ರಾಯಚೂರು

ಪಡಿತರ ಅಕ್ರಮ: ಕಾಲಾವಕಾಶಕ್ಕೆ ಮನವಿ

Published On :

ರಾಯಚೂರು: ಬಿಪಿಎಲ್ ಪಡಿತರ ಪಡೆದ ಸರ್ಕಾರಿ ನೌಕರರಿಗೆ ಎಪಿಎಲ್ ಕಾರ್ಡುಗಳನ್ನು ಪಡೆಯಲು ಕಾಲಾವಕಾಶ ನೀಡುವಂತೆ ನವರತ್ನ ಯುವಕ ಸಂಘ ಮನವಿ ಮಾಡಿದೆ.
ಈ ಕುರಿತು ಜಿಲ್ಲಾಧಿಕಾರಿಗೆ ಇತ್ತೀಚೆಗೆ ಮನವಿ ಸಲ್ಲಿಸಿರುವ ಸಂಘದ ಪ್ರಮುಖರು, ಬಡವರಿಗೆ ಅನುಕೂಲಕ ಕಲ್ಪಿಸಲು ನ್ಯಾಯಬೆಲೆ ಅಂಗಡಿಗಳ ಮೂಲಕ ಪಡಿತರ ಆಹಾರ ಧಾನ್ಯ ವಿತರಿಸಲಾಗುತ್ತಿದೆ. ಆದರೆ ನ್ಯಾಯಬೆಲೆ ಅಂಗಡಿಗಳ ಮಾಲಿಕರು ಅಕ್ರಮ ಎಸಗುವ ಮೂಲಕ ಲಾಭ ಮಾಡಿಕೊಳ್ಳುತ್ತಿದ್ದಾರೆಂದು ದೂರಿದರು.
ಈಚೇಗೆ ಜಿಲ್ಲಾಡಳಿತ ನಡೆಸಿದ ತನಿಖೆ ವೇಳೆ ಅನೇಕ ನೌಕರರು ಬಿಪಿಎಲ್ ಕಾರ್ಡು ಹೊಂದಿರುವುದು ಪತ್ತೆಯಾಗಿದೆ. ಈ ಹಿಂದೆ ಬಿಪಿಎಲ್ ಕಾರ್ಡು ಹೊಂದಿರುವ ಸರ್ಕಾರಿ ನೌಕರರ ಪಟ್ಟಿ ನೀಡುವಂತೆ ನ್ಯಾಯಬೆಲೆ ಅಂಗಡಿಗಳಿಗೆ ಸರ್ಕಾರ ಸೂಚಿಸಿತ್ತು. ಆ ಬಗ್ಗೆ ಸಮೀಕ್ಷೆ ನಡೆಸದ ನ್ಯಾಯಬೆಲೆ ಅಂಗಡಿಗಳ ಮಾಲಿಕರು, ಸರ್ಕಾರಿ ನೌಕರರ ಬಿಪಿಎಲ್ ಕಾರ್ಡು ಬಳಕೆ ಮಾಡಿಕೊಂಡು ಅಕ್ರಮವಾಗಿ ಆಹಾರ ಧಾನ್ಯ ಬಳಕೆ ಮಾಡಿಕೊಂಡಿದ್ದಾರೆಂದು ಆರೋಪಿಸಿದರು.
ಕೆಲ ಸರ್ಕಾರಿ ಇಲಾಖೆಗಳ ಕೆಳಹಂತದ ನೌಕರರು ಬಿಪಿಎಲ್ ಕಾರ್ಡು ಪಡೆದಿದ್ದು, ಅವುಗಳ ಮೂಲಕ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ನೆರವಾಗಲೆಂಬ ಆಶಯ ಅವರದ್ದಾಗಿದೆ. ಆದರೆ ಸದ್ಯ ಅಂಥ ಸರ್ಕಾರಿ ನೌಕರರು ಬಿಪಿಎಲ್ ಕಾರ್ಡು ಹೊಂದಿ ಅಕ್ರಮ ಎಸಗಿದ ಆರೋಪದಲ್ಲಿ ಕ್ರಿಮಿನಲ್ ಕೇಸ್ ಎದುರಿಸುವಂತಾಗಿದೆ ಎಂದು ತಿಳಿಸಿದರು.
ಕಾರಣ ಜಿಲ್ಲಾಧಿಕಾರಿ ಮಾನವೀಯತೆಯ ಆಧಾರದಲ್ಲಿ ಸರ್ಕಾರಿ ನೌಕರರು ಸದ್ಯದ ಬಿಪಿಎಲ್ ಕಾರ್ಡಿನಿಂದ ಎಪಿಎಲ್ ಕಾರ್ಡಿಗೆ ಪರಿವರ್ತಿಸಿಕೊಳ್ಳಲು ಒಂದು ತಿಂಗಳ ಕಾಲಾವಕಾಶ ನೀಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಘದ ಪ್ರಮುಖರಾದ ಎಸ್. ಹುಲಿಗೆಪ್ಪ, ಎಸ್. ವೆಂಕಟೇಶ್, ಕೆ.ಪಿ. ಅನಿಲ್ ಕುಮಾರ್, ಜರ್ನಾದನ ಹಳ್ಳಿಬೆಂಚಿ, ಚಂದ್ರು ಭಂಡಾರಿ, ಬಿ.ಆಂಜಿನೇಯ್ಯ, ಭೀಮರೆಡ್ಡಿ, ಸಿ.ಎಂ. ಗೋವಿಂದ ಸೇರಿ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.