3ರಂದು ಜನತಾಂತ್ರಿಕ ಮುಸ್ಲಿಂ ಸಮಾವೇಶ
ರಾಯಚೂರು: ನಗರದಲ್ಲಿ ಕೋಮು ಸೌಹಾರ್ದತೆ ಮತ್ತು ಪ್ರಜಾತಾಂತ್ರಿಕ ಹಕ್ಕುಗಳ ಕುರಿತು ಜನಸಂಗ್ರಾಮ ಪರಿಷತ್ ನಿಂದ ಫೆ. 3ರಂದು ಜನತಾಂತ್ರಿಕ ಮುಸ್ಲಿಂ ಸಮಾವೇಶವನ್ನು ಆಯೋಜಿಸಲಾಗಿದೆ.
ನಗರದ ಟಿಪ್ಪು ಸುಲ್ತಾನ್ ರಸ್ತೆಯ ಅತ್ತನೂರು ಫಂಕ್ಷನ್ ಹಾಲ್ನಲ್ಲಿ ಅಂದು ಬೆಳಗ್ಗೆ 10.30ಕ್ಕೆ ಸಮಾವೇಶದಲ್ಲಿ ಸಾಂಪ್ರದಾಯಿಕ ಸದ್ಭಾವನೆ ತೊಡಕುಗಳು ಎಂಬ ವಿಷಯದ ಕುರಿತು ನವದೆಹಲಿಯ ಫೈಸಲ್ ಖಾನ್ ಮಾತನಾಡಲಿದ್ದಾರೆ. ಇಸ್ಲಾಮೋಫೋಬಿಯಾ ಇನ್ ಸೆಕ್ಯುಲರ್ ಇಂಡಿಯಾ ಎಂಬ ವಿಷಯದ ಬಗ್ಗೆ ಹಿರಿಯ ವಕೀಲ ಮಹ್ಮದ್ ಶೋಯೇಬ್ ಮಾತನಾಡುವರು. ಮುಸ್ಲಿಮರ ಸಾಮಾಜಿಕ ಸಮಸ್ಯೆಗಳು ಮತ್ತು ಪರಿಹಾರದ ದಾರಿ ಕುರಿತು ಸಾಮಾಜಿಕ ಕಾರ್ಯಕರ್ತ ರಿಯಾಜ್ ಫಾರೂಖಿ ಉಪನ್ಯಾಸ ನೀಡಲಿದ್ದಾರೆ.
ಶಿಕ್ಷಣದ ಮಹತ್ವದ ಕುರಿತು ಶಿಕ್ಷಣ ತಜ್ಞ ಡಾ.ಮೌಲಾನಾ ಅಖ್ಲಾಖ್ ಶರ್ಫಿ ವಿಷಯ ಮಂಡಿಸುವರು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಲು ಜನಸಂಗ್ರಾಮ ಪರಿಷತ್ತಿನ ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

