ರಾಯಚೂರು

ಡೆಂಘೀ, ಚಿಕೂನ್ ಗುನ್ಯಾ ಜನಜಾಗೃತಿ

Published On :

ರಾಯಚೂರು: ಡೆಂಘೀ, ಚಿಕೂನ್ ಗುನ್ಯಾ ಮತ್ತು ಏಡ್ಸ್ ಕುರಿತು ಈಚೆಗೆ ತಾಲೂಕಿನ ಗೋನ್ವಾರ್ ಗ್ರಾಮದಲ್ಲಿ ಸಾಪ್ತಾಹಿಕ ಜನಜಾಗೃತಿ ಮತ್ತು ಬೀದಿನಾಟಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಎಫ್‌ಪಿಎ ಇಂಡಿಯಾ ಮತ್ತು ಗೋನ್ವಾರ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಗ್ರಾಮದಲ್ಲಿ ರೋಗಗಳ ಹರಡುವಿಕೆ ತಡೆ ಕುರಿತು ಜಾಗೃತಿ ಜಾಥಾ ನಡೆಸಿದರು. ನಂತರ ಬೀದಿ ನಾಟಕದ ಮೂಲಕ ಜಾಗೃತಿ ಮೂಡಿಸಲಾಯಿತು. ಎಫ್‌ಪಿಎ ಸಂಸ್ಥೆಯ ಕಾರ್ಯಕರ್ತ ವೇಣುಗೋಪಾಲ ಮಾತನಾಡಿ, ಡೆಂಘೀ, ಚಿಕೂನ್ ಗುನ್ಯಾ ಹರಡುವಿಕೆಯನ್ನು ತಡೆಯುವ ಬಗ್ಗೆ ಜನತೆಗೆ ಮಾಹಿತಿ ನೀಡಿದರು. ಶಿಕ್ಷಕ ವಿಘ್ನೇಶ್ವರ ಹೆಗಡೆ, ಕಾರ್ಯಕ್ರಮಾಧಿಕಾರಿ ಭೀಮರಾಯ ಜಾಲಿಬೆಂಚಿ ಮಾತನಾಡಿದರು. ಶಿಕ್ಷಕರಾದ ಸಬಿತಾ, ಶ್ರೀಕಾಂತ, ಜಯಶ್ರೀ, ಮಂಜುಳಾ, ಮುಖ್ಯಗುರು ಗೀತಾ ಮತ್ತಿತರರಿದ್ದರು.
ಎಂಎಸ್ಸಿ ರಸಾಯನಶಾಸ್ತ್ರಕ್ಕೆ ಅನುಮತಿ
ರಾಯಚೂರು: ಇಲ್ಲಿನ ತಾರಾನಾಥ ಶಿಕ್ಷಣ ಸಂಸ್ಥೆಯ ಎಲ್‌ವಿಡಿ ಕಾಲೇಜಿನಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಎಂಎಸ್ಸಿ ರಸಾಯನಶಾಸ್ತ್ರದ ಕೋರ್ಸು ಆರಂಭಿಸಲು ಸರ್ಕಾರ ಅನುಮತಿ ನೀಡಿದೆ. ಈ ಕುರಿತು ಕಾಲೇಜಿನ ಅಧ್ಯಕ್ಷ ಪಾರಸಮಲ್ ಸುಖಾಣಿ ಪ್ರಕಟಣೆ ನೀಡಿದ್ದು, ಕಳೆದ ಆರು ವರ್ಷಗಳಿಂದ ಈ ಕಾಲೇಜಿನಲ್ಲಿ ಎಂಎಸ್ಸಿ ಭೌತಶಾಸ್ತ್ರ ಕೋರ್ಸು ಕಾರ್ಯ ನಿರ್ವಹಿಸುತ್ತಿದ್ದು, ಸದ್ಯ ಎಂಎಸ್ಸಿ ರಸಾಯನಶಾಸ್ತ್ರ ಕೋರ್ಸು ಆರಂಭಕ್ಕೆ ಸರ್ಕಾರ ಅನುಮತಿ ನೀಡಿದ್ದು, ಕೋರ್ಸ್ ನಿರ್ವಹಿಸಲು ಪ್ರಯೋಗಾಲಯ, ಗ್ರಂಥಾಲಯ ಮತ್ತಿತರೆ ಸೌಲಭ್ಯಗಳನ್ನು ಕಾಲೇಜು ಹೊಂದಿದೆ ಎಂದು ತಿಳಿಸಿದ್ದಾರೆ.
ನಾಳೆ ಸಮ್ಮೇಳನ
ರಾಯಚೂರು: ಸಿಐಟಿಯು ಸಂಘಟನೆಯ ತಾಲೂಕು ಸಮ್ಮೇಳನವನ್ನು ಜು.6ರಂದು ಆಯೋಜಿಸಲಾಗಿದೆ. ನಗರದ ಮನೋರಂಜನಾ ಕೇಂದ್ರದಲ್ಲಿ ಅಂದು ಬೆಳಗ್ಗೆ 10ಕ್ಕೆ ಸಮ್ಮೇಳನವನ್ನು ಸಂಘಟನೆಯ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಸನ್ನಕುಮಾರ್ ಉದ್ಘಾಟಿಸಲಿದ್ದಾರೆ. ರಾಜ್ಯ ಕಾರ್ಯದರ್ಶಿ ಬಸವರಾಜ್ ಸೇರಿ ಸಂಘಟನೆಯ ಜಿಲ್ಲಾಧ್ಯಕ್ಷರು, ಕಾರ್ಯದರ್ಶಿಗಳು ಪಾಲ್ಗೊಳ್ಳಲಿದ್ದಾರೆ. ಸಮ್ಮೇಳನದ ಅಧ್ಯಕ್ಷತೆಯನ್ನು ತಾಲೂಕು ಅಧ್ಯಕ್ಷ ವೈ. ಈರಣ್ಣ ವಹಿಸುವರು. ಈ ಸಮ್ಮೇಳನದಲ್ಲಿ ಸಿಐಟಿಯು ಜತೆ ಸಂಯೋಜನೆಗೊಂಡ ಎಲ್ಲ ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರು ಪಾಲ್ಗೊಳ್ಳುವಂತೆ ಸಂಘಟನೆ ಮನವಿ ಮಾಡಿದೆ.
ಪ್ರಶಸ್ತಿಗೆ ಅರ್ಜಿ
ರಾಯಚೂರು: ಗುಲ್ಬರ್ಗದ ದಿ ಐಡಿಯಲ್ ಫೈನ್ ಆರ್ಟ್ ಸೊಸೈಟಿ ವತಿಯಿಂದ ನೀಡುವ ಚಿತ್ರಕಲೆ ಶಿಕ್ಷಕ ಪ್ರಶಸ್ತಿಗೆ ಅರ್ಹರಿಂದ ಅರ್ಜಿ ಕರೆಯಲಾಗಿದೆ. ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಆ.30 ಕಡೆಯ ದಿನ. ದೂ. 08472-221358 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.