ರಾಯಚೂರು

ಜೆಸ್ಕಾಂ ನಿರ್ಲಕ್ಷ್ಯ: ವಿದ್ಯುತ್ ಸ್ಪರ್ಶದಿಂದ ಎಮ್ಮೆ ಸಾವು

Published On :

ಮುದಗಲ್: ಪಟ್ಟಣದ ಚಾವಡಿ ಕಟ್ಟೆಯ ಹಿಂಭಾಗದ ಕಂದಕದ ಬಳಿ ಇರುವ ವಿದ್ಯುತ್ ಪರಿವರ್ತಕದ ತಂತಿ ಹರಿದು ಬಿದ್ದು ವಿದ್ಯುತ್ ಸ್ಪರ್ಷಗೊಂಡಿದ್ದರಿಂದ ಎಮ್ಮೆ ಸಾವಿಗೀಡಾಗಿ ದನಗಾಯಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಪಟ್ಟಣದ ರೈತ ಸುರೇಂದ್ರಗೌಡ ಪಾಟೀಲರ ಸುಮಾರು ರು. 35ಸಾವಿರ ಬೆಲೆ ಬಾಳುವ ಎಮ್ಮೆ ಸ್ಥಳದಲ್ಲೇ ಸತ್ತಿದ್ದರೆ, ದನಗಾಯಿ ಮೈಬೂಬ ಹುಸೇನಿ ಕೂದಲೇಳೆ ಅಂತರದಲ್ಲಿ ಪಾರಾಗಿದ್ದಾನೆ.
 ವಿದ್ಯುತ್ ತಂತಿ ಹರಿದು ರಸ್ತೆಯಲ್ಲಿ ಬಿದ್ದಿದ್ದರಿಂದ ವಿದ್ಯುತ್ ನೆಲದಲ್ಲಿ ಹರಿದಿದೆ. ಮನೆಯಿಂದ ದನಗಾಯಿ ಜಮೀನಿಗೆ ಮೇಯಿಸಲು ಹೋಗುತ್ತಿರುವಾಗ ರಸ್ತೆಯಲ್ಲಿ ಬಿದ್ದಿದ್ದ ತಂತಿಯನ್ನು ತುಳಿದಿದ್ದರಿಂದ ಈ ಘಟನೆ ಸಂಭವಿಸಿದೆ.
ಪ್ರಕರಣ ದಾಖಲು: ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಠಾಣಾ ಸಬ್ ಇನ್ಸ್‌ಪೆಕ್ಟರ್ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜೆಸ್ಕಾಂ ಸಿಬ್ಬಂದಿ ವಿದ್ಯುತ್ ಕಡಿತಗೊಳಿಸಿ ಅಪಾಯವನ್ನು ತಪ್ಪಿಸಿದ್ದಾರೆ. ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ ಕುರಿತು ಸುರೇಂದ್ರಗೌಡ ಪಾಟೀಲ್ ದೂರು ನೀಡಿದ್ದಾರೆ.
ನಿರ್ಲಕ್ಷ್ಯ: ಪದೇ ಪದೇ ಈ ವಿದ್ಯುತ್ ಪರಿವರ್ತಕದಿಂದ ತಂತಿಗಳು ಹರಿದು ಬೀಳುತ್ತಲೇ ಇವೆ, ಹಂದಿ, ನಾಯಿಯಂತ ಪ್ರಾಣಿಗಳು ಸಾಯುತ್ತಲೆ ಇವೆ. ಆದ್ದರಿಂದ ರಕ್ಷಾ ಕವಚ ನಿರ್ಮಿಸಬೇಕು, ಇಲ್ಲ ಸ್ಥಳಾಂತರ ಮಾಡಬೇಕೆಂದು ಜೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಿದರು ಏನು ಪ್ರಯೋಜನ ಆಗುತ್ತಿಲ್ಲ ಎಂದು ಪಪಂ ಸದಸ್ಯ ಮಾಸೂಮ ಷರೀಫ್ ಆರೋಪಿಸಿದ್ದಾರೆ.
ಮೊಹರಂ ಸಂದರ್ಭದಲ್ಲಿ ಇಲ್ಲಿಯೇ ದೇವರ ಭೇಟಿ ನಡೆಯುತ್ತಿದ್ದು ಲಕ್ಷಾಂತರ ಭಕ್ತರು ಇಲ್ಲಿ ದರ್ಶನ ಪಡೆಯಲು ಬರುತ್ತಾರೆ. ರಕ್ಷಣೆ ಇಲ್ಲದಂತಾಗಿದೆ. ಸ್ಥಳೀಯ ಜೆಸ್ಕಾಂ ಅಧಿಕಾರಿಗೆ ಸಾಕಷ್ಟು ಮನವಿ ಮಾಡಿದರು ಏನು ಪ್ರಯೋಜನೆಯಾಗಿಲ್ಲ.
ಮಕ್ಕಳ ಆಟ: ಚಾವಡಿ ಸುತ್ತ ಮುತ್ತ ದೊಡ್ಡ ಮೈದಾನವಿದ್ದು, ಮಕ್ಕಳು ಇಲ್ಲಿಯೇ ಆಟವಾಡುತ್ತಿರುತ್ತಾರೆ. ಸಂತೆ ದಿನದಂದು ಗ್ರಾಮೀಣ ಪ್ರದೇಶದಿಂದ ಬರುವ ರೈತರು ಬಂಡಿ, ಎತ್ತು ಇಲ್ಲೆ ಕಟ್ಟುತ್ತಾರೆ.
  ಪರಿವರ್ತಕದ ಸುತ್ತಲು ಯಾವುದೇ ರಕ್ಷಣೆ ಇಲ್ಲದಿರುವುದರಿಂದ ಪ್ರಾಣಿಗಳು ಬಲಿಯಾಗುತ್ತಲೇ ಇವೆ.
 ಜೀವಬಲಿ ತೆಗೆದುಕೊಳ್ಳುವ ಮುನ್ನವೇ ಜೆಸ್ಕಾಂ ಅಧಿಕಾರಿಗಳು ಏಚ್ಚೆತ್ತುಕೊಂಡು ಪರಿವರ್ತಕದ ಸುತ್ತ ರಕ್ಷಾ ಕವಚ ನಿರ್ಮಿಸಬೇಕು, ಇಲ್ಲದಿದ್ದರೆ ಸ್ಥಳಾಂತರ ಮಾಡಬೇಕೆಂದು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.