ಸಿಂಧನೂರು ನಗರಸಭೆ: 2.71 ಲಕ್ಷ ಉಳಿತಾಯ ಬಜೆಟ್
ಸಿಂಧನೂರು: ನಗರಸಭೆ ಆಡಳಿತ ಮಂಡಳಿಯ ಅವಧಿ ಫೆ. 10ರಂದು ಕೊನೆಗೊಳ್ಳಲಿದ್ದು, 2013- 14ನೇ ಸಾಲಿನ ಆಯವ್ಯಯವನ್ನು ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಗೋವಿಂದರಾವ್ ಕುಲಕರ್ಣಿ ಶನಿವಾರ ಮಂಡಿಸಿದರು.
ವಿವಿಧ ಮೂಲಗಳಿಂದ 18,92,44,709 ಆದಾಯ ಸಂಗ್ರಹವಾಗುವ ನಿರೀಕ್ಷೆ ಇಟ್ಟುಕೊಂಡು 18,89,72,909 ಖರ್ಚನ್ನು ಅಂದಾಜಿಸಿರುವುದರಿಂದ 2,71,800 ಉಳಿತಾಯವಾಗುತ್ತದೆ ಎಂದು ಹೇಳಿದರು.
ಆದಾಯ ಅಂದಾಜು: ಆಸ್ತಿ ತೆರಿಗೆಯಿಂದ 1.37 ಕೋಟಿ, ಟೋಲ್ ಶುಲ್ಕದಿಂದ 2.51 ಲಕ್ಷ, ಸಾಮಾನ್ಯ ನೀರಿನ ಕರದಿಂದ 10 ಸಾವಿರ, ಜಾಹೀರಾತಿನಿಂದ 1.10 ಲಕ್ಷ, ಬಡ್ಡಿಯಿಂದ 5 ಸಾವಿರ, ಬ್ಯಾಂಕ್ ಬಡ್ಡಿಯಿಂದ 50 ಸಾವಿರ, ನೀರು ಸರಬರಾಜು ತೆರಿಗೆ 1.25 ಕೋಟಿ ಸೇರಿದಂತೆ ಮತ್ತಿತರ ಮೂಲಗಳಿಂದ 18,92,44,709 ಆದಾಯ ಸಂಗ್ರಹವಾಗಬಹುದು.
ಖರ್ಚು ಅಂದಾಜು: ಅಧ್ಯಕ್ಷರ, ಸದಸ್ಯರ ಗೌರವಧನಕ್ಕೆ 4.80 ಲಕ್ಷ, ಕಾರ್ಯಾಲಯ ಸಿಬ್ಬಂದಿ ವೇತನ 42.49 ಲಕ್ಷ, ಕಾರ್ಯಾಲಯ ತಾತ್ಕಾಲಿಕ ಸಿಬ್ಬಂದಿ ವೇತನ 3.10 ಲಕ್ಷ, ಕಾರ್ಯಾಲಯ ಸಾದಿಲ್ವಾರಿಗೆ 4.09 ಲಕ್ಷ, ಕಂಪ್ಯೂಟರ್ ಪರಿಪೂರಕ ಸಾಮಗ್ರಿಗಳ ಖರೀದಿಗೆ 1 ಲಕ್ಷ, ಸಿಬ್ಬಂದಿಗೆ ವೈದ್ಯಕೀಯ ಮತ್ತಿತರ ಸೌಲಭ್ಯಕ್ಕೆ 1 ಲಕ್ಷ, ದೂರವಾಣಿಗೆ 2.20 ಲಕ್ಷ, ಪ್ರಯಾಣ ಭತ್ಯೆ 1 ಲಕ್ಷ, ಸ್ಪೇಷನರಿ 8 ಲಕ್ಷ ಸೇರಿದಂತೆ ಮತ್ತಿತರ ಕಾರ್ಯಗಳಿಗೆ ಸುಮಾರು 18,89,72,909 ಖರ್ಚಾಗಬಹುದು ಎಂದು ವಿವರಿಸಿದರು.
ಸಾಧನೆ: 2012- 13ನೇ ಸಾಲಿನಲ್ಲಿ ಸಾಧಿಸಿದ ವರದಿಯನ್ನು ಹೇಳಿದ ನಗರಸಭೆ ಅಧ್ಯಕ್ಷೆ ಯಮನಮ್ಮ ಕರ್ನಿ, ಶೇ. 22.72 ಅನುದಾನದಲ್ಲಿ ಪಿಯುಸಿ ಪದವಿ ಸೇರಿದಂತೆ ವಿವಿಧ ಉನ್ನತ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿಗಳಿಗೆ ಸಹಾಯಧನ ನೀಡಲಾಗಿದೆ. ಚಮ್ಮಾರಿಕೆ ಹೊಲಿಗೆ ಯಂತ್ರ ಮತ್ತು ಆಟೋ ಖರೀದಿಸಲು ಸಾಲದ ಸಬ್ಸಿಡಿ ನೀಡಲಾಗಿದೆ. 2006 ರಿಂದ ಜನನ- ಮರಣಗಳ ನೋಂದಣಿಯನ್ನು ಆನ್ಲೈನ್ ಮೂಲಕ ನಿರ್ವಹಿಸಲಾಗುತ್ತಿದೆ. ಸಕಾಲ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಕಾರ್ಯಾಲಯದ ದಾಖಲೆಗಳನ್ನು ಗಣಕೀಕರಣಗೊಳಿಸಲಾಗಿದೆ. ಕುಡಿವ ನೀರು ಸಮರ್ಪಕ ಪೂರೈಕೆ ಮಾಡಲು ಪ್ರಯತ್ನಸುವ ಕಾರ್ಯ ನಡೆದಿದೆ.
ತೆರಿಗೆ ವಸೂಲಿಯಲ್ಲಿ ಶೇ.96 ಗುರಿ ಸಾಧನೆ: ನಗರಸಭೆಯ ನೂತನ ಕಚೇರಿಯನ್ನು 1.50 ಕೋಟಿಯಲ್ಲಿ ನಿರ್ಮಿಸಲಾಗಿದೆ. ಕುಂದುಕೊರತೆ ಘಟಕ ಸ್ಥಾಪಿಸಿ 12 ಗಂಟೆಗಳ ಕಾಲ ಸೇವೆ ನೀಡಲಾಗುತ್ತದೆ.
ತೆರಿಗೆ ವಸೂಲಾತಿಯಲ್ಲಿ ಶೇ. 86ರಷ್ಟು ಗುರಿ ಸಾಧಿಸಲಾಗಿದೆ. ನಗರದ ವಿವಿಧ ವಾರ್ಡ್ಗಳಲ್ಲಿ ಆರ್ಸಿಸಿ ಚರಂಡಿ ನಿರ್ಮಿಸಿ ನೀರು ಹರಿದುಹೋಗಲು ಅನುಕೂಲ ಕಲ್ಪಿಸಲಾಗಿದೆ. 180 ಜನ ನಿರಾಶ್ರಿತರಿಗೆ ಏಳರಾಗಿ ಕ್ಯಾಂಪಿನಲ್ಲಿ ನಿವೇಶನ ಹಂಚಿಕೆ ಮಾಡಲಾಗಿದೆ ಎಂದರು.
ಸಭೆಯ ಅಧ್ಯಕ್ಷೆತೆಯನ್ನು ನಗರಸಭೆ ಉಪಾಧ್ಯಕ್ಷ ಎಂ.ಡಿ. ನದೀಮ್ಮುಲ್ಲಾ ವಹಿಸಿದ್ದರು. ಸಭೆಯಲ್ಲಿ ಸದಸ್ಯರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

