1.85 ಲಕ್ಷ ವೆಚ್ಚದಲ್ಲಿ ಜೋಡು ರಸ್ತೆ
ಮುದಗಲ್: ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಪಟ್ಟಣದ ಪೊಲೀಸ್ ಠಾಣೆಯಿಂದ ಮಸ್ಕಿ ಅಡ್ಡರಸ್ತೆವರೆಗೆ ಜೋಡು ರಸ್ತೆ ನಿರ್ಮಾಣ ಮಾಡಲು ಸರ್ವೆ ಕಾರ್ಯ ಆರಂಭಿಸಲಾಗಿದೆ ಎಂದು ಪಪಂ ಅಧ್ಯಕ್ಷ ರಜ್ಜಬಲಿ ಟಿಂಗ್ರಿ ಹೇಳಿದರು.
2013- 14ನೇ ಸಾಲಿನ ಎಸ್ಎಫ್ಸಿ ಯೋಜನೆಯ 35 ಲಕ್ಷ ಮತ್ತು 1.50 ಕೋಟಿ ವಿಶೇಷ ಅನುದಾನ ನೀಡುವಂತೆ ಮಾಡಿದ ಮನವಿಗೆ ಸಿಎಂ ಸ್ಪಂದಿಸಿದ್ದು, ಬೆಂಗಳೂರಿನ ಆರ್.ಟೆಕ್ ಡಿಜೈನರ್ ಸಂಸ್ಥೆಯಿಂದ ರಸ್ತೆ ಸರ್ವೆ ನಡೆದಿದೆ.
ಸುಮಾರು 1.3 ಕಿಮೀ ಉದ್ದ, 40 ಫೀಟ್ ಅಗಲ ರಸ್ತೆಯ ಮಧ್ಯ ಡಿವೈಡರ್ ನಿರ್ಮಿಸಿ ಬೀದಿ ದೀಪಗಳನ್ನು ಅಳವಡಿಸಲು ಯೋಜನೆ ಸಿದ್ಧಪಡಿಸಲಾಗಿದೆ ಎಂದರು. ಸರ್ವೆ ಸಮಯದಲ್ಲಿ ಸದಸ್ಯರಾದ ಮಹ್ಮದ್ಸಾದಿಕ್ ಅಲಿ, ವೀರೇಶ ವಡ್ಡರ, ಖಾಜಾಪಾಷಾ ಗಾಡಿವಾನ ಮುಂತಾದವರು ಉಪಸ್ಥಿತರಿದ್ದರು. ಪ್ರಗತಿಯಲ್ಲಿ - ಪೊಲೀಸ್ ಠಾಣೆಯಿಂದ ಮಸ್ಕಿ ಅಡ್ಡರಸ್ತೆವರೆಗೆ ಈಗಾಗಲೇ 2010- 11, 2011- 12ನೇ ಸಾಲಿನ ಎಸ್ಎಫ್ಸಿ ಅನುದಾನದಲ್ಲಿ 60 ಲಕ್ಷ ವೆಚ್ಚದಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿ ನಡೆದಿರುವಾಗದಲೇ ಮತ್ತೆ ಸರ್ವೆ ಮಾಡಿಸಿ ಜೋಡು ರಸ್ತೆ ಮಾಡಿಸಲು ಮುಂದಾಗಿರುವ ಪಪಂ ಆಡಳಿತ ಮಂಡಳಿಯ ವೈಖರಿ ಸರಿಯೇ ಎನ್ನುವ ಪ್ರಶ್ನೆ ಸಾರ್ವಜನಿಕರದ್ದು.
ರಸ್ತೆ ಕಾಮಗಾರಿ ಅಭಿವೃದ್ಧಿಪಡಿಸಿದ್ದನ್ನು ಪುನಾ ಇದೇ ರಸ್ತೆ ಅಭಿವೃದ್ಧಿಪಡಿಸುವ ಬದಲು ಮೇಗಳಪೇಟೆಯಿಂದ ಸರ್ಕಾರಿ ಆಸ್ಪತ್ರೆವರೆಗೆ ರಾಜ್ಯ ಹೆದ್ದಾರಿ ಹೊಂದಿದ್ದು, ವಾಹನಗಳ ಓಡಾಟ ಹೆಚ್ಚಿದ್ದು ಇಲ್ಲಿ ಜೋಡು ರಸ್ತೆ ಮಾಡುವುದು ಅಗತ್ಯ. ರಸ್ತೆ ಅಗಲೀಕರಣವಾಗಿದ್ದು ಜೋಡು ರಸ್ತೆ ಮಾಡಲು ಸೂಕ್ತವಾಗಿದೆ. ಪಟ್ಟಣಕ್ಕೂ ಮೆರಗು ಬರುವುದಲ್ಲದೆ ಸಂಚಾರ ದಟ್ಟಣೆ ತಡೆಯಲು ಅನುಕೂಲವಾಗುತ್ತದೆ ಎನ್ನುವುದು ಅಭಿವೃದ್ಧಿ ಚಿಂತಕರ ಅಭಿಪ್ರಾಯ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

