ರಾಯಚೂರು

ಕಾನೂನು ತರಬೇತಿ: ಅರ್ಜಿ ಆಹ್ವಾನ

Published On :

ರಾಯಚೂರು: ಜಿಲ್ಲೆಯಲ್ಲಿ ಪ್ರಸಕ್ತ ಸಾಲಿಗೆ ಪರಿಶಿಷ್ಟ ಜಾತಿಯ ಕಾನೂನು ಪದವೀಧರರಿಗೆ ಆಡಳಿತ ನ್ಯಾಯಾಧೀಕರಣ ತರಬೇತಿ ನೀಡಲು ಅರ್ಜಿ ಕರೆಯಲಾಗಿದೆ.ಅರ್ಹ ಪರಿಶಿಷ್ಟ ಜಾತಿಯ ಕಾನೂನು ಪದವೀಧರರು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಯೊಂದಿಗೆ ತಹಸೀಲ್ದಾರ್‌ರಿಂದ ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರಗಳ ಜೆರಾಕ್ಸ್ ಪ್ರತಿ ಲಗತ್ತಿಸಬೇಕು. ತರಬೇತಿ ಅವಧಿ ನಾಲ್ಕು ವರ್ಷಗಳದ್ದಾಗಿದ್ದು, ಪ್ರತಿ ತಿಂಗಳಿಗೆ 2 ಸಾವಿರ ಶಿಷ್ಯ ವೇತನ ನೀಡಲಾಗುತ್ತದೆ.ತರಬೇತಿಯನ್ನು ಅರ್ಧಕ್ಕೆ ಬಿಟ್ಟಲ್ಲಿ ಶಿಷ್ಯ ವೇತನ ಮರಳಿಸಬೇಕಾಗುತ್ತದೆ. ಅರ್ಜಿಗಳು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ಲಭ್ಯವಿದ್ದು, ಅರ್ಜಿ ಸಲ್ಲಿಸಲು ಆ.15 ಕಡೆ  ದಿನವಾಗಿದೆ. ಆಯ್ಕೆಯನ್ನು ಸಂದರ್ಶನ ಮೂಲಕ ನಡೆಸಲಾಗುತ್ತದೆ. ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳು, ರಾಯಚೂರು ಅವರಿಂದ ಪಡೆಯಲು ಕೋರಲಾಗಿದೆ.

ಎಸ್ಸೆಸ್ಸೆಲ್ಸಿ ಪರೀಕ್ಷೆ: ಸೂಚನೆ
ರಾಯಚೂರು: ಮುಂದಿನ ವರ್ಷದ ಏಪ್ರಿಲ್‌ನಲ್ಲಿ ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಖಾಸಗಿಯಾಗಿ ಹಾಜರಾಗಲು ಬಯಸುವವರು ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.ಖಾಸಗಿಯಾಗಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ತಮ್ಮ ಸಮೀಪದ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳಲ್ಲಿ ಪರೀಕ್ಷಾ ಅರ್ಜಿ ನಮೂನೆ ಭರ್ತಿ ಮಾಡಲು ಆ.12 ಕಡೆಯ ದಿನ. 2014ರ ಮಾ.1ಕ್ಕೆ 15ವರ್ಷ ಪೂರ್ಣಗೊಂಡವರು ಪರೀಕ್ಷೆಗೆ ನೋಂದಾಯಿಸಿಕೊಳ್ಳಬಹುದು.ಅಭ್ಯರ್ಥಿಗಳಿಂದ ಮಾಹಿತಿ ಪಡೆದ ಶಾಲಾ ಮುಖ್ಯಸ್ಥರು, ಅರ್ಜಿಗಳನ್ನು ದಾಖಲಾತಿಗಳೊಂದಿಗೆ ದ್ವಿಪ್ರತಿಯಲ್ಲಿ  ಆ.12ರಿಂದ ಆ.14ರವರೆಗೆ ಉಪನಿರ್ದೇಶಕರ ಕಚೇರಿಯಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು.

ನಾಳೆ ಆಷಾಢೋತ್ಸವ
ರಾಯಚೂರು: ನಗರದಲ್ಲಿ ಜು. 22ರಂದು ಭಾವಸಾರ ಕ್ಷತ್ರಿಯ ಸಮಾಜದಿಂದ ಆಷಾಢೋತ್ಸವ ಸಮಾರಂಭ  ಆಯೋಜಿಸಲಾಗಿದೆ. ಆಷಾಢೋತ್ಸವದ ಅಂಗವಾಗಿ ಅಂದು ಬೆಳಗ್ಗೆ 8ಕ್ಕೆ ನಗರದ ಲೋಹಾರವಾಡಿಯ ಹನುಮಾನ್ ಮಂದಿರದಿಂದ ವಿಠ್ಠಲ ರುಕ್ಮಿಣಿ ಭಾವಚಿತ್ರದ ಮೆರವಣಿಗೆ ಆಯೋಜಿಸಲಾಗಿದೆ. ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾ ತಂಡಗಳು ಭಾಗವಹಿಸಲಿದ್ದು, ಮೆರವಣಿಗೆಯು ವಿಠ್ಠಲ ರುಕ್ಮಿಣಿ ದೇವಸ್ಥಾನಕ್ಕೆ ತಲುಪಲಿದೆ.

ಆಧಾರ್: ನಾಳೆ ಸಭೆ
ರಾಯಚೂರು: ಎರಡನೇ ಹಂತದ ಆಧಾರ್ ಯೋಜನೆಯ ಹಿನ್ನೆಲೆಯ ಪೂರ್ವಭಾವಿ ಸಭೆಯನ್ನು ಜು.22 ರಂದು ಆಯೋಜಿಸಲಾಗಿದೆ.  ಡಿಸಿ ಕಚೇರಿ ಸಭಾಂಗಣದಲ್ಲಿ ಬೆಳಿಗ್ಗೆ 9.30ಕ್ಕೆ ಸಭೆ ನಡೆಯಲಿದೆ. ಎಲ್ಲ ಅನುಷ್ಠಾನ ಮತ್ತು ಮೇಲ್ವಿಚಾರಣಾ ಸಮಿತಿ ಅಧಿಕಾರಿಗಳು ತಪ್ಪದೇ ಸಭೆಗೆ ಹಾಜರಾಗಲು ಅಪರ ಜಿಲ್ಲಾಧಿಕಾರಿ ಎಂ. ತಿಮ್ಮಪ್ಪ ತಿಳಿಸಿದ್ದಾರೆ.

ನಾಳೆ ವಿದ್ಯುತ್ ನಿಲುಗಡೆ
ರಾಯಚೂರು: ತಾಲೂಕಿನ ಮಟಮಾರಿಯ 110 ಕೆವಿ ವಿದ್ಯುತ್ ಕೇಂದ್ರದ ಮಲಿಯಾಬಾದ್ ಮತ್ತು ವಡವಟ್ಟಿ ಮಾರ್ಗದ ಕಾಮಗಾರಿಯ ಹಿನ್ನೆಲೆಯಲ್ಲಿ ಜು.21 ರಂದು ವಿದ್ಯುತ್ ವ್ಯತ್ಯಯವಾಗಲಿದೆ.
ಬೃಹತ್ ಕಾಮಗಾರಿಯ ಹಿನ್ನೆಲೆಯಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ವತಿಯಿಂದ ಕೈಗೊಳ್ಳಲಾಗುತ್ತಿದ್ದು, ಜು.21ರ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ರಾಯಚೂರು ಗ್ರಾಮೀಣ, ಮಾನವಿ ಮತ್ತು ದೇವದುರ್ಗ ಸುತ್ತಮುತ್ತಲಿನ ಪ್ರದೇಶಗಳಿಗೆ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಕೆಪಿಟಿಸಿಎಲ್ ಪ್ರಕಟಣೆ ತಿಳಿಸಿದೆ.

28ರಂದು ಸಭೆ
ರಾಯಚೂರು: ಜಿಲ್ಲಾ ಉಪ್ಪಾರ ಸಮಾಜ ಸೇವಾ ಸಂಘದಿಂದ ಜು.28 ರಂದು ಜಿಲ್ಲಾಮಟ್ಟದ ಸಾಮಾನ್ಯ ಸಭೆಯನ್ನು ಕರೆಯಲಾಗಿದೆ ಎಂದು ಸಂಘ ತಿಳಿಸಿದೆ.
ಅಂದು ಬೆಳಿಗ್ಗೆ 11ಕ್ಕೆ ನಗರದ ಉಪ್ಪಾರವಾಡಿಯ ಶ್ರೀಲಕ್ಷ್ಮಿವೆಂಕಟೇಶ್ವರ ದೇವಸ್ಥಾನದಲ್ಲಿ ಸಭೆ ಕರೆಯಲಾಗಿದೆ. ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆಯನ್ನು ಮಾಡಲಾಗುತ್ತದೆ. ಕಾರಣ ಸಮಾಜದ ಎಲ್ಲ ಪ್ರಮುಖರು ಸಭೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಲ್. ವೀರೇಶ್ ಮನವಿ ಮಾಡಿದ್ದಾರೆ.

ಕಾಲುವೆಗೆ ಬೋಂಗಾ
ರಾಯಚೂರು: ಲಿಂಗಸ್ಗೂರು ತಾಲೂಕಿನ ಮಸ್ಕಿ ಬಳಿ ತುಂಗಭದ್ರಾ ಎಡದಂಡೆ ಕಾಲುವೆಯ 64ನೇ ಮೈಲ್‌ನ 54ನೇ ವಿತರಣೆ ಕಾಲುವೆಯಲ್ಲಿ ಶನಿವಾರ ಬೆಳಗ್ಗೆ ಬೋಂಗಾ (ರಂಧ್ರ) ಉಂಟಾಗಿ ಅಪಾರ ನೀರು ಪೋಲಾಗಿದೆ.ಎಡದಂಡೆ ಕಾಲುವೆಯ 54ನೇ ವಿತರಣೆ ಕಾಲುವೆಯಲ್ಲಿ ಬೆಳಿಗ್ಗೆ ರಂಧ್ರ ಉಂಟಾಗಿದ್ದು, ಅದರಿಂದ ನೀರು ಹೊರಹರಿದಿದ್ದು ಹೊಲಗಳಿಗೆ ನುಗ್ಗಿ ಅಲ್ಪ ಹಾನಿಯಾಗಿದೆ. ಈಚೆಗಷ್ಟೇ ತುಂಗಭದ್ರಾ ಎಡದಂಡೆ ಕಾಲುವೆಗೆ ಅಣೆಕಟ್ಟೆಯಿಂದ ನೀರು ಹರಿಸಲಾಗಿತ್ತು. ವಿತರಣೆ ಕಾಲುವೆಗೆ ರಂಧ್ರ ಉಂಟಾಗಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ನೀರಾವರಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ದುರಸ್ತಿ ಕಾರ್ಯ ಕೈಗೆತ್ತಿಕೊಂಡಿದ್ದಾರೆಂದು ಮೂಲಗಳು ತಿಳಿಸಿವೆ.

ಮದ್ಯ ನಿಷೇಧ
ರಾಯಚೂರು: ಆಂಧ್ರದಲ್ಲಿ ಪಂಚಾಯಿತಿ ಚುನಾವಣೆಗಳು ನಡೆವ ಹಿನ್ನೆಲೆ ಆಂಧ್ರದ ಗಡಿಭಾಗದ 10 ಕಿಮೀ ವ್ಯಾಪ್ತಿಯ ಕರ್ನಾಟಕದ ಗ್ರಾಮಗಳಲ್ಲಿ ಜು. 21ರಿಂದ ಮದ್ಯ ಮಾರಾಟ ನಿಷೇಧಿಸಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದು, ಜು.21ರ ಬೆಳಗ್ಗೆ 6ರಿಂದ ಜು.23ರ ಮಧ್ಯರಾತ್ರಿ 12ರವರೆಗೆ  ಮದ್ಯ ಮಾರಾಟ ನಿಷೇಧಿಸಲಾಗಿದೆ. ಈ ಅವಧಿಯಲ್ಲಿ ಎಲ್ಲಾ ಸಗಟು ಹಾಗೂ ರಿಟೈಲ್ ಮದ್ಯದ ಅಂಗಡಿ, ಬಾರ್, ರೆಸ್ಟೊರೆಂಟ್ ಮುಚ್ಚುವಂತೆ ಜಿಲ್ಲಾಧಿಕಾರಿ ಎಸ್.ಎನ್ ನಾಗರಾಜು ಸೂಚಿಸಿದ್ದಾರೆ.

ನಾಳೆಯಿಂದ ತರಬೇತಿ
ರಾಯಚೂರು: ಹುಬ್ಬಳ್ಳಿಯಲ್ಲಿ ಜು.22ರಿಂದ 27ರವರೆಗೆ ರಫ್ತು ನಿರ್ವಹಣೆ ತರಬೇತಿ ಆಯೋಜಿಸಿದ್ದು, ತರಬೇತಿಗೆ ಅಭ್ಯರ್ಥಿಗಳನ್ನು ಪ್ರಾಯೋಜಿಸಲು ಜಿಲ್ಲಾ ವಾಣಿಜ್ಯೋದ್ಯಮ ಸಂಘ ಮನವಿ ಮಾಡಿದೆ.ಜವಾಹರ ಜೈನ್ ಮತ್ತು ಕಾರ್ಯದರ್ಶಿ ತ್ರಿವಿಕ್ರಮ್ ಜೋಷಿ ಇರುವರು. ಮಾಹಿತಿಗೆ ವಿಶ್ವೇಶ್ವರಯ್ಯ ಕೈಗಾರಿಕೆ ವ್ಯಾಪಾರ ಕೇಂದ್ರ ರಾಯಪುರ ಧಾರವಾಡರನ್ನು ದೂ. 0836-2222600 ಸಂಪರ್ಕಿಸಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.