ರಾಯಚೂರು

'ಏಕಾಗ್ರತೆಯಿಂದ ತಂಬಾಕು ಸೇವನೆ ತ್ಯಜಿಸಿ'

Published On :

ಸಿಂಧನೂರು: ಮನಸ್ಸಿನ ಏಕಾಗ್ರತೆ ಹಾಗೂ ದೃಢ ನಿರ್ಧಾರದಿಂದ ತಂಬಾಕು ಸೇವನೆ ಬಿಡಲು ಸಾಧ್ಯ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ ಸಲಹೆ ನೀಡಿದರು.
ಸರ್ಕಾರಿ ಶಿಕ್ಷಕರ ತರಬೇತಿ ಸಂಸ್ಥೆ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶೇಷ ವಾರ್ಷಿಕ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರದಲ್ಲಿ ಅವರು ಮಾತನಾಡಿದರು. ತಂಬಾಕನ್ನು ಜಗಿಯುವ ಹಾಗೂ ಧೂಮಪಾನದಿಂದ ಪ್ರತಿ ವರ್ಷ ಜಾಗತಿಕವಾಗಿ 5.4 ಮಿಲಿಯನ್ ಜನ ಮರಣ ಹೊಂದುತ್ತಿದ್ದಾರೆ. ಇದರಲ್ಲಿ ಶೇ. 70ರಷ್ಟು ಜನ 30ರಿಂದ 69 ವರ್ಷದವರು. ಭಾರತದಲ್ಲಿ ಶೇ.90 ರಷ್ಟು ಜನರ ಬಾಯಿ ಕ್ಯಾನ್ಸರ್‌ಗೆ ತಂಬಾಕು ನೇರ ಕಾರಣವಾಗಿದೆ ಎಂದರು.
ವಿಷಕಾರಕಗಳ ಮಿಶ್ರಣ: ಧೂಮಪಾನದ ತಂಬಾಕಿನ ಉತ್ಪನ್ನಗಳಲ್ಲಿ ಅಮೋನಿಯಾ, ಅರ್ಸೆನಿಕ್, ಕಾರ್ಬನ್ ಮೊನಾಕ್ಸೈಡ್, ಹೈಡ್ರೋಜನ್ ಸೈನೈಡ್, ನಾಫ್ತಾಲಿನ್, ನಿಕೋಟಿನ್, ಟಾರ್, ವಿಕಿರಣವುಂಟು ಮಾಡಬಲ್ಲ ಮಿಶ್ರಣಗಳಿವೆ. ಇಂತಹ ದುಶ್ಚಟಗಳಿಂದ ಹೊರಬಂದರೆ ಭಾರತದಲ್ಲಿ ಪ್ರತಿದಿನ ಮರಣ ಹೊಂದುತ್ತಿರುವ ಪೈಕಿ 2200ಕ್ಕೂ ಹೆಚ್ಚು ಜನರನ್ನು ಉಳಿಸಬಹುದಾಗಿದೆ ಎಂದರು.
ದುಷ್ಪರಿಣಾಮಗಳು: ಡಾ. ಬಿ.ವಿ. ಪುರಾಣಮಠ ಮಾತನಾಡಿ, ತಂಬಾಕಿನ ಕಾರಣದಿಂದ ಹೃದಯ, ಶ್ವಾಸಕೋಶದ ಕಾಯಿಲೆಗಳು, ಕಡಿಮೆ ತೂಕದ ಮಕ್ಕಳ ಜನನ, ಮೆದುಳಿನ ಸಂಕೋಚನ, ಅಲ್ಜೈಮರ ಕಾಯಿಲೆ, ಲಕ್ವಾ, ನೆನಪಿನ ಶಕ್ತಿ ಕುಂದುವುದು ಮೊದಲಾದ ದುಷ್ಪರಿಣಾಮಗಳುಂಟಾಗುತ್ತವೆಂದರು.
ಪ್ರಶಿಕ್ಷಕ ಗಂಗಾಧರ ಹೀರೆಮಠ ಮಾತನಾಡಿ, ತಂಬಾಕು ತ್ಯಜಿಸಲು ನಡವಳಿಕೆ ಚಿಕಿತ್ಸೆ, ಫಾರ್ಮಕೋಥೆರಪಿ, ಕೋಲ್ಡ್ ಟರ್ಕಿ ವಿಧಾನಗಳ ಮೂಲಕ ಮಾದಕ ಹಾಗೂ ಮದ್ಯವ್ಯಸನ ಮುಕ್ತ ಕೇಂದ್ರಗಳಲ್ಲಿ ಅವಕಾಶಗಳಿವೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎನ್ನೆಸ್ಸೆಸ್ ಯೋಜನಾಧಿಕಾರಿ ಎಸ್.ಎಸ್. ಹಿರೇಮಠ ವಹಿಸಿದ್ದರು. ಸರಸ್ವತಿ ಲೋಕರೆ ಪ್ರಾರ್ಥಿಸಿದರು. ಮಂಜುಳ ಎಂ. ಸ್ವಾಗತಿಸಿದರು. ಗೀತಾಸಿಂಗ್ ಕಾರ್ಯಕ್ರಮ ನಿರೂಪಿಸಿದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.