ಕೆಳಭಾಗದ ರೈತರಿಗೆ ಸಮರ್ಪಕ ನೀರು ಪೂರೈಕೆಗೆ ಬದ್ಧ: ಶಾಸಕ
ಸಿಂಧನೂರು: ಕೆಳಭಾಗದ ರೈತರಿಗೆ ನೀರು ಪೂರೈಕೆ ಮಾಡಲು ತಮ್ಮ ಶಕ್ತಿ ಮೀರಿ ಪ್ರಯತ್ನಿಸುವುದಾಗಿ ಶಾಸಕ ವೆಂಕಟರಾವ್ ನಾಡಗೌಡ ಭರವಸೆ ನೀಡಿದರು.
ರೌಡಕುಂದಾ ಗ್ರಾಮದಲ್ಲಿ ಶನಿವಾರ ಜೆಡಿಎಸ್ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿ, ತಾಲೂಕಿನ ಎಡದಂಡೆ ನಾಲೆಯ ದುರಸ್ತಿಗೆ ತಮ್ಮ ಅವಧಿಯಲ್ಲಿ ಸುಮಾರು 250ರಿಂದ 350 ಕೋಟಿ ಅನುದಾನ ಬಿಡುಗಡೆಗೊಳಿಸಿ ಶ್ರಮಿಸಿದ್ದೇನೆ. ಕಳೆದ 40 ವರ್ಷಗಳಲ್ಲಿ ಈ ಕ್ಷೇತ್ರದಲ್ಲಿ ಆಯ್ಕೆಯಾದ ಜನಪ್ರತಿನಿಧಿಗಳು ಮಾಡದ ಕೆಲಸವನ್ನು ನಾನು ಮಾಡಿದ್ದೇನೆ. ಎಡದಂಡೆ ನಾಲೆ ನೀರು ಮಾ.31ರಂದು ಬಂದ್ ಆದ ನಂತರ 150 ಕೋಟಿ ಟೆಂಡರ್ ಕರೆದು ಎಡದಂಡೆ ನಾಲೆಯನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.
ಇವರ ಮಾತಿನ ಮಧ್ಯೆ ರೌಡಕುಂದಾ ಗ್ರಾಮದ ಅಗಸರ ಮುದಿಯಪ್ಪ ಮಾತನಾಡಿ, 'ಎಲ್ಲರೂ ಹೀಂಗ ಸುಳ್ಳು ಹೇಳ್ಯಾರ' ಎಂದಾಗ, ಜೆಡಿಎಸ್ ಕಾರ್ಯಕರ್ತರು ಅವರ ವಿರುದ್ಧ ಹರಿಹಾಯಲೆತ್ನಿಸಿದರು. ಆಗ ನಾಡಗೌಡರು ಆತನನ್ನು ಉದ್ದೇಶಿಸಿ ಕಾಲುವೆ ದುರಸ್ತಿ ಹಿಂದಿನ ದಿನಗಳಿಗೂ, ಈಗಿನ ದಿನಗಳಿಗೂ ನೋಡು. ಕಾಲುವೆಗಳಲ್ಲಿ ಗಿಡಗಂಟೆಗಳು ಬೆಳೆದು ಕಾಲುವೆಗಳೆಲ್ಲ ಮುಚ್ಚಿ ಹೋಗಿದ್ದವು ಎಂದು ಸಮಜಾಯಿಷಿ ನೀಡಿದರು.
ಚಾಮರಾಜಪೇಟೆಯ ಶಾಸಕ ಜಮೀರ್ ಅಹ್ಮದ್ ಖಾನ್, ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ರಾಜ್ಯಾಧ್ಯಕ್ಷ ಶಕೀಲ್ ನವಾಜ್, ನಗರಸಭೆ ಮಾಜಿ ಉಪಾಧ್ಯಕ್ಷ ಕೆ.ಜಿಲಾನಿಪಾಶಾ ಮಾತನಾಡಿದರು.
ಎಂಎಲ್ಸಿ ಅಪ್ಸರ್ ಆಗಾ, ಮಾಜಿ ಸಚಿವ ರಾಜಾ ಅಮರೇಶ ನಾಯಕ, ಜೆಡಿಎಸ್ ಜಿಲ್ಲಾಧ್ಯಕ್ಷ ಮಹಾಂತೇಶ ಪಾಟೀಲ್ ಅತ್ತನೂರು, ಕಾರ್ಯಾಧ್ಯಕ್ಷ ಯಸೂಫ್ ಖಾನ್, ಬೀದರ್ ಮಾಜಿ ಶಾಸಕ ಜುಲ್ಫಿಕರ್ ಹಾಶ್ಮಿ, ತಾಲೂಕಾಧ್ಯಕ್ಷ ಎಂ.ಲಿಂಗಪ್ಪ ದಢೇಸೂಗುರು, ವಕ್ತಾರ ಬಸವರಾಜ ನಾಡಗೌಡ, ತಾಪಂ ಸದಸ್ಯ ಚಂದ್ರಭೂಪಾಲ ನಾಡಗೌಡ, ನಗರಸಭೆ ಮಾಜಿ ಸದಸ್ಯ ಹನುಮಂತಪ್ಪ ಗುಡಿ, ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಜಾವೀದ್ ಹುಸೇನ್ ದೇಸಾಯಿ ಇತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

