ರಾಯಚೂರು

ಅಗಲಿದ ನಾಯಕರಿಗೆ ದಸಂಸ ಶ್ರದ್ಧಾಂಜಲಿ

Published On :

ಚಿತ್ತಾಪುರ: ಇತ್ತೀಚೆಗೆ ನಿಧನರಾದ ದಕ್ಷಿಣ ಅಫ್ರಿಕಾದ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲಾ, ಕೋಲಿ ಸಮಾಜದ ಮುಖಂಡ ಮಾಜಿ ಸಚೇತಕ ವಿಠ್ಠಲ್ ಹೇರೂರ್ ಮತ್ತು ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಅವರು ನಿಧನರಾಗಿ ರಾಷ್ಟ್ರವು ಮಹಾನ್ ನಾಯಕರನ್ನು ಕಳೆದುಕೊಂಡಿದೆ ಎಂದು ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ ಶ್ರದ್ಧಾಂಜಲಿ ಸಲ್ಲಿಸಿ ಹೇಳಿದರು. ಪಟ್ಟಣದ ಮಕ್ಕಳ ವಸತಿ ನಿಲಯದಲ್ಲಿ ಸಭೆ ಸೇರಿ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದರು. ಮಾಜಿ ಜಿಪಂ ಸದಸ್ಯ ಬಸವರಾಜ ಬೆಣ್ಣೂರಕರ್, ಜಿಲ್ಲಾ ಸಂಚಾಲಕ ಶಿವಶರಣಪ್ಪ ಕುರನಳ್ಳಿ, ಸಂತೋಷ ತೆಗನೂರ, ಮಲ್ಲಿಕಾರ್ಜುನ ಬೆಣ್ಣೂರಕರ್, ಶಿವಪುತ್ರ ಹಾಗರಗಾ, ಭೀಮಾಶಂಕರ ತೇಲ್ಕರ್, ಮರೆಪ್ಪ ಮೇತ್ರಿ, ವೈಜನಾಥ ಒಂಟಿ, ರಮೇಶ ಕವಡೆ, ಕಲ್ಯಾಣಿ ಏರಿ, ಜಗದೀಶ ಸಾಗರ, ಶಿವಕುಮಾರ್ ಸಂಗನ, ನವಾಬ್ ಮುನ್ಸಿ, ಜಗನಾಥ ಮುಡಬೂಳಕರ್, ಸಿದ್ದಣ್ಣ ತುನ್ನುರ್ ಇದ್ದರು.
ಒಡೆಯರ್ಗೆ ಶ್ರದ್ಧಾಂಜಲಿ
ಗುಲ್ಬರ್ಗ: ವಾಡಿ ಪಟ್ಟಣದಲ್ಲಿ ಬಿಜೆಪಿ ಹಾಗೂ ಜೈಕರವೇ ಕಾರ್ಯಕರ್ತರು ಜಂಟಿಯಾಗಿ ಶ್ರೀಕಂಠದತ್ತ ಒಡೆಯರ್ ಅವರಿಗೆ ಭಾವಪೂರ್ವ ಶ್ರದ್ಧಾಂಜಲಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ಮಾಜಿ ಶಾಸಕ ವಾಲ್ಮೀಕಿ ನಾಯಕ, ಶ್ರೀಕಂಠದತ್ತ ಒಡೆಯರ್ ಅವರು ರಾಜ್ಯಶಾಸ್ತ್ರ ಸ್ನಾತಕೋತ್ತರದಲ್ಲಿ ಚಿನ್ನದ ಪದಕ ಗಳಿಸಿ, ಕಲೆ ಸಾಹಿತ್ಯದಲ್ಲಿ ಅಪಾರ ಜ್ಞಾನ ಸಂಪಾದಿಸಿದ್ದರು. ನಾಡಿನ ಹಾಗೂ ಜನರ ಹಿತಕ್ಕಾಗಿ ಹಲವಾರು ಕೊಡುಗೆ ನೀಡಿದ ರಾಜವಂಶದ ಕೊಂಡಿ ಕಳಚಿದೆ ಎಂದರು. ಸಿದ್ದಣ್ಣ ಕಲಶೆಟ್ಟಿ, ಬಸವರಾಜ ಪಂಚಾಳ, ಹರಿ ಗಲಾಂಡೆ, ಕಾರ್ಯದರ್ಶಿ ವೀರಣ್ಣ ಯಾರಿ, ಸುನೀಲ್ ಪೋನ್ನಾ, ಕಿಶಾನ ಜಾಧವ, ಅಶೋಕ ಬಾಜಿರಾವ, ಗಿರಿಮಲ್ಲಪ್ಪ ಕಟ್ಟಮನಿ, ದೀಪಕಕುಮಾರ್ ರಾಠೋಡ, ಶ್ರಿರಾಮ ರಾಠೋಡ, ಗುರುರಾಜ, ತಾಯಪ್ಪ, ಅಖಿಲಸಾಬ್, ಮಹಿಬೂಬ್ ಪಟೇಲ್, ಯೋಗಪೀಠದ ಶಿಕ್ಷಕ ಆರ್.ಆರ್. ಪಾಂಡೆ ಸೇರಿದಂತೆ ಇತರರು ಇದ್ದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.