ಪಪಂ ಮಳಿಗೆಗೆ ಗುದ್ದಲಿ ಪೂಜೆ
ಮುದಗಲ್: ಸ್ಥಳೀಯ ಪಟ್ಟಣ ಪಂಚಾಯಿತಿಯಿಂದ ನಿರ್ಮಿಸಲಾಗುತ್ತಿರುವ ವಾಣಿಜ್ಯ ಮಳಿಗೆಗಳ ಗುದ್ದಲಿ ಪೂಜೆಯನ್ನು ಶಾಸಕ ಮಾನಪ್ಪ ವಜ್ಜಲ್ ನೆರವೇರಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ, 2010-11ನೇ ಸಾಲಿನ ಎಸ್ಎಫ್ಸಿ ಯೋಜನೆಯಡಿ ಮಂಜೂರಾದ 21.90 ಲಕ್ಷ, 2011-12 ನೇ ಸಾಲಿನಲ್ಲಿ ಮಂಜೂರಾದ ಬಿ.ಆರ್.ಜಿ.ಎಪ್. ಯೋಜನೆಯ 16 ಲಕ್ಷ ವೆಚ್ಚದಲ್ಲಿ ಓಟ್ಟು 22 ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗುತ್ತದೆ.
ಪಟ್ಟಣದ ಸೌಂದರ್ಯ ಮತ್ತು ಹೆಚ್ಚಿನ ಆದಾಯವಾಗಿ ಮೂಲ ಸೌಲಭ್ಯಗಳನ್ನು ನೀಡಲು ಸಹಕಾರಿಯಾಗಿತ್ತದೆ ಎಂದರು. ವ್ಯಾಪಾರಿಗಳಿಗೂ ಹೆಚ್ಚಿನ ಅನುಕೂಲವಾಗುತ್ತದೆ. ಈ ಹಿಂದೆ ಡಬ್ಬಾ ಅಂಗಡಿಗಳು ಸುಟ್ಟಿದ್ದು, ಅವರಿಗೂ ಅನೂಕೂಲ ಮಾಡಲಾಗುತ್ತದೆ ಎಂದರು.
ಪಟ್ಟಣದ ಅಭಿವೃದ್ಧಿಗಾಗಿ ಸರ್ಕಾರದಿಂದ ಮುದಗಲ್ಗೆ 2 ಕೋಟಿ, ಹಟ್ಟಿಗೆ 2, ಲಿಂಗಸ್ಗೂರು 5 ಕೋಟಿ ಪ್ಯಾಕೇಜ್ ಹಣ ನೀಡಲಾಗುತ್ತದೆ ಎಂದರು. ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ವಿದ್ಯುತ್ ಕಂಬಗಳಿಗೆ ಪುನಾ ದುರಸ್ತಿ ಗೊಳಿಸಿ ಬೆಳಕು ಮಾಡಲಾಗುತ್ತದೆ.
ಹೈ-ಕ ಭಾಗದ ಜನರಿಗೆ ಅನುಕೂಲವಾಗುವಂತೆ 371(ಜೆ) ಜಾರಿಗೆ ತರಲು ಸರ್ಕಾರಕ್ಕೆ ಒತ್ತಾಯಿಸಲಾಗುತ್ತದೆ ಎಂದರು. ಈ ಭಾಗದ ಅನೇಕ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಕೂಡಲೇ ನೇಮಕ ಮಾಡುವಂತೆ ಒತ್ತಾಯಿಸಲಾಗುತ್ತದೆ ಎಂದರು.
ಮುದಗಲ್ ತಾಲೂಕು ಕೇಂದ್ರವನ್ನಾಗಿ ಮಾಡಲು ಸಂಬಂಧಿಸಿದ ಸಚಿವರಿಗೆ ಒತ್ತಾಯಿಸಲಾಗುತ್ತದೆ. ಈ ಬಗ್ಗೆ ಹೋರಾಟ ಮಾಡುವ ಮೂಲಕ ಸರ್ಕಾರದ ಗಮನ ಹರಿಸಲು ಪ್ರಯತ್ನಿಸುವುದಾಗಿ ತಿಳಿಸಿದರು. ಮುದಗಲ್ ಪಟ್ಟಣದ ಐತಿಹಾಸಿಕ ಕೋಟೆ ಉತ್ಸವ ಮಾಡಲು ಅಧಿಕಾರಿಗಳೊಂದಿಗೆ, ಸಚಿವರೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.
ಆಡಳಿತಾಧಿಕಾರಿ ತಹಸೀಲ್ದಾರ್ ಮಹಾಜನ್, ಮುಖ್ಯಾಧಿಕಾರಿ ಎಂ. ವಿಜಯ ಲಕ್ಷ್ಮೀ, ಎಪಿಎಂಸಿ ಉಪಾಧ್ಯಕ್ಷ ಎಸ್.ಆರ್.ರಸೂಲ್, ಅಮೀರಬೇಗ ಉಸ್ತಾದ, ಪಪಂ ಸದಸ್ಯ ವಿರೇಶ ವಡ್ಡರ, ಅಬ್ದುಲ್, ಹೇಮಂತ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

