ಜಿಲ್ಲಾ ಅಹಿಂದ ಪದಾಧಿಕಾರಿಗಳ ಆಯ್ಕೆ
ರಾಯಚೂರು: ಅಲ್ಪಸಂಖ್ಯಾತರ, ಹಿಂದುಳಿದವರ, ದಲಿತರ ಒಕ್ಕೂಟದ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳನ್ನು ನೇಮಿಸಲಾಗಿದೆ. ಈ ಕುರಿತು ಪ್ರಕಟಣೆ ನೀಡಿರುವ ಅಹಿಂದ ಸಂಘಟನೆಯ ಜಿಲ್ಲಾಧ್ಯಕ್ಷ ದಿ. ರಾಮಚಂದ್ರರೆಡ್ಡಿ ಅವರು, ಸಂಘಟನೆಯ ಗೌರವಾಧ್ಯಕ್ಷರಾಗಿ ವೈ.ಬಿ. ಪಾಟೀಲ್, ಕಾರ್ಯಾಧ್ಯಕ್ಷರಾಗಿ ಕಡಗೋಲ್ ಶರಣಪ್ಪ, ಹಿರಿಯ ಉಪಾಧ್ಯಕ್ಷರಾಗಿ ಅಮೀನುದ್ದೀನ್ ವಕೀಲರು, ಪ್ರಧಾನ ಕಾರ್ಯದರ್ಶಿ ರಾಮು, ಕಾರ್ಯದರ್ಶಿ ಕೆ.ನರಸಿಂಹಲು, ಉಪಾಧ್ಯಕ್ಷ ಎ.ವಿಜಯರಾಜ್, ಯು. ಭೀಮರೆಡ್ಡಿ, ಮಲ್ಲಯ್ಯ ಮೈತ್ರಿ, ಖಜಾಂಚಿ ಸತ್ಯನಾರಾಯಣ (ಗನಿ ಸತ್ಯಪ್ಪ) ಹಾಗೂ ಸಂಘಟನಾ ಕಾರ್ಯದರ್ಶಿಗಳಾಗಿ ಈಶ್ವರಸಿಂಗ್ ಠಾಕೂರ್, ಮೇಘನಾಥ ಯಾದವ್, ವೈ. ಚಂದ್ರಶೇಖರ್ ರೆಡ್ಡಿ ಅವರನ್ನು ನೇಮಿಸಲಾಗಿದೆ ಎಂದರು.
ಎಐಟಿಯುಸಿ ಸಂತಾಪ
ಸಿಂಧನೂರು: ಎಐಟಿಯುಸಿ ನೇತೃತ್ವದ ಅಂಗನವಾಡಿ ಕಾರ್ಯಕರ್ತೆಯರ ಫೆಡರೇಶನ್ ಹಾಗೂ ಸಹಾಯಕಿಯರ ಫೆಡರೇಶನ್ ರಾಜ್ಯ ಸಂಘಟನಾ ಕಾರ್ಯದರ್ಶಿ ಪುಟ್ಟಲಕ್ಷ್ಮೀ ನಿಧನಕ್ಕೆ ತಾಲೂಕು ಎಐಟಿಯುಸಿ ಮುಖಂಡರು ಸಭೆ ಸೇರಿ ಸಂತಾಪ ವ್ಯಕ್ತಪಡಿಸಿದ್ದಾರೆ. ಅಂಗನವಾಡಿ ನೌಕರರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುತ್ತಿದ್ದ ಪುಟ್ಟಲಕ್ಷ್ಮಿ ತಮ್ಮ ಜೀವನದುದ್ದಕ್ಕೂ ಶೋಷಿತರ, ದುಡಿಯುವ ವರ್ಗದ ಧ್ವನಿಯಾಗಿದ್ದರು. ಜನಪರ ಚಿಂತಕಿಯಾಗಿದ್ದ ಅವರ ನಿಧನದಿಂದ ಎಡ ಸಂಘಟನೆಗಳಿಗೆ ತುಂಬಲಾರದ ನಷ್ಟವಾಗಿದೆ ಎಂದು ಸಂತಾಪ ಸಭೆಯಲ್ಲಿ ಎಐಟಿಯುಸಿ ತಾಲೂಕ ಗೌರವಧ್ಯಕ್ಷ ವೆಂಕನಗೌಡ ಗದ್ರಟಗಿ ಎಂದು ಹೇಳಿದರು. ಸಭೆ ಅಧ್ಯಕ್ಷತೆಯನ್ನು ವಹಿಸಿದ್ದ ಸಿಪಿಐ ಜಿಲ್ಲಾ ಕಾರ್ಯದರ್ಶಿ ಭಾಷುಮಿಯಾ ಮಾತನಾಡಿ, ಮಹಿಳಾ ಸಂಘಟನೆಗಳಲ್ಲಿ ನಿರಂತರವಾಗಿ ಹೋರಾಟಗಳನ್ನು ಮಾಡುತ್ತಿದ್ದ ಅವರು ತಮ್ಮ ಜೀವಿತಾವಧಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರನ್ನು ಕಾಯಂಗೊಳಿಸಲು ರಾಜ್ಯದಲ್ಲಿ ಎಲ್ಲಿಯೇ ಚಳವಳಿ, ಪ್ರತಿಭಟನೆ, ಧರಣಿ, ಮುತ್ತಿಗೆ, ವಿಧಾನಸೌಧ ಚಲೋ ನಡೆದರು ಪಾಲ್ಗೊಳ್ಳುತ್ತಿದ್ದರು ಎಂದು ಗುಣಗಾನ ಮಾಡಿದರು. ಸಭೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಸಹಾಯಕರ ಜಿಲ್ಲಾಧ್ಯಕ್ಷ ಡಿ.ಎಚ್. ಕಂಬಳಿ, ಮುಖಂಡರಾದ ತಿಪ್ಪಯ್ಯ ಶೆಟ್ಟಿ, ಚಂದ್ರಶೇಖರ ಕ್ಯಾತ್ನಟ್ಟಿ, ಯಮನಮ್ಮ ಮರಾಠಿ, ಸರಸ್ವತಿ, ಗಿರಿಜಮ್ಮ, ಅಮರಮ್ಮ, ಸುಲೋಚನಾ, ಶೇಖಮ್ಮ, ಶರಣಪ್ಪ, ಚನ್ನಪ್ಪ ಮತ್ತಿತರರು ಭಾಗವಹಿಸಿದ್ದರು.
ಸಮಿತಿಗೆ ಆಯ್ಕೆ
ರಾಯಚೂರು: ಕರ್ನಾಟಕ ಜನಜಾಗೃತಿ ಸಮಿತಿ (ಪಿ.ಯೇಸಪ್ಪ ಸ್ಥಾಪಿತ)ಯ ಮಾನವಿ ತಾಲೂಕು ಘಟಕದ ಪದಾಧಿಕಾರಿಗಳನ್ನು ನೇಮಿಸಲಾಗಿದೆ.ಈ ಕುರಿತು ಪ್ರಕಟಣೆ ನೀಡಿರುವ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಸ್. ಲಿಂಗಣ್ಣ ಮಾಡಗಿರಿ ಅವರು, ಜಿಲ್ಲಾ ಸಮಿತಿ ಸಭೆ ಬಸವರಾಜ ನಕ್ಕುಂದಿ ಅಧ್ಯಕ್ಷತೆಯಲ್ಲಿ ಮಾನವಿ ತಾಲೂಕು ಘಟಕಕ್ಕೆ ಅಧ್ಯಕ್ಷರಾಗಿ ನಾಗೇಂದ್ರ ಹೊಕ್ರಾಣಿ, ಉಪಾಧ್ಯಕ್ಷ ಶಿವಪ್ಪ, ಪ್ರಧಾನ ಕಾರ್ಯದರ್ಶಿ ಹುಚ್ಚಪ್ಪ, ಸಂಘಟನಾ ಕಾರ್ಯದರ್ಶಿ ಅಂಬ್ರೇಶ್, ಕಾರ್ಯದರ್ಶಿ ರಾಜೇಂದ್ರ ಕಲ್ಲೂರು ಹಾಗೂ ಕಾರ್ಯಾಧ್ಯಕ್ಷರಾಗಿ ಸುಭಾಷ್ ನೇಮಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

