ರಾಯಚೂರು

ಸುದ್ದಿ ಸಂಕ್ಷೇಪ

Published On :

ಬಿಎಸ್ಸೆನ್ನೆಲ್ ಗುತ್ತಿಗೆ ಕಾರ್ಮಿಕರ ಧರಣಿ
ದೇವದುರ್ಗ:
ಬಿಎಸ್ಸೆನ್ನೆಲ್‌ನ ಗುತ್ತಿಗೆ ಕಾರ್ಮಿಕರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪಟ್ಟಣದಲ್ಲಿ ಬುಧವಾರ ಕರ್ನಾಟಕ ರಾಜ್ಯ ಬಿಎಸ್ಸೆನ್ನೆಲ್ ಗುತ್ತಿಗೆ ಕಾರ್ಮಿಕರ ಯೂನಿಯನ್‌ನ ತಾಲೂಕು ಸಮಿತಿ ಧರಣಿ ಆರಂಭಿಸಿದೆ. ಸಂಸ್ಥೆಯಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಕಾನೂನುಬದ್ಧವಾಗಿ ನೀಡಬೇಕಿರುವ ವೇತನ, ಭವಿಷ್ಯ ನಿಧಿ, ತುಟ್ಟಿ ಭತ್ಯೆ ನೀಡದೇ ಪ್ರತಿ ದಿನ 8 ಗಂಟೆಗೂ ಅಧಿಕ ಸಮಯ ದುಡಿಸಿಕೊಳ್ಳಲಾಗುತ್ತಿದೆ. ಹೆಚ್ಚುವರಿ ದುಡಿಮೆಗೆ ವೇತನ ಕೂಡಾ ನೀಡುತ್ತಿಲ್ಲ ಎಂದು ಆರೋಪಿಸಿದರು. ತಮ್ಮ ಬೇಡಿಕೆ ಈಡೇರಿಸುವವರೆಗೆ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು. ಈ ವೇಳೆ ಸಂಘದ ಅಧ್ಯಕ್ಷ ವಿಶ್ವನಾಥರೆಡ್ಡಿ ಹಿರೇಬೂದೂರು, ಉಪಾಧ್ಯಕ್ಷ ಭೀಮಣ್ಣ ದೇವದುರ್ಗ, ಅಮರೇಶ ಸ್ವಾಮಿ ಗಾಣದಾಳ, ವಸಂತ ಜಾಲಹಳ್ಳಿ, ಹನುಮಂತ್ರಾಯ, ರಾಮು, ಬಸನಗೌಡ, ಮಹೇಶ ಇದ್ದರು.
ರೇವಗ್ಗಿ; 180 ರೋಗಿಗಳಿಗೆ ಚಿಕಿತ್ಸೆ
ಗುಲ್ಬರ್ಗ
: ಚಿತ್ತಾಪುರ ತಾಲೂಕಿನ ರೇವಗ್ಗಿ ಗ್ರಾಮದಲ್ಲಿ ಗುಲ್ಬರ್ಗ ಜಿಲ್ಲಾ ಆಯುಷ್ ಇಲಾಖೆ ಮತ್ತು ಚಿತ್ತಾಪುರ ತಾಲೂಕು ಆಯುಷ್ ವೈದ್ಯಾಧಿಕಾರಿಗಳ ಸಂಯೋಜನೆಯೊಂದಿಗೆ ಉಚಿತ ಆಯುಷ್ ಆರೋಗ್ಯ ಶಿಬಿರದಲ್ಲಿ 180 ರೋಗಿಗಳ ತಪಾಸಣೆ ನಡೆಸಿ ಔಷಧೋಪಚಾರದೊಂದಿಗೆ ಯಶಸ್ವಿಯಾಗಿ ನೆರವೇರಿಸಲಾಯಿತು ಎಂದು ಆಯುಷ್ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೇವಗ್ಗಿ ಗ್ರಾಪಂ ಅಧ್ಯಕ್ಷೆ ಶಾಂತಾಬಾಯಿ ಅಂಬಾರಾಯ ಸುತಾರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಆಯುಷ್ ನೋಡಲ್ ಅಧಿಕಾರಿ ಡಾ. ಪ್ರದೀಪ ಪಾಟೀಲ್ ಹಾಗೂ ರಟಕಲ್‌ನ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ. ಅಲಿಬಾಬಾ ಭಾಗವಹಿಸಿದ್ದರು. ಶಿಬಿರದಲ್ಲಿ ಚಿತ್ತಾಪುರ ತಾಲೂಕಿನ ಆಯುಷ್ ವೈದ್ಯಾಧಿಕಾರಿ ಡಾ. ಕೆ.ಬಿ. ಬಬಲಾದಿ, ಡಾ. ಸುಧೀರ್ ಕುಳಗೇರಿ, ಡಾ. ಕೋರಿ, ಡಾ. ವೇಣುಗೋಪಾಲರೆಡ್ಡಿ, ಡಾ. ಸುಜಾತಾ ಪಾಟೀಲ್, ಡಾ. ಶಕೀಲ್ ಅಹ್ಮದ್, ಡಾ. ಉಮಾಶಂಕರ ಹಿರೇಮಠ ಅವರು ಚಿಕಿತ್ಸೆ ನೀಡಿದರು.
ಅಧ್ಯಕ್ಷರ ಆಯ್ಕೆ
ಗುಲ್ಬರ್ಗ:
ಬಿಜೆಪಿ ಪಕ್ಷದ ಸಂಘಟನೆ ದೃಷ್ಟಿಯಿಂದ ಗುಲ್ಬರ್ಗ ಉತ್ತರ ಮತ್ತು ದಕ್ಷಿಣ ಮಂಡಲಗಳ ಅಧ್ಯಕ್ಷರ ಆಯ್ಕೆಯು ಸ್ಥಾನಿಯ ಸಮಿತಿಗಳ ಮುಖಾಂತರ ಎಲ್ಲ ಸಮಾಲೋಚನೆಯ ನಂತರ ಆಯ್ಕೆ ಮಾಡಲಾಯಿತು. ಗುಲ್ಬರ್ಗ ಉತ್ತರ ಮಂಡಲ ಅಧ್ಯಕ್ಷರಾಗಿ ವಿಜಯಕುಮಾರ ಹಲಕಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಚನ್ನವೀರ ಲಿಂಗನವಾಡಿ, ಅಂಬು ಡಿಗ್ಗಿ, ಗುಲ್ಬರ್ಗ ದಕ್ಷಿಣ ಮಂಡಲ ಅಧ್ಯಕ್ಷ ನರಹರಿ ಡಿ. ಪಾಟೀಲ್, ಪ್ರಧಾನ ಕಾರ್ಯದರ್ಶಿಯಾಗಿ ರಾಜು ದೇವದುರ್ಗ, ಚಂದ್ರಶೇಖರ ನೇಮಕಗೊಂಡರು. ಗುಲ್ಬರ್ಗ ನಗರ ಉಸ್ತುವಾರಿಗಳಾದ ಬೆಳಗಾವಿ ಲೋಕಸಭಾ ಸದಸ್ಯ ಸುರೇಶ ಅಂಗಡಿ ಮತ್ತು ಶಿವಾನಂದ ಕಲ್ಲೂರ ಪದಾಧಿಕಾರಿಗಳ ಹೆಸರನ್ನು ಘೋಷಣೆ ಮಾಡಿದರು. ನಗರ ಜಿಲ್ಲಾಧ್ಯಕ್ಷ ವಿದ್ಯಾಸಾಗರ ಶಾಬಾದಿ, ರೇವುನಾಯಕ ಬೆಳಮಗಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.