ರಾಯಚೂರು

ಪ್ರಹ್ಲಾದ ಗುಡಿ ಪತ್ರಕರ್ತರ ಸಂಘದ ಅಧ್ಯಕ್ಷ

Published On :

ಸಿಂಧನೂರು: ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕಕ್ಕೆ ನೂತನ ಅಧ್ಯಕ್ಷರಾಗಿ ಕನ್ನಡಪ್ರಭ ತಾಲೂಕು ವರದಿಗಾರ ಪ್ರಹ್ಲಾದ ಗುಡಿ ಅವಿರೋಧವಾಗಿ ಆಯ್ಕೆಯಾದರು.
ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಚುನಾವಣಾ ವೀಕ್ಷಕರಾಗಿ ಬಂದಿದ್ದ ಜಿಲ್ಲಾ ಕಾರ್ಯದರ್ಶಿ ಜಯರಾಂ, ಕಾರ್ಯಕಾರಿ ಸಮಿತಿ ಸದಸ್ಯರಾದ ಎನ್.ನಾಗರಾಜ, ಸಮ್ಮುಖದಲ್ಲಿ ನಡೆದ ನೂತನ ಪದಾಧಿಕಾರಿಗಳ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಉದಯವಾಣಿ ಗ್ರಾಮೀಣ ವರದಿಗಾರ ಡಿ.ಶರಣೇಗೌಡ, ಪ್ರಧಾನ ಕಾರ್ಯದರ್ಶಿಯಾಗಿ  ಸಿಂಧೂರ ಬಿಂಬ ಪತ್ರಿಕೆಯ ಉಪ ಸಂಪಾದಕ ಎಂ.ಭಾಸ್ಕರ್, ಕಾರ್ಯದರ್ಶಿಯಾಗಿ ಸುದ್ದಿಮೂಲ ಪತ್ರಿಕೆಯ ಬಳಗಾನೂರು ವರದಿಗಾರ ಹನುಮೇಶ ಕಮ್ಮಾರ, ಖಜಾಂಚಿಯಾಗಿ ಉದಯವಾಣಿ ಪತ್ರಿಕೆಯ ತಾಲೂಕಾ ವರದಿಗಾರ ಚಂದ್ರಶೇಖರ ಬೆನ್ನೂರು ಆಯ್ಕೆಯಾದರು. ಇನ್ನೂ ಕಾರ್ಯಕಾರಿ ಸಮಿತಿಗೆ ಸುದ್ದಿಬಿಂಬ ಪತ್ರಿಯ ಸಂಪಾದಕ ಡಿ.ಎಚ್. ಕಂಬಳಿ, ಸಿಂಧೂರಬಿಂಬ ಪತ್ರಿಕೆಯ ಸಂಪಾದಕ ಎಂ.ವೀರಭದ್ರಪ್ಪ ಜವಳಗೇರಾ ಹಾಗೂ ಸುದ್ದಿಮೂಲ ಪತ್ರಿಕೆಯ ತಾಲೂಕು ವರದಿಗಾರ ಅಮರೇಶ ಅಲಬನೂರು ಆಯ್ಕೆಯಾದರು.
ಈ ಸಂದರ್ಭದಲ್ಲಿ ಪತ್ರಕರ್ತರಾದ ಶ್ಯಾಮಕುಮಾರ, ಶರಣಪ್ಪ ಕೆ.ಗೋನಾಳ, ಮಲ್ಲಿಕಾರ್ಜುನ ಚಿಲ್ಕರಾಗಿ, ಚಂದ್ರಶೇಖರ ಯರದಿಹಾಳ, ಮುಸ್ತಫಾ ಹಾಗೂ ಇತರರು ಇದ್ದರು.ಚುನಾವಣಾಧಿಕಾರಿ ಸುರೇಂದ್ರಾಚಾರ್ಯ ಕೊರ್ತಕುಂದಿ ಕಾರ್ಯನಿರ್ವಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.