ರಾಯಚೂರು

ಆಯುರ್ವೇದ ಉತ್ಪನ್ನ ಬಳಸಿ: ಗಣೇಶ ಸಲಹೆ

Published On :

ಸಿಂಧನೂರು: ಮನುಷ್ಯನಲ್ಲಿರುವ ರೋಗ ನಿರೋಧಕ ಶಕ್ತಿಗಳನ್ನು ಹೆಚ್ಚಿಸುವ ಆರ್ಯುರ್ವೇದ ಉತ್ಪನ್ನಗಳನ್ನು ಹೆಚ್ಚು ಬಳಕೆ ಮಾಡಿಕೊಳ್ಳಬೇಕೆಂದು ಬೆಂಗಳೂರಿನ ಮಂಜುನಾಥ ನ್ಯಾಚುರಲ್ ಹರ್ಬಲ್ಸ್‌ನ ಗಣೇಶ ಕರೆ ನೀಡಿದರು. ಸಾಧನಾ ಸ್ವಯಂ ಸೇವಾ ಸಂಸ್ಥೆಯ ಆಶ್ರಯದಲ್ಲಿ ವೆಂಕಟೇಶ್ವರ ಕ್ಯಾಂಪಿನಲ್ಲಿರುವ ಸ್ವಯಂ- ಉದ್ಯೋಗ ತರಬೇತಿ ಕೇಂದ್ರದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣೆ ಹಾಗೂ ಸಲಹಾ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾಡನಾಡಿದರು. ಮಂಜುನಾಥ ನ್ಯಾಚುರಲ್ ಹರ್ಬಲ್ಸ್ 48 ವಿವಿಧ ಗಿಡಮೂಲಿಕೆಗಳ ರಸಗಳಿಂದ ವಿವಿಧ ವಸ್ತುಗಳನ್ನು ಉತ್ಪಾದಿಸಿದೆ. ಮಧುಮೇಹ, ಸಂಧಿನೋವು, ತಲೆನೋವು ಮೊದಲಾದ ರೋಗಗಳಿಗೆ ನಮ್ಮ ಉತ್ಪನ್ನಗಳ ಉಪಯೋಗದಿಂದ ಪರಿಹಾರ ಸಿಗುತ್ತದೆ ಎಂದರು. ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ತಾಪಂ ಸದಸ್ಯರಾದ ಸುಬ್ಬರಾವ್ ಗಾಂಧಿನಗರ ಅವರು ಹಳ್ಳಿಗಳಿಗೆ ಬಂದು ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳುವುದರಿಂದ ಸಮುದಾಯಕ್ಕೆ  ಹೆಚ್ಚು ಉಪಯುಕ್ತವಾಗುತ್ತದೆ ಎಂದರು. ಸಾಧನಾ ಸಂಸ್ಥೆಯ ಕಾರ್ಯದರ್ಶಿ ಶರಣಪ್ಪ ಬರಸಿ ವಕೀಲರು ಮಾತನಾಡಿದರು. ಗ್ರಾಪಂ ಸದಸ್ಯರಾದ ವೀರನಗೌಡ, ಕೃಷ್ಣಮೂರ್ತಿ ಶೆಟ್ಟಿ, ತರಬೇತಿದಾರರಾದ ರೇಣುಕ, ನವೀನ, ಸಂಪನ್ಮೂಲ ಶಿಕ್ಷಕಿಯರಾದ ವಿಜಯಲಕ್ಷ್ಮೀ, ಪದ್ಮಾ ಸಿಂಧನೂರು, ಬಾಗಲಕೋಟೆಯ ಶೇಖರ್, ಸಂದೀಪ್, ನಾಗರಾಜ ಇದ್ದರು. ಯೋಜನಾ ಸಂಯೋಜಕ ಆಂಜನೇಯ ಸ್ವಾಗತಿಸಿದರು. ಸಂಯೋಜಕ ಲಕ್ಷ್ಮಣ ವಂದಿಸಿದರು.
ಬಸ್ ಸೌಕರ್ಯ ಕಲ್ಪಿಸಿ
ಸಿಂಧನೂರು: ತಾಲೂಕಿನ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಬೆಳಗಿನ ಜಾವ ಸಮಯಕ್ಕೆ ಸರಿಯಾಗಿ ಬಸ್ ಸೌಕರ್ಯ ಒದಗಿಸಬೇಕೆಂದು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನ ಕಾರ್ಯಕರ್ತರು ಸಾರಿಗೆ ವ್ಯವಸ್ಥಾಪಕ ಕರೇಗೌಡ ಮುಕ್ಕುಂದಿ ಅವರನ್ನು ಒತ್ತಾಯಿಸಿದರು. ಬಸ್ ಇಲ್ಲದೆ ಇರುವುದರಿಂದ ಶಾಲಾ- ಕಾಲೇಜುಗಳಿಗೆ ಸರಿಯಾದ ಸಮಯಕ್ಕೆ ತೆರಳಲು ಸಮಸ್ಯೆ ಎದುರಾಗಿದೆ. ಕೂಡಲೇ ವ್ಯವಸ್ಥಾಪಕರು ಈ ಬಗ್ಗೆ ಗಮನಹರಿಸಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅಗತ್ಯ ಬಸ್ ಸೌಲಭ್ಯ ಒದಗಿಸಿಕೊಡಬೇಕೆಂದು ಎಬಿವಿಪಿ ಕಾರ್ಯಕರ್ತರು ಒತ್ತಾಯಿಸಿದರು. ಮುಖಂಡರಾದ ಮಹಾಂತೇಶ, ಮಂಜುನಾಥ, ಅಮರೇಶ ಗೊಂದಿ ಮತ್ತಿತರರು ಇದ್ದರು.
ವಿದ್ಯುತ್ ವ್ಯತ್ಯಯ
ರಾಯಚೂರು: ಕೆಪಿಟಿಸಿಎಲ್ ವತಿಯಿಂದ ಮಸ್ಕಿ- ಕವಿತಾಳ 110 ಕೆವಿ ಮಾರ್ಗದಲ್ಲಿ ತುರ್ತು ದುರಸ್ತಿ ಕೈಗೊಳ್ಳುವ ಹಿನ್ನೆಲೆ ಆ. 1ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಆ.1ರ ಬೆಳಗ್ಗೆ 11ರಿಂದ ಮಧ್ಯಾಹ್ನ 3ರ ವರೆಗೆ 110 ಕೆವಿ ವಿದ್ಯುತ್ ಕೇಂದ್ರದ ವ್ಯಾಪ್ತಿಯ ಕವಿತಾಳ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಗ್ರಾಮಗಳ ಗ್ರಾಹಕರು ಸಹಕರಿಸುವಂತೆ ಕೆಪಿಟಿಸಿಎಲ್ ಮನವಿ ಮಾಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.