ಪಡಿತರ ಚೀಟಿ ಪ್ರಕ್ರಿಯೆ: ಸಂಘಟನೆ ಮನವಿ
ಮಸ್ಕಿ: ಪಟ್ಟಣದಲ್ಲಿ ಜಾರಿಯಲ್ಲಿರುವ ಪಡಿತರ ಚೀಟಿ ಭಾವಚಿತ್ರ ನೋಂದಣಿ ಪ್ರಕ್ರಿಯೆಯಿಂದ ಜನತೆಗೆ ತೊಂದರೆಯಾಗಿದ್ದು, ಪ್ರಕ್ರಿಯೆ ಸರಳಗೊಳಿಸಲು ಹೆಚ್ಚು ಕೇಂದ್ರ ತೆರೆಯಲು ಆಗ್ರಹಿಸಿ ಜಯಕರ್ನಾಟಕ ಸಂಘಟನೆ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.
ಈ ಕುರಿತು ಸಹಾಯಕ ಆಯುಕ್ತ ಯೋಗೀಶ್ ಅವರಿಗೆ ಮನವಿ ಸಲ್ಲಿಸಿದ ಸಂಘಟನೆ ಕಾರ್ಯಕರ್ತರು, ಪಡಿತರ ಚೀಟಿಗಾಗಿ ಕಳೆದ ಅನೇಕ ದಿನಗಳಿಂದ ಕೂಲಿಕಾರ್ಮಿಕರು ಹಾಗೂ ಜನತೆ ತಮ್ಮ ವೈಯಕ್ತಿಕ ಕೆಲಸ ಬಿಟ್ಟು ಕೇಂದ್ರಗಳ ಮುಂದೆ ಪಡಿತರ ಚೀಟಿ ನೋಂದಣಿಗೆ ಕಾದು ನಿಲ್ಲುವಂತಾಗಿದೆ. ಕಡಿಮೆ ಸಂಖ್ಯೆಯ ಕೇಂದ್ರಗಳ ಸ್ಥಾಪನೆಯಿಂದ ಪ್ರಕ್ರಿಯೆ ನಿಧಾನ ಗತಿಯಲ್ಲಿ ಸಾಗಿದ್ದು, ಈ ಬಗ್ಗೆ ದೂರಿದರೂ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆಂದು ಆರೋಪಿಸಿದರು. ಕೂಡಲೇ ಪಟ್ಟಣದಲ್ಲಿ ಹೆಚ್ಚುವರಿ ನೋಂದಣಿ ಕೇಂದ್ರಗಳನ್ನು ತೆರೆದು ಸಮಸ್ಯೆಯನ್ನು ಪರಿಹರಿಸಬೇಕು.ತಪ್ಪಿದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಸಂಘಟನೆಯ ಅಧ್ಯಕ್ಷ ಯಮನೂರ ಒಡೆಯರ್, ಕಿರಣ ಮುರಾರಿ, ಸಿದ್ದು ಮುರಾರಿ, ಬಸವರಾಜ ಕೆಳಗೇರಿ, ಖಾದರಬಿ ಬಳಿಗಾರ, ಗೌರಮ್ಮ, ಶಾರದಮ್ಮ, ಯಲ್ಲಮ್ಮ, ಶಿವಯ್ಯ, ಮಲ್ಲಮ್ಮ ಮತ್ತಿತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

