ಬಿಎಸ್ಸೆನ್ನೆಲ್ ಕಾರ್ಮಿಕರ ಧರಣಿ
ಸಿಂಧನೂರು: ಜಿಲ್ಲೆಯ ಹಾಗೂ ತಾಲೂಕಿನ ಬಿಎಸ್ಸೆನ್ನೆಲ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಕಾರ್ಮಿಕರಿಗೆ ಕಾನೂನುಬದ್ಧವಾಗಿ ನೀಡಬೇಕಾಗಿದ್ದ ವೇತನ, ಭವಿಷ್ಯ ನಿಧಿ, ತುಟ್ಟಿ ಭತ್ಯೆ ನೀಡದೆ ನಿಗದಿಗಿಂತ ಹೆಚ್ಚು ವೇಳೆ ಕೆಲಸ ಕೊಟ್ಟು ಹೆಚ್ಚುವರಿ ವೇತನ ನೀಡದಿರುವುದನ್ನು ವಿರೋಧಿಸಿ ಮತ್ತು ನ್ಯಾಯಸಮ್ಮತ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸೋಮವಾರ ಕಾರ್ಮಿಕರು ಕಾರ್ಯಾಲಯ ಮುಂದೆ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ನಡೆಸಿದರು. ಬಿಎಸ್ಸೆನ್ನೆಲ್ ಸಂಸ್ಥೆಯಲ್ಲಿ ಗುತ್ತಿಗೆ ಕಾರ್ಮಿಕರಿಗಾಗಿ ಪ್ರತ್ಯೇಕ ಪಿಎಫ್ ಖಾತೆಯನ್ನು ತೆಗೆಯಬೇಕು. ಫೆ.1ರ 2001ರಿಂದ ಡಿ.31ರ ವರೆಗಿನ ಪಿಎಫ್ ಹಣ 12,20,000 ಹಾಗೂ ಜ.1ರ 2004ರಿಂದ ಡಿ.31ರ 2004ರ ವರೆಗಿನ 6,40,992 ಪಿಎಫ್ ಹಣವನ್ನು ಕಾರ್ಮಿಕರಿಗೆ ನೀಡುವಂತೆ ಆದೇಶಿಸಬೇಕು. ಪಿಎಫ್ ಉಪ ಖಾತೆಗೆ ಆಗಸ್ಟ್ 2010ರಿಂದ ಕಾರ್ಮಿಕರ ಪಿಎಫ್ ಹಣವನ್ನು ಜಮಾ ಮಾಡಬೇಕು. ಗುತ್ತಿಗೆ ಕಾರ್ಮಿಕರ ಪಿಎಫ್ ಜಮಾ ಮಾಡದಿರುವ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕು. ಗುತ್ತಿಗೆ ಕಾರ್ಮಿಕರ ಮೇ ಹಾಗೂ ಜೂನ್ ತಿಂಗಳ ವೇತನ ಹಾಗೂ ತುಟ್ಟಿ ಭತ್ಯೆ ನೀಡಬೇಕು. 2001ರಿಂದ ಬಿಎಸ್ಸೆನ್ನೆಲ್ ರಾಯಚೂರು ಸಂಸ್ಥೆಯಲ್ಲಿ ಗುತ್ತಿಗೆ ಕಾರ್ಮಿಕರಿಗೆ ಪಿಎಫ್ ನೀಡದ ಗುತ್ತೇದಾರರ ಮೇಲೆ ಮತ್ತು ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕು. 8 ಗಂಟೆಗಿಂತ ಹೆಚ್ಚು ಸಮಯ ಕೆಲಸ ಮಾಡಿಸಿಕೊಂಡರೆ ಹೆಚ್ಚುವರಿ ವೇತನ ನೀಡಬೇಕು. ಗುತ್ತಿಗೆ ಕಾರ್ಮಿಕರನ್ನು ಕಾಯಂ ಮಾಡಿ ಕನಿಷ್ಠ ವೇತನ 10 ಸಾವಿರ ನೀಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಈ ವೇಳೆ ಕಾರ್ಮಿಕ ಸಂಘದ ಅಧ್ಯಕ್ಷ ಮೃತ್ಯುಂಜಯ್ಯ, ವಿಠಲ್ ಉಪ್ಪಾರ, ಗೌತಮ್, ಮುನಿರಪಾಷ, ಪಿ.ರಾಮಣ್ಣ, ನಾಗರಾಜ, ಶಿವರಾಜ, ಪಿ.ದುರುಗಪ್ಪ, ಪಾಲಾಕ್ಷಯ್ಯಸ್ವಾಮಿ, ಉಮೇಶ, ಬಾಬು, ಅಬ್ದುಲ್ ರಹೀಂ, ಪಂಪಾಪತಿ, ಬಸ್ಸಪ್ಪ, ಮಹ್ಮದ್ ರಫಿ, ನಾಗರಾಜ ಬಾರಕೇರ, ಬಸವರಾಜ ಬಾರಕೇರ, ಬಾಷ, ವಲಿ, ಮಲ್ಲಪ್ಪ, ಎಚ್.ದುರುಗಪ್ಪ, ಖಾಜಾ ಮೈನುದ್ದೀನ್, ನೂರಮಹ್ಮದ್ ಇದ್ದರು.
ದಿನೇಶಗೆ ಹೂಗಾರ ಸ್ಮಾರಕ ಪ್ರಶಸ್ತಿ
ಯಾದಗಿರಿ: ಕರ್ನಾಟಕ ಮೀಡಿಯಾ ಮತ್ತು ನ್ಯೂಸ್ ಸೆಂಟರ್, ಪತ್ರಕರ್ತರ ವೇದಿಕೆ ಬೆಂಗಳೂರು ಆಶ್ರಯದಲ್ಲಿ ಬೆಂಗಳೂರಿನ ಕನ್ನಡ ಭವನದ ನಯನ ಸಭಾಂಗಣದಲ್ಲಿ ಪತ್ರಿಕಾ ದಿನಾಚರಣೆ ನಿಮಿತ್ತ ಏರ್ಪಡಿಸಿದ್ದ ಸಮಾರಂಭದಲ್ಲಿ ಇಲ್ಲಿಯ ವರದಿಗಾರ ದಿನೇಶ ವಿ.ಸಿ. ಅವರಿಗೆ ಹೂಗಾರ ಸ್ಮಾರಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಳೆದ 10 ವರ್ಷಗಳಿಂದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ದಿನೇಶ ಅವರು ಕಾರ್ಯನಿರತ ಪತ್ರಕರ್ತರ ಸಂಘದ ಯಾದಗಿರಿ ತಾಲೂಕಾಧ್ಯಕ್ಷರಾಗಿಯೂ ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಹಾಂತಲಿಂಗ ಶಿವಾಚಾರ್ಯರು, ವೇದಿಕೆ ಅಧ್ಯಕ್ಷ ಮಹೇಶಬಾಬು ಸರವೆ, ಚಿತ್ರನಟಿ ರೂಪಿಕಾ, ರಾಘವೇಂದ್ರ ಗಂಗಾವತಿ, ಜಿ.ಎಸ್. ಗೋನಾಳ ಇತರರು ಪ್ರಶಸ್ತಿ ನೀಡಿ ದಿನೇಶ ಅವರನ್ನು ಸನ್ಮಾನಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

