ರಾಯಚೂರು

ದಿ. ಈರಣ್ಣ ಪುತ್ಥಳಿ ಸ್ಥಾಪನೆಗೆ ಆಗ್ರಹ

Published On :

ರಾಯಚೂರು: ನಗರದ ಸರ್ವ ಜನಾಂಗದ ನಾಯಕರೆನಿಸಿದ್ದ ದಿ. ಎಂ. ಈರಣ್ಣ ಅವರ ಪುತ್ಥಳಿ ಸ್ಥಾಪಿಸುವಲ್ಲಿ ನಗರಸಭೆ ಆಡಳಿತ ನಿರ್ಲಕ್ಷ್ಯ ತೋರುತ್ತಿದೆ.  ನಿರ್ಲಕ್ಷ್ಯ ಖಂಡಿಸಿ ಫೆ. 7ರಂದು ನಡೆಯಲಿರುವ ನಗರಸಭೆಯ ಸಾಮಾನ್ಯ ಸಭೆಗೆ ಘೇರಾವ್ ಹಾಕುವುದಾಗಿ ಮಾದಿಗ ದಂಡೋರಾ ಮಾದಿಗ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ನರಸಪ್ಪ ದಂಡೋರಾ ಎಚ್ಚರಿಸಿದರು.
ನಗರದಲ್ಲಿ ಬುಧವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದಿ. ಎಂ. ಈರಣ್ಣ ಅವರು ನಗರದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಂಥ ನಾಯಕನ ನಿಧನದ ನಂತರ ನಗರಸಭೆ ಆಡಳಿತವು ಅವರ ಪುತ್ಥಳಿಯನ್ನು ನಗರದ ಶಶಿಮಹಲ್ ಚಿತ್ರಮಂದಿರದ ಬಳಿ ಸ್ಥಾಪಿಸಲು ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡಿದೆ. ಆದರೆ ನಿರ್ಣಯದ ಜಾರಿಗೆ ಆಸಕ್ತಿ ತೋರಿಲ್ಲ ಎಂದು ಆರೋಪಿಸಿದರು.
ಹಣ ಬಿಡುಗಡೆಗೆ ಮೀನಮೇಷ: ಈ ವಿಷಯಕ್ಕೆ ಸಂಬಂಧಿಸಿ ದಿ. ಎಂ. ಈರಣ್ಣನವರ ಅಭಿಮಾನಿಗಳು, ವಿವಿಧ ಸಂಘಟನೆಗಳು ಹೋರಾಟ ನಡೆಸಿದ ಸಂದರ್ಭದಲ್ಲಿ ನಗರಸಭೆಯ ಆಡಳಿತ ಪುತ್ಥಳಿ ಸ್ಥಾಪನೆಯ ಭರವಸೆ ನೀಡಿ ನಂತರ ಮರೆತಿದೆ. ಈಗಾಗಲೇ ಪುತ್ಥಳಿಯು ಸಂಪೂರ್ಣ ಸಿದ್ಧವಾಗಿದ್ದು, ಅದನ್ನು ನಗರಕ್ಕೆ ಸಾಗಿಸಿ ಸ್ಥಾಪಿಸಲು ಅಗತ್ಯವಿರುವ ಬಾಕಿ ಮೊತ್ತದ ಬಿಡುಗಡೆಗೆ ಮೀನಮೇಷ ಎಣಿಸಲಾಗುತ್ತಿದೆ ಎಂದು ಟೀಕಿಸಿದರು.
ಎಂ. ಈರಣ್ಣನವರು ನಿಧನರಾಗಿ ಎರಡು ವರ್ಷ ಗತಿಸಿದರೂ ನಗರಸಭೆಯ ಆಡಳಿತವು ಅವರ ಪುತ್ಥಳಿ ಸ್ಥಾಪಿಸಿ ಗೌರವ ಸಲ್ಲಿಸುವ ಕಾರ್ಯ ಮಾಡಿಲ್ಲ. ಕೂಡಲೇ ಎಂ. ಈರಣ್ಣನವರ ಪುತ್ಥಳಿಗೆ ಬಾಕಿ ಉಳಿಸಿಕೊಂಡಿರುವ ಹಣವನ್ನು ಗುತ್ತಿಗೆದಾರರಿಗೆ ಬಿಡುಗಡೆ ಮಾಡಿ ಪುತ್ಥಳಿ ತಂದು ನಗರದಲ್ಲಿ ಈಗಾಗಲೇ ನಿಗದಿ ಮಾಡಿದ ಸ್ಥಳದಲ್ಲಿಯೇ ಸ್ಥಾಪಿಸುವಂತೆ ಆಗ್ರಹಿಸಿದರು.
ನಗರಸಭೆ ಆಡಳಿತವು ಕೂಡಲೇ ದಿನಾಂಕ ನಿಗದಿ ಮಾಡಬೇಕು. ಈ ನಿಟ್ಟಿನಲ್ಲಿ ಫೆ.7ರಂದು ನಗರಸಭೆಯ ಸಾಮಾನ್ಯ ಸಭೆಯು ನಡೆಯಲಿದ್ದು, ಸಭೆಯ ಸ್ಥಳಕ್ಕೆ ಘೇರಾವ್ ಹಾಕುವುದಾಗಿ ಎಚ್ಚರಿಸಿದ ಅವರು, ವಿವಿಧ ಸಂಘಟನೆಗಳ ಕಾರ್ಯಕರ್ತರು ಈ ಹೋರಾಟದಲ್ಲಿ ಭಾಗವಹಿಸಲಿದ್ದಾರೆಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.