ರಾಯಚೂರು

ವಿವೇಕಾನಂದರ ರಥಯಾತ್ರೆ: ಅದ್ಧೂರಿ ಸ್ವಾಗತಕ್ಕೆ ಸಮಿತಿ ಕರೆ

Published On :

ಕನ್ನಡಪ್ರಭ ವಾರ್ತೆ, ಲಿಂಗಸ್ಗೂರು, ಜು.15
ಸ್ವಾಮಿ ವಿವೇಕಾನಂದರ 150ನೇ ಜಯಂತ್ಯುತ್ಸವ ಅಂಗವಾಗಿ ವಿವೇಕಾನಂದರ ರಥಯಾತ್ರೆ ಹಮ್ಮಿಕೊಳ್ಳಲಾಗಿದ್ದು, ಲಿಂಗಸ್ಗೂರು ಪಟ್ಟಣಕ್ಕೆ ಮಂಗಳವಾರ ಬೆಳೆಗ್ಗೆ 9ಕ್ಕೆ ರಥಯಾತ್ರೆ ಆಗಮಿಸಲಿದೆ. ಕಾರಣ ವಿದ್ಯಾರ್ಥಿಗಳು, ಯುವಕರು ಹಾಗೂ ಸಾರ್ವಜನಿಕರು ಅದ್ಧೂರಿಯಾಗಿ ಸ್ವಾಗತಿಸಿಕೊಳ್ಳಬೇಕೆಂದು ಸಮಿತಿಯ ಮುಖಂಡರಾದ ವೀರನಗೌಡ ಐದನಾಳ ಹಾಗೂ ಮನೋಹರರಡ್ಡಿ ಮನವಿ ಮಾಡಿದ್ದಾರೆ.
ದೇಶ, ವಿದೇಶಗಳಲ್ಲಿ ವಿವೇಕಾನಂದ ಜನ್ಮ ದಿನವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಯುವಕರಿಗೆ ಮತ್ತು ಜನಸಾಮಾನ್ಯರಿಗೆ ವಿವೇಕಾನಂದರ ಸ್ಫೂರ್ತಿಯುತ ವಿಚಾರಧಾರೆ ತಿಳಿಯಪಡಿಸುವ ಉದ್ದೇಶದಿಂದ ರಾಮಕೃಷ್ಣ ಮಠ, ರಾಮಕೃಷ್ಣ ಮಿಷನ್ ಹಾಗೂ ರಾಮಕೃಷ್ಣ ಭಾವ ಪ್ರಚಾರ ಪರಿಷತ್‌ನವರು ರಥಯಾತ್ರೆ ಕೈಗೊಂಡಿದ್ದಾರೆ. ರಾಜ್ಯದ ಎಲ್ಲ ಜಿಲ್ಲೆಗಳ ತಾಲೂಕು ಕೇಂದ್ರಗಳಲ್ಲಿ ರಥಯಾತ್ರೆ ಸಂಚರಿಸಲಿದ್ದು, ಲಿಂಗಸ್ಗೂರು ಪಟ್ಟಣದಲ್ಲಿ ಮಂಗಳವಾರ ಆಗಮಿಸಲಿದೆ.
ಪಟ್ಟಣದ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮದಲ್ಲಿ ಘನಮಠೇಶ್ವರ ಮಠದ ಗುರುಬಸವ ಶ್ರೀಗಳು, ರಾಮಕೃಷ್ಣ ಆಶ್ರಮದ ಸ್ವಾಮಿ ಮಹಾವಾಕ್ಯಾನಂದಜೀ ಮಹಾರಾಜ್, ಹುನಕುಂಟಿ ಶರಣಯ್ಯ ಶ್ರೀಗಳು, ವಿಜಯ ಮಹಾಂತೇಶ್ವರ ಮಠದ ಸಿದ್ಧಲಿಂದ ಶ್ರೀಗಳು, ಶಾಸಕ ಮಾನಪ್ಪ ವಜ್ಜಲ್, ಸಹಾಯಕ ಆಯುಕ್ತ ಟಿ.ಯೋಗೇಶ, ರಾಮಕೃಷ್ಣ ಮಠ ಹಲಸೂರು ಬೆಂಗಳೂರಿನ ಸ್ವಾಮಿ ತ್ಯಾಗೀಶ್ವರನಂದಜೀ ಮಹಾರಾಜ್, ಪ್ರಖರ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಭಾಗವಹಿಸಲಿದ್ದಾರೆ. ಕಾರಣ ಎಲ್ಲ ಶಾಲಾ, ಕಾಲೇಜು ವಿದ್ಯಾರ್ಥಿಗಳು, ಪಾಲಕರು, ಪೋಷಕರು, ಶಿಕ್ಷಕ ವೃಂದ ಸೇರಿದಂತೆ ಭಾಗವಹಿಸಬೇಕೆಂದು ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.