ರಾಯಚೂರು

'ಎಪಿಎಂಸಿಯಲ್ಲಿ ರೈತರಿಗೆ ಅನ್ಯಾಯ'

Published On :

ಲಿಂಗಸ್ಗೂರು: ಲಿಂಗಸ್ಗೂರು ಮತ್ತು ಮುದಗಲ್ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅಮರಣ್ಣ ಗುಡಿಹಾಳ ನೇತೃತ್ವದಲ್ಲಿ ರೈತರು ಆರೋಪಿಸಿದರು.
ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಎಪಿಎಂಸಿ ಅಧ್ಯಕ್ಷ ಮಂಜುನಾಥ ಪಾಟೀಲರ ಅಧ್ಯಕ್ಷತೆಯಲ್ಲಿ ಶನಿವಾರ ಕರೆಯಲಾಗಿದ್ದ ವರ್ತಕರ ಹಾಗೂ ರೈತರ ಸಭೆಯಲ್ಲಿ ಮಾತನಾಡಿ, ಲಿಂಗಸ್ಗೂರು ಮತ್ತು ಮುದಗಲ್ ಎಪಿಎಂಸಿಯಲ್ಲಿ ರೈತರು ತಂದ ದವಸ ಧಾನ್ಯ ಮಾರುಕಟ್ಟೆಗೆ ತಂದರೆ ವರ್ತಕರು 250 ಗ್ರಾಂ ಚೀಲದಲ್ಲಿ ತೂಕ ಮಾಡಲಾಗುತ್ತಿದೆ. ನಂತರ ಈ ಚೀಲಗಳಲ್ಲಿ ಒಂದು ಕಿಲೋ ಕಳೆದು ರೈತರಿಗೆ ಅನ್ಯಾಯವೆಸಗಲಾಗುತ್ತಿದೆ.
ಅಲ್ಲದೆ ತೂಕದ ಯಂತ್ರದಲ್ಲಿ ಒಂದು ಭರ್ತಿ ಚೀಲ ಇಟ್ಟು ವ್ಯಾಪಾರ ಮಾಡಲು ಕ್ರಮ ಕೈಗೊಂಡರೂ ಗಮನ ಹರಿಸಿಲ್ಲ. ಪ್ರತಿ ಚೀಲಕ್ಕೆ 2 ಕೆಜಿ ಬಾದ್ ತೆಗೆಯುವ ಜೊತೆಗೆ 500 ಗ್ರಾಂ ಹೆಚ್ಚುವರಿಯಾಗಿ ಮುಂಗಾಲು ತೂಕವನ್ನು ತೆಗೆದುಕೊಳ್ಳಲಾಗುತ್ತಿದೆ. ಮಾರುಕಟ್ಟೆಯಲ್ಲಿ ರೈತರ ಮೇಲೆ ಗಧ ಪ್ರಹಾರ ನಡೆಯುತ್ತಿದ್ದು, ರೈತರು ಶೋಷಣೆಗೆ ಒಳಗಾಗುತ್ತಿದ್ದಾರೆ. ಇದನ್ನು ತಪ್ಪಿಸಲು ಟೆಂಡರ್ ಪ್ರಕ್ರಿಯೆ ಆರಂಭಿಸುವಂತೆ ಒತ್ತಾಯಿಸಿದರು. ರೈತರ ಮನವಿ ಆಲಿಸಿದ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು, ಪ್ಲಾಸ್ಟಿಕ್ ಅಥವಾ ಬಿಳಿ ಚೀಲದ ಬದಲಾಗಿ ಒಂದು ಕೆಜಿ ಭಾರವುಳ್ಳ ಚೀಲದಲ್ಲಿ ಒಂದೆ ಭರ್ತಿಯಲ್ಲಿ ತೂಕ ಮಾಡಬೇಕು. ಹೆಚ್ಚುವರಿಯಾಗಿ 500 ಗ್ರಾಂ ಮುಂಗಾಲು ತೂಕದ ಬದಲು 200 ಗ್ರಾಂ ಹೆಚ್ಚುವರಿ ತೆಗೆದುಕೊಳ್ಳಲು ಒಪ್ಪಿಗೆ ಸೂಚಿಸುವ ಮೂಲಕ ರೈತರಿಗೆ ಅನ್ಯಾಯವಾಗದಂತೆ ಪ್ರತಿ ದಿನ ಟೆಂಡರ್ ಪ್ರಕ್ರಿಯೆ ಖರೀದಿ ಮಾಡಿ ವ್ಯಾಪಾರ ವಹಿವಾಟು ಮಾಡುವಂತೆ ಸಭೆಯಲ್ಲಿ ನಿರ್ಣಯಿಸಲಾಯಿತು. ಸಭೆಯಲ್ಲಿ ಎಪಿಎಂಸಿ ನಿರ್ದೇಶಕರು, ವರ್ತಕರು ಹಾಗೂ ರೈತರು  ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.