ಮನುಜಮತ ಬಳಗದಿಂದ ದೇಣಿಗೆ ಚೆಕ್
ಕನ್ನಡಪ್ರಭ ವಾರ್ತೆ, ಸಿಂಧನೂರು, ಜು.10
ಉತ್ತರಾಖಂಡದಲ್ಲಿ ಪ್ರವಾಹ ಪೀಡಿತರಿಗಾಗಿ ಮನುಜಮತ ಬಳಗದಿಂದ ಸಂಗ್ರಹಿಸಿದ ದೇಣಿಗೆ ಚೆಕ್ಗಳನ್ನು ತಹಸೀಲ್ದಾರ್ ಬಿ.ಟಿ. ಕುಮಾರಸ್ವಾಮಿ ಅವರ ಮೂಲಕ ಪ್ರಧಾನಿ ಮಂತ್ರಿಗಳ ಪರಿಹಾರ ನಿಧಿಗೆ ರವಾನಿಸಲಾಯಿತು.
ಈ ವೇಳೆ ಮಾತನಾಡಿದ ಮನುಜಮತ ಬಳಗದ ಅಧ್ಯಕ್ಷ ಡಿ.ಎಚ್. ಕಂಬಳಿ, ಸರ್ಕಾರದ ಆದೇಶದಂತೆ ನಗದು ಸಂಗ್ರಹವನ್ನು ಕೈಬಿಟ್ಟಿದ್ದೇವೆ. ಪ್ರವಾಹ ಪೀಡಿತರಿಗಾಗಿ ದಾನಿಗಳಿಂದ ಚೆಕ್ಗಳನ್ನು ಸ್ವೀಕರಿಸಿ, ರು. 18 ಸಾವಿರ ರವಾನೆ ಮಾಡಲಾಗುತ್ತಿದೆ. ಸಂಘದಿಂದ ಕೈಲಾದಷ್ಟು ಸಹಾಯ ಮಾಡಲಾಗುತ್ತಿದೆ. ಪ್ರತಿಯೊಬ್ಬರೂ ಸಹ ಮಾನವೀಯತೆ ದೃಷ್ಟಿಯಿಂದ ನೆರೆಪೀಡಿತರಿಗೆ ಸಹಾಯಹಸ್ತ ಚಾಚಬೇಕಿದೆ ಎಂದರು.
ಈ ಸಂದರ್ಭದಲ್ಲಿ ಮನುಜಮತ ಬಳಗದ ಕಾರ್ಯದರ್ಶಿ ಬಸವರಾಜ ಬಾದರ್ಲಿ, ಸದಸ್ಯರಾದ ಶಕುಂತಲಾ ನಾಗರೆಡ್ಡಿ, ವೆಂಕನಗೌಡ ಗದ್ರಟಗಿ, ಬಿ.ಕೊಟ್ರೇಶ, ಸುಭಾನ್, ರಾಮಣ್ಣ ಹಿರೇಬೇರ್ಗಿ, ವಿರುಪಣ್ಣ ದೇವರಗುಡಿ, ಪಂಪಯ್ಯಸ್ವಾಮಿ ಅಂತರಗಂಗಿ, ಗುಂಡಪ್ಪ ಬಳಿಗಾರ, ಶಿವಣ್ಣ ಹ.ಸಣ್ಣಪ್ಪನವರ, ನಿರುಪಾದೆಪ್ಪ ವಕೀಲ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

