ನೇಮಕಕ್ಕೆ ಅರ್ಜಿ ಕರೆಯಲಾಗಿದೆ.
ರಾಯಚೂರು ತಾಲೂಕಿನ ಬಾಯಿದೊಡ್ಡಿ, ಸಿಂಗನೋಡಿ, ಚಿಕ್ಕಸ್ಗೂರು, ಶಾಖವಾದಿ, ತಲಮಾರಿ ಮತ್ತು ಬೀಜನಗೇರಾ ಗ್ರಾಪಂಗಳು, ಮಾನವಿ ತಾಲೂಕಿನ ಕಪಗಲ್, ಅರೋಲಿ, ನೀರಮಾನವಿ, ಪಾಮನಕಲ್ಲೂರು, ಕೆ. ಗುಡದಿನ್ನಿ, ಚಾಗಭಾವಿ, ಹಾಲಾಪುರ, ಅಮೀನಗಡ, ಹೀರೆಹಣಗಿ, ನಕ್ಕುಂದಿ, ಉಟಕನೂರು, ತೋರಣದಿನ್ನಿ, ಅತ್ತನೂರು, ಜಾನೇಕಲ್, ಬಲ್ಲಟಗಿ, ಮಲ್ಲಟ್, ಗಣದಿನ್ನಿ, ಸಂಗಾಪೂರು ಮತ್ತು ಹಿರೇಕೊಟ್ನೆಕಲ್ ಗ್ರಾಪಂಗಳು, ದೇವದುರ್ಗ ತಾಲೂಕಿನ ಕರಡಿಗುಡ್ಡ, ನಾಗಡದಿನ್ನಿ ಹಾಗೂ ಸಿಂಧನೂರು ತಾಲೂಕಿನ ಗಾಂಧಿನಗರ, ಚನ್ನಳ್ಳಿ, ಗೋನ್ವಾರ್, ಬಪ್ಪೂರು, ಆರ್.ಎಚ್. ಕ್ಯಾಂಪ್ ಸಂಖ್ಯೆ 1, ಉದ್ಬಾಳ ಯು. ಗ್ರಾಪಂಗಳು ಹಾಗೂ ಲಿಂಗಸ್ಗೂರು ತಾಲೂಕಿನ ಈಚನಾಳ ಗ್ರಾಪಂ.ಗಳಲ್ಲಿ ಗ್ರಾಮೀಣ ಪುನಾವಸತಿ ಕಾರ್ಯಕರ್ತರ ಹುದ್ದೆಗೆ ನಿಗದಿ ಪಡಿಸಿದ 1500 ಗೌರವಧನದ ಆಧಾರದಲ್ಲಿ ಕಾರ್ಯನಿರ್ವಹಿಸಲು ಕಾರ್ಯಕರ್ತರನ್ನು ನೇಮಿಸಲು ಅರ್ಜಿ ಕರೆಯಲಾಗಿದೆ.
ಅರ್ಜಿ ಸಲ್ಲಿಸಲು ಡಿ.16 ಕಡೆದಿನ. ಮಾಹಿತಿಗೆ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.