ರಾಯಚೂರು

ಅದ್ಧೂರಿಯಾಗಿ ಜರುಗಿದ ಟೀಕಾರಾಯರ ಪಂಚಮಿ

Published On :

ಸಿಂಧನೂರು: ತಾಲೂಕಿನ ತುರ್ವಿಹಾಳ ಗ್ರಾಮದ ರಾಘವೇಂದ್ರಸ್ವಾಮಿ ಮಠದಲ್ಲಿ ಟೀಕಾರಾಯರ ಪಂಚಮಿ ಅದ್ಧೂರಿಯಾಗಿ ಜರುಗಿತು.
ಟೀಕಾರಾಯರ ಆರಾಧನೆ ಅಂಗವಾಗಿ ಗುರುರಾಯರು ಹಾಗೂ ಟೀಕಾರಾಯರಿಗೆ ಪಂಚಾಮತಾಭಿಷೇಕ, ಅಷ್ಟೋತ್ತರ, ವಿಶೇಷ ಪೂಜೆ, ಹಸ್ತೋದಕ, ನೈವೇದ್ಯ ನಡೆದವು. ಜಯತೀರ್ಥರ ಕುರಿತು ಗುರುರಾಜ ಆಚಾರ್ಯ ಕಲ್ಲೂರು ಅವರು ವಿಶೇಷ ಉಪನ್ಯಾಸ ನೀಡಿದರು. ನಂತರ ಭಕ್ತರಿಗೆ ತೀರ್ಥ ಪ್ರಸಾದದ ವ್ಯವಸ್ಥೆಯನ್ನು ವಿ.ಎಸ್. ಕುಲಕರ್ಣಿ ಕಲ್ಪಿಸಿದ್ದರು.
ಕಾರ್ಯಕ್ರಮದಲ್ಲಿ ತುರ್ವಿಹಾಳ ಗುರುರಾಜ ಸೇವಾ ಸಮಿತಿ ಅಧ್ಯಕ್ಷ ಶೇಷಗಿರಿರಾವ್ ಕುಲಕರ್ಣಿ, ಕಾರ್ಯದರ್ಶಿ ಅನಂತರಾವ್ ಕಲಕರ್ಣಿ ಧಡೇಸ್ಗೂರು, ನಿವೃತ್ತ ತಹಸೀಲ್ದಾರ್ ನರಸಿಂಗರಾವ್ ಸಂಗಾಪುರ, ಮಠಾಧಿಕಾರಿ ವೆಂಕಟಗಿರಿದಾಸ, ಎಂ.ಕೆ. ಗೌರಕರ್, ಮನೋಹರರಾವ್ ಕುಲಕರ್ಣಿ, ಜಿ.ವಿ. ಜೋಷಿ, ಶೇಷಶಯನ ಜೋಷಿ, ಶ್ರೀಧರ ಕುಲಕರ್ಣಿ, ರಾಘವೇಂದ್ರ ಕುಲಕರ್ಣಿ  ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.