ರಾಯಚೂರು

ತರಬೇತಿಗೆ ಅರ್ಜಿ

Published On :

ರಾಯಚೂರು: ಒಳನಾಡು ಮೀನುಗಾರಿಕೆ ತರಬೇತಿಗೆ ಭದ್ರಾವತಿಯ ಬಿ.ಆರ್. ಪ್ರಾಜೆಕ್ಟ್ ಕೇಂದ್ರದಲ್ಲಿ ಪುರುಷರಿಗೆ ತರಬೇತಿ ನೀಡಲಾಗುತ್ತಿದ್ದು ಅರ್ಹರಿಂದ ಅರ್ಜಿ ಕರೆಯಲಾಗಿದೆ.
ತರಬೇತಿಗೆ 40 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ತರಬೇತಿ ಅವಧಿ 2 ತಿಂಗಳಿನದ್ದಾಗಿದ್ದು, ಪ್ರತಿ ಅಭ್ಯರ್ಥಿಗೆ ಮಾಸಿಕ 1 ಸಾವಿರ ಶಿಷ್ಯ ವೇತನ ನೀಡಲಾಗುತ್ತದೆ. ತರಬೇತಿ ಅಪೂರ್ಣಗೊಳಿಸಿದರೆ ಶಿಷ್ಯವೇತನ ಮರಳಿ ಪಾವತಿಸಬೇಕಾಗುತ್ತದೆ. ತರಬೇತಿಗೆ ಪಾಲ್ಗೊಳ್ಳ ಬಯಸುವವರ ವಯಸ್ಸು 18 ರಿಂದ 40 ರೊಳಗಿರಬೇಕು. ಎಸ್ಸೆಸ್ಸೆಲ್ಸಿ ಪಾಸಾಗಿರಬೇಕು. ಅಂಚೆ ಮೂಲಕ ಅಥವಾ ಖುದ್ದಾಗಿ ಅರ್ಜಿಯನ್ನು ಆ.20 ರೊಳಗೆ ಸಹಾಯಕ ನಿರ್ದೇಶಕರು, ಮಿನುಗಾರಿಕೆ ತರಬೇತಿ ಕೇಂದ್ರ, ಬಿ.ಆರ್. ಪ್ರಾಜೆಕ್ಟ್ ಭದ್ರಾವತಿ, ಶಿವಮೊಗ್ಗ ಜಿಲ್ಲೆ ಇಲ್ಲಿಗೆ ಸಲ್ಲಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿ ಮತ್ತು ಅರ್ಜಿ ನಮೂನೆಗಾಗಿ ತಾಲೂಕು, ಜಿಲ್ಲಾ ಮಟ್ಟದ ಮೀನುಗಾರಿಕೆ ಇಲಾಖೆಯ ಕಚೇರಿಗಳನ್ನು ಸಂಪರ್ಕಿಸಲು ಕೋರಲಾಗಿದೆ.

ನಾಳೆ ಸಂಗೀತ ಸಮ್ಮೇಳನ
ರಾಯಚೂರು: ನಗರದಲ್ಲಿ ಗಾನಯೋಗಿ ಪಂ. ಶ್ರೀ ಪಂಚಾಕ್ಷರಿ ಗವಾಯಿಗಳ ಪುಣ್ಯತಿಥಿ ಟ್ರಸ್ಟ್ ವತಿಯಿಂದ ಜು.27 ರಂದು ಪುಣ್ಯಸ್ಮರಣೆ ನಿಮಿತ್ತ 34ನೇ ವರ್ಷದ ಸಂಗೀತ ಸಮ್ಮೇಳನ ಆಯೋಜಿಸಲಾಗಿದೆ.
ಅಂದು ನಗರದ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಸಂಜೆ 7ರಿಂದ ಅಹೋರಾತ್ರಿ ಸಂಗೀತ ಸಮ್ಮೇಳನವನ್ನು ಆಯೋಜಿಸಿದ್ದು, ಖ್ಯಾತ ಹಿಂದೂಸ್ತಾನಿ ಗಾಯಕರಾದ ಸಂಗೀತಾ ಕಟ್ಟಿ ಕುಲಕರ್ಣಿ, ವಿಜಯ ದೇಶಪಾಂಡೆ, ರೇವಯ್ಯ ವಸ್ತರಮಠ, ಮಂಜುನಾಥ ಭಜಂತ್ರಿ, ರಮೇಶ್ ಕೊಲ್ಕುಂದಿ, ರಾಗಿಣಿ ವಿಶ್ವನಾಥ್ ಹುದ್ಲೀಕರ್ ಸೇರಿ ಅನೇಕರು ಸಂಗೀತ ಕಾರ್ಯಕ್ರಮ ನೀಡಲಿದ್ದು, ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಲು ಟ್ರಸ್ಟ್‌ನ ಅಧ್ಯಕ್ಷ ಸೂಗೂರೇಶ ಅಸ್ಕಿಹಾಳ ಮತ್ತಿತರರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.